Farmers Electricity Bill: ಲಕ್ಷಾಂತರ ರೈತರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಸರ್ಕಾರ

Farmers Electric Bill Pay: ಮಳೆಗಾಲದ ಋತುವಿನಲ್ಲಿ ಅತಿವೃಷ್ಟಿಯ ಕಾರಣ ಬೆಳೆಹಾನಿ ಎದುರಿಸಿದ ರೈತರ ಪಾಲಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಸರ್ಕಾರ ಇಂತಹ ರೈತರ ವಿದ್ಯುತ್ ಬಿಲ್ ಮನ್ನಾ ಮಾಡಿದೆ. ಅಂದರೆ, ಈ ರೈತರು ತಮ್ಮ ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ.  

Written by - Nitin Tabib | Last Updated : Nov 22, 2022, 03:49 PM IST
  • ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವದ ರಾಜ್ಯ ಸರ್ಕಾರ ತನ್ನ ರೈತರಿಗಾಗಿ ಈ ಮಹತ್ವದ ಘೋಷಣೆ ಮಾಡಿದೆ.
  • ಈ ಕುರಿತು ಮಾಹಿತಿ ನೀಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್,
  • 'ರಾಜ್ಯದ ವಿದ್ಯುತ್ ಘಟಕಗಳಿಗೆ ಸಂಬಂಧಿಸಿದ ಏಜೆನ್ಸಿಗಳು ಮಳೆಯಿಂದ ಸಾಕಷ್ಟು ನಷ್ಟಕ್ಕೊಳಗಾದ ರೈತರಿಗೆ ಬಿಲ್‌ಗಳನ್ನು ಪಾವತಿಸುವಂತೆ ಒತ್ತಡ ಹೇರುವಂತಿಲ್ಲ.
Farmers Electricity Bill: ಲಕ್ಷಾಂತರ ರೈತರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಸರ್ಕಾರ title=
Electricity Bill Waiver

Farmer's Power Bill: ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಾದ ಅತಿವೃಷ್ಟಿಯ ಕಾರಣ ಅಂದರೆ ಮುಂಗಾರು ಮಳೆಯಿಂದಾಗಿ ರೈತರಿಗೆ ಅಪಾರ ನಷ್ಟವಾಗಿದೆ. ಮಳೆಯಿಂದ ಬೆಳೆ ನಾಶವಾಗಿರುವ ಇಂತಹ ರೈತರ ಪಾಲಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಈ ರೈತರು ಸರ್ಕಾರದಿಂದ ವಿದ್ಯುತ್ ಬಿಲ್ ವಿದ್ಯುತ್ ಬಿಲ್ ಮನ್ನಾ ಲಾಭವನ್ನು ಪಡೆಯಲಿದ್ದಾರೆ. ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ರೈತರಿಗೆ ವಿದ್ಯುತ್ ಬಿಲ್ ಪಾವತಿಸಲು ಒತ್ತಾಯಿಸುವಂತಿಲ್ಲ ಎಂದು ಹೇಳಿರುವ ರಾಜ್ಯ ಸರ್ಕಾರ, ರೈತರಿಗೆ ಭಾರಿ ಪರಿಹಾರವನ್ನೇ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಸರ್ಕಾರದ ಘೋಷಣೆ ಏನು?
ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವದ ರಾಜ್ಯ ಸರ್ಕಾರ ತನ್ನ ರೈತರಿಗಾಗಿ ಈ ಮಹತ್ವದ ಘೋಷಣೆ ಮಾಡಿದೆ. ಈ ಕುರಿತು ಮಾಹಿತಿ ನೀಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, 'ರಾಜ್ಯದ ವಿದ್ಯುತ್ ಘಟಕಗಳಿಗೆ ಸಂಬಂಧಿಸಿದ ಏಜೆನ್ಸಿಗಳು ಮಳೆಯಿಂದ ಸಾಕಷ್ಟು ನಷ್ಟಕ್ಕೊಳಗಾದ ರೈತರಿಗೆ ಬಿಲ್‌ಗಳನ್ನು ಪಾವತಿಸುವಂತೆ ಒತ್ತಡ ಹೇರುವಂತಿಲ್ಲ. ಈ ರೈತರು ಎರಡು ತಿಂಗಳವರೆಗೆ ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ ಎಂದು ಹೇಳಿದೆ. ಸರ್ಕಾರದ ಈ ಘೋಷಣೆಯ ಬಳಿಕ ಮಹಾರಾಷ್ಟ್ರದಲ್ಲಿ ಮಳೆಯಿಂದ ಹಾನಿಗೊಳಗಾದ ಲಕ್ಷಾಂತರ ರೈತರು ಸೆಪ್ಟೆಂಬರ್ ಮತ್ತು ಅಕ್ಟೋಬರ್ ಎರಡೂ ತಿಂಗಳ ವಿದ್ಯುತ್ ಬಿಲ್ ಪಾವತಿಯಿಂದ ವಿನಾಯ್ತಿ ಪಡೆದುಕೊಂಡಿದ್ದಾರೆ. ಆದರೆ, ವಿದ್ಯುತ್ ಬಿಲ್ ಪಾವತಿಸಲು ಶಕ್ತವಾಗಿರುವ  ರೈತರು ಅದನ್ನು ಪಾವತಿಸಬೇಕಾಗುತ್ತದೆ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಇದನ್ನೂ ಓದಿ-Bank News: ಕೋಟ್ಯಾಂತರ ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ

ವಿದ್ಯುತ್ ಕಂಪನಿಗೆ ಆದೇಶ ನೀಡಿದ ಸರ್ಕಾರ
ಇದರೊಂದಿಗೆ ಉಪಮುಖ್ಯಮಂತ್ರಿ ಹಾಗೂ ವಿದ್ಯುತ್ ಸಚಿವ ದೇವೇಂದ್ರ ಫಡ್ನವೀಸ್ ಅವರು, 'ರೈತರಿಗೆ ವಿದ್ಯುತ್ ಬಿಲ್ ಜಮಾ ಮಾಡುವಂತೆ ಒತ್ತಡ ಹೇರದಂತೆ ರಾಜ್ಯ ವಿದ್ಯುತ್ ವಿತರಣಾ ಕಂಪನಿಯ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಅದರಲ್ಲೂ ವಿಶೇಷವಾಗಿ ಅತಿವೃಷ್ಟಿಯಿಂದ ಬೆಳೆ ನಾಶವಾಗಿರುವ ಅಂತಹ ರೈತರ ಮೇಲೆ. ಇದರೊಂದಿಗೆ ಈ ಹಂಗಾಮಿನ ವಿದ್ಯುತ್ ಬಿಲ್ ಮಾತ್ರ ರೈತರಿಂದ ವಸೂಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದಿದ್ದಾರೆ.

ಇದನ್ನೂ ಓದಿ-PAN Card ನಲ್ಲಿ ಈ ತಪ್ಪು ಇದ್ದರೆ, ಈಗಲೇ ಸುಧಾರಿಸಿಕೊಳ್ಳಿ... ಇಲ್ದಿದ್ರೆ?

ಮತ್ತೊಂದು ಸಂಗತಿಯಲ್ಲಿ ಪರಿಹಾರ
ಇದಲ್ಲದೇ ಹಲವು ರೈತರ ವಿದ್ಯುತ್ ಬಿಲ್ ಬಹಳ ದಿನಗಳಿಂದ ಬಾಕಿ ಉಳಿದಿದ್ದು, ಅವರ ಸಂಪರ್ಕ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಈ ರೈತರು ಈ ಹಂಗಾಮಿಗೆ ಮಾತ್ರ ಬಿಲ್ ಪಾವತಿಸಬೇಕಿದ್ದು, ಅವರ ಸಂಪರ್ಕ ಕಡಿತಗೊಳ್ಳುವುದಿಲ್ಲ ಎಂದು ಸರ್ಕಾರ ಹೇಳಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News