ಹೊಸದಿಲ್ಲಿ: ಮಾರ್ಚ್ ಆರಂಭದಿಂದಲೂ ಬಂಗಾರದ ಬೆಲೆಯಲ್ಲಿ ಗಣನೀಯ ಕುಸಿತ ಕಂಡಿದೆ. ಕಳೆದ ವಾರಪೂರ್ತಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ, ಈ ವಾರವೂ ಇಳಿಕೆಯ ಹಾದಿಯಲ್ಲೇ ಮುಂದುವರಿದಿದೆ. ಸೋಮವಾರ ಕೂಡ ಚಿನ್ನದ ಬೆಲೆ ಇಳಿಕೆಯಾಗಿದ್ದು, ಸಾವರ್ಕಾಲಿಕ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಬರೋಬ್ಬರಿ 11,500 ರೂಪಾಯಿ ಇಳಿಕೆಯಾಗಿದೆ. ಇದು ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದ್ದರೆ, ಚಿನ್ನಬೆಳ್ಳಿ ಮಾರುಕಟ್ಟೆಯಲ್ಲಿ ಒತ್ತಡಕ್ಕೆ ಕಾರಣವಾಗಿದೆ.
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾದಲ್ಲಿ ಸೋಮವಾರ ಕೂಡ ಶುದ್ಧ ಚಿನ್ನ(Gold Price)ದ ಬೆಲೆಯಲ್ಲಿ ಶೇ.0.07ರಷ್ಟು ಇಳಿಕೆಯಾಗಿದ್ದು, ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ₹44,653ಕ್ಕೆ ಇಳಿದಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಶೇ.1.3ರಷ್ಟು ಏರಿಕೆಯಾಗಿದ್ದು, 1 ಕೆಜಿ ಬೆಳ್ಳಿಯ ಬೆಲೆ ₹66,465ಕ್ಕೆ ನಿಗದಿಯಾಗಿದೆ.
Price hike : ಪೆಟ್ರೋಲ್ ಡಿಸೇಲ್ ನಂತರ ಅಡುಗೆ ಎಣ್ಣೆ ಬೆಲೆಯೂ ದುಬಾರಿ
2021ರ ಆರಂಭದಲ್ಲಿದ್ದ ಬೆಲೆಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ 5000 ರೂಪಾಯಿ ಇಳಿಕೆಯಾಗಿದೆ(Price Drop). ಕಳೆದ ಜನವರಿಯಯಲ್ಲಿ ಚಿನ್ನದ ಬೆಲೆ 48,500 ರೂಪಾಯಿ ಇತ್ತು. ಸಾರ್ವಕಾಲಿಕ ಗರಿಷ್ಠ ಬೆಲೆಗೆ ಹೋಲಿಸಿದರೆ ಇದೀಗ ಶೇ. 20ರಷ್ಟು ಬೆಲೆ ಇಳಿಕೆಯಾಗಿದೆ.
SBI SME Gold Loan : ಎಸ್ ಬಿಐ ನೀಡುತ್ತಿದೆ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಮೇಲಿನ ಸಾಲ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.