Gold Price Today : ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ಬೆಲೆ ?

Gold Price Today : ಇಂದು  ಮಾರುಕಟ್ಟೆ ಬೆಲೆ ಪ್ರಕಾರ  ಎಷ್ಟಿದೆ ನೋಡೋಣ ಚಿನ್ನ ಬೆಳ್ಳಿ ದರ.. 

Written by - Ranjitha R K | Last Updated : Jul 19, 2022, 07:54 AM IST
  • ಚಿನ್ನದ ಬೆಲೆಯಲ್ಲಿ ಬದಲಾವಣೆ ಇಲ್ಲ
  • ಬೆಳ್ಳಿ ಬೆಲೆ ಏರಿಕೆ
  • ಇಂದಿನ ದರ ಎಷ್ಟು ತಿಳಿಯಿರಿ
Gold Price Today : ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ಬೆಲೆ ? title=
Gold Price Today (file photo)

ಬೆಂಗಳೂರು : Gold Price Today: ನಿನ್ನೆ ಸ್ವಲ್ಪ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ನಿನ್ನೆ ಬಂಗಾರದ ಬೆಲೆಯಲ್ಲಿ 10 ರೂ.ಗಳಷ್ಟು ಇಳಿಕೆಯಾಗಿತ್ತು. ಇಂದಿನ ಬೆಲೆಯ ಪ್ರಕಾರ 24 ಕ್ಯಾರೆಟ್ ಚಿನ್ನದ ಬೆಲೆ 50.390 ರೂ. ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46,190 ರೂ. ಆಗಿದೆ.

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ       22 ಕ್ಯಾರೆಟ್ ಚಿನ್ನದ ಬೆಲೆ    24 ಕ್ಯಾರೆಟ್ ಚಿನ್ನದ ಬೆಲೆ
 ಚೆನ್ನೈ 46,880 51,140
ದೆಹಲಿ 46,190 50,390
ಮುಂಬಯಿ 46,190 50,390
ಕೋಲ್ಕತ್ತಾ 46,190 50,390
ಬೆಂಗಳೂರು 46,290 50,100
ಹೈದರಾಬಾದ್ 46,190 50,390
ಕೇರಳ 46,190 50,390

ಇದನ್ನೂ ಓದಿ : Edible Oil Price Cut: ಶ್ರೀಸಾಮಾನ್ಯರಿಗೊಂದು ಭಾರಿ ಸಂತಸದ ಸುದ್ದಿ, ಅಡುಗೆ ಎಣ್ಣೆ ಬೆಲೆಯಲ್ಲಿ ಲೀಟರ್ ಗೆ ರೂ.30 ಇಳಿಕೆ

ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಇಂದು 400 ರೂಪಾಯಿಯಷ್ಟು ಏರಿಕೆಯಾಗಿದೆ. ಗುಡ್ ರಿಟರ್ನ್ ಮಾಹಿತಿ ಪ್ರಕಾರ ಈ ಲೇಖನ ಬರೆಯುವ ಹೊತ್ತಿಗೆ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.

ನಗರ   ಇಂದಿನ ಬೆಳ್ಳಿ ದರ 
 ಚೆನ್ನೈ 61,700
ದೆಹಲಿ 56,000
ಮುಂಬಯಿ 56,000
ಕೋಲ್ಕತ್ತಾ 56,000
ಬೆಂಗಳೂರು 61,700
ಹೈದರಾಬಾದ್ 61,700
ಕೇರಳ 61,700

ಇದನ್ನೂ ಓದಿ : Mahindra Scorpioಯಿಂದ Boleroವರೆಗೆ 1.79 ಲಕ್ಷ ರಿಯಾಯಿತಿ ದರದಲ್ಲಿ ಸಿಗುತ್ತಿವೆ ಈ ಕಾರುಗಳು

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ  ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News