PM Kisan ರೈತರಿಗೆ ಸಿಹಿ ಸುದ್ದಿ : ಏಪ್ರಿಲ್ ನಲ್ಲಿ ಬರಲಿದೆ 11ನೇ ಕಂತಿನ ಹಣ

ಏಪ್ರಿಲ್ ಮೊದಲ ವಾರದಲ್ಲಿ ರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿಯ 2 ಸಾವಿರ ರೂಪಾಯಿ ವರ್ಗಾಯಿಸಬಹುದು. ಆದರೆ, ಇದಕ್ಕಾಗಿ ರೈತರು ಮಾರ್ಚ್ 31 ರ ಮೊದಲು ಇ-ಕೆವೈಸಿ ಅನ್ನು ನವೀಕರಿಸಬೇಕಾಗುತ್ತದೆ.

Written by - Channabasava A Kashinakunti | Last Updated : Mar 26, 2022, 11:02 PM IST
  • ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಆರ್ಥಿಕ ನೆರವು
  • ಈ ಯೋಜನೆಯಡಿ ಇದುವರೆಗೆ ರೈತರ ಖಾತೆಗೆ 10 ಕಂತು
  • ಇ-ಕೆವೈಸಿ ಅನ್ನು ಈ ರೀತಿ ನವೀಕರಿಸಿ
PM Kisan ರೈತರಿಗೆ ಸಿಹಿ ಸುದ್ದಿ : ಏಪ್ರಿಲ್ ನಲ್ಲಿ ಬರಲಿದೆ 11ನೇ ಕಂತಿನ ಹಣ title=

ನವದೆಹಲಿ : ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇದು ಬಹಳ ಮುಖ್ಯವಾದ ಸುದ್ದಿ ಇದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತಿಗಾಗಿ ಕಾಯುವ ಅವಶ್ಯಕತೆ ಇಲ್ಲ. ಮಾಧ್ಯಮ ವರದಿಗಳ ಪ್ರಕಾರ, ಏಪ್ರಿಲ್ ಮೊದಲ ವಾರದಲ್ಲಿ ರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿಯ 2 ಸಾವಿರ ರೂಪಾಯಿ ವರ್ಗಾಯಿಸಬಹುದು. ಆದರೆ, ಇದಕ್ಕಾಗಿ ರೈತರು ಮಾರ್ಚ್ 31 ರ ಮೊದಲು ಇ-ಕೆವೈಸಿ ಅನ್ನು ನವೀಕರಿಸಬೇಕಾಗುತ್ತದೆ.

ಖಾತೆಗೆ 10 ಕಂತುಗಳು ಬಂದಿವೆ

ಪ್ರಧಾನ ಮಂತ್ರಿ ಕಿಸಾನ್ ಯೋಜನೆ(PM Kisan Yojana) ಅಡಿಯಲ್ಲಿ, ಇದುವರೆಗೆ 10 ಕಂತುಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ. ಜನವರಿ 1 ರಂದು 10 ನೇ ಕಂತಿನ 2 ಸಾವಿರ ರೂಪಾಯಿಯನ್ನು ಪ್ರಧಾನಿ ಮೋದಿ ರೈತರ ಖಾತೆಗೆ ವರ್ಗಾಯಿಸಿದ್ದಾರೆ. ಈಗ ರೈತರಿಗೆ 11ನೇ ಕಂತು ಸಿಗಲಿದೆ. ಆದರೆ, KYC ಅನ್ನು ನವೀಕರಿಸಿದಾಗ ಮಾತ್ರ ಇದು ಲಭ್ಯವಿರುತ್ತದೆ.

ಇದನ್ನೂ ಓದಿ : ಪ್ರತಿದಿನ ₹74 ಹೂಡಿಕೆ ಮಾಡಿ, ಪ್ರತಿ ತಿಂಗಳು ₹27,500 ಪಿಂಚಣಿ ಪಡೆಯಿರಿ!

ಇ-ಕೆವೈಸಿ ಅನ್ನು ಈ ರೀತಿ ನವೀಕರಿಸಿ

ರೈತರು ಮನೆಯಲ್ಲೇ ಕುಳಿತು ಇ-ಕೆವೈಸಿ ಅಪ್‌ಡೇಟ್(e-kyc update) ಮಾಡಬಹುದು. ಮೊದಲು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ. ಇಲ್ಲಿ eKYC ಆಯ್ಕೆಯು ಮುಖಪುಟದ ಬಲಭಾಗದಲ್ಲಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಕ್ಯಾಪ್ಚಾ ಕೋಡ್ ಅನ್ನು ಸಹ ನಮೂದಿಸಿ ಮತ್ತು ಹುಡುಕಾಟ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಈಗ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ಬರೆಯಿರಿ. ಇದರೊಂದಿಗೆ, ನಿಮ್ಮ ಆಧಾರ್ ಲಿಂಕ್ ಆಗುತ್ತದೆ ಮತ್ತು ವಿವರಗಳನ್ನು ನವೀಕರಿಸಲಾಗುತ್ತದೆ. OTP ಅನ್ನು ನಮೂದಿಸುವಲ್ಲಿ ದೋಷವಿದ್ದಲ್ಲಿ, ನಂತರ ನೀವು CSC ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ಬಯೋಮೆಟ್ರಿಕ್ ಅನ್ನು ನವೀಕರಿಸಬಹುದು.

ರೈತರಿಗೆ ಸಿಗಲಿದೆ ಆರ್ಥಿಕ ನೆರವು 

ಪಿಎಂ ಕಿಸಾನ್ ಯೋಜನೆಯನ್ನು 2018 ರಲ್ಲಿ ಪ್ರಾರಂಭಿಸಲಾಯಿತು. ರೈತರಿಗೆ ಆರ್ಥಿಕ ನೆರವು ನೀಡುವುದು ಇದರ ಉದ್ದೇಶ. ಕೇಂದ್ರ ಸರ್ಕಾರ(Central Government)ದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ, ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ವರ್ಗಾಯಿಸಲಾಗುತ್ತದೆ. ಒಂದು ವರ್ಷದಲ್ಲಿ ಅವರ ಖಾತೆಗೆ ಮೂರು ಕಂತುಗಳು 2 ಸಾವಿರ ರೂ.ನಂತೆ ಬರುತ್ತದೆ.

ಇದನ್ನೂ ಓದಿ : Flipkart ಮೇಲೆ ಬಂಪರ್ ಕೊಡುಗೆ! 43 ಇಂಚಿನ ಡಿಸ್ಪ್ಲೇ ಇರುವ Smart TV ಮೇಲೆ ಜಬರ್ದಸ್ತ್ ರಿಯಾಯ್ತಿ

ಪಿಎಂ ಕಿಸಾನ್ ಸ್ಟೇಟಸ್ ಈ ರೀತಿ ಪರಿಶೀಲಿಸಿ

ನಿಮ್ಮ PM ಕಿಸಾನ್ ಖಾತೆಯ ಸ್ಥಿತಿಯನ್ನು ಸಹ ನೀವು ಪರಿಶೀಲಿಸಬಹುದು. ಇದಕ್ಕಾಗಿ ಮೊದಲು pmkisan.gov.in ಗೆ ಹೋಗಿ. ನಂತರ ವೆಬ್‌ಸೈಟ್‌ನ ಬಲಭಾಗದಲ್ಲಿರುವ ರೈತರ ಕಾರ್ನರ್ ಕ್ಲಿಕ್ ಮಾಡಿ. ನಂತರ ಬೆನಿಫಿಶಿಯರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ. ಸ್ಥಿತಿಯನ್ನು ಪರಿಶೀಲಿಸಲು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನಮೂದಿಸಿ. ಪ್ರಕ್ರಿಯೆಯ ಪೂರ್ಣಗೊಂಡ ನಂತರ, ನೀವು ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News