Valentine's Day 2023 ಪ್ರಯುಕ್ತ ಐಆರ್ಸಿಟಿಸಿ ವಿಶೇಷ ಕೊಡುಗೆ, ಸಂಗಾತಿ ಜೊತೆಗೆ ಗೋವಾದಲ್ಲಿ 5 ದಿನ ಸುತ್ತಾಡುವ ಅವಕಾಶ

Valentine's Day 2023 Special Offer: ಈ ಬಾರಿಯ ವ್ಯಾಲೆಂಟೈನ್ ಡೇ ಆಚರಿಸಲು ಐಆರ್ಸಿಟಿಸಿ 5 ದಿನಗಳು ಹಾಗೂ 4 ರಾತ್ರಿಗಳ ವಿಶೇಷ ಪ್ಯಾಕೇಜ್ ಘೋಷಿಸಿದೆ. ಬನ್ನಿ ಬುಕ್ಕಿಂಗ್ ಪ್ರಕ್ರಿಯೆ ಯಾವಾಗ ಪ್ರಾರಂಭಗೊಳ್ಳಲಿದೆ ತಿಳಿದುಕೊಳ್ಳೋಣ,  

Written by - Nitin Tabib | Last Updated : Feb 10, 2023, 02:15 PM IST
  • ಈ ಪ್ರವಾಸದ ಪ್ಯಾಕೇಜ್ ಉಪಹಾರ ಮತ್ತು ರಾತ್ರಿಯ ಊಟ,
  • ತಂಗಲು ಹೋಟೆಲ್ ಕೊಠಡಿ ಮತ್ತು ಸ್ಥಳೀಯ ದೃಶ್ಯವೀಕ್ಷಣೆಗೆ ಸಾರಿಗೆಯನ್ನು ಒಳಗೊಂಡಿರುತ್ತದೆ.
  • ಇದಲ್ಲದೇ ವಿಮಾನ ಸೌಲಭ್ಯವೂ ದೊರೆಯಲಿದೆ.
Valentine's Day 2023 ಪ್ರಯುಕ್ತ ಐಆರ್ಸಿಟಿಸಿ ವಿಶೇಷ ಕೊಡುಗೆ, ಸಂಗಾತಿ ಜೊತೆಗೆ ಗೋವಾದಲ್ಲಿ 5 ದಿನ ಸುತ್ತಾಡುವ ಅವಕಾಶ title=
ಗೊವಾದಲ್ಲ್ಲಿ ಪ್ರೇಮಿಗಳ ದಿನಾಚರಣೆಗೆ ಅವಕಾಶ

IRCTC Special Package: ಪ್ರೀತಿಯ ವಾರ ಆರಂಭಗೊಂಡಿದೆ. ಪ್ರೀತಿಯಲ್ಲಿ ಬೀಳಲು ಯಾವುದೇ ವಿಶೇಷ ಸಮಯದ ಅಗತ್ಯವಿಲ್ಲದಿದ್ದರೂ, ಇಡೀ ವಿಶ್ವವೇ ಪ್ರೇಮಿಗಳ ವಾರವನ್ನು ಆಚರಿಸುತ್ತದೆ. ಫೆಬ್ರವರಿ ತಿಂಗಳಲ್ಲಿ ವ್ಯಾಲೆಂಟೈನ್ಸ್ ವೀಕ್ ಅನ್ನು ಆಚರಿಸಲಾಗುತ್ತದೆ, ಇದು ಫೆಬ್ರವರಿ 7 ರಿಂದ ಪ್ರಾರಂಭವಾಗುತ್ತದೆ ಮತ್ತು ಪ್ರೇಮಿಗಳ ದಿನವನ್ನು ಫೆಬ್ರವರಿ 14 ರಂದು ಆಚರಿಸಲಾಗುತ್ತದೆ. ಪ್ರೇಮಿಗಳ ದಿನವನ್ನು ಪ್ರೀತಿಯ ಜೋಡಿಗಳ ದಿನ ಎಂದು ಕರೆಯಲಾಗುತ್ತದೆ. ಈ ದಿನ ಪ್ರೇಮಿಗಳು ಪರಸ್ಪರ ಸಮಯ ಕಳೆಯುತ್ತಾರೆ.

ಪರಸ್ಪರ ನಿಮ್ಮ ಪ್ರೀತಿಯನ್ನು ಅನುಭವಿಸುವಂತೆ ಮಾಡಿ ಮತ್ತು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಪ್ರೇಮಿಗಳ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು ದಂಪತಿಗಳು ತುಂಬಾ ಉತ್ಸುಕರಾಗಿದ್ದಾರೆ. ಕೆಲವರು ವ್ಯಾಲೆಂಟೈನ್ಸ್‌ನಲ್ಲಿ ಪಾರ್ಟಿ ಮಾಡುತ್ತಾರೆ ಮತ್ತು ಕೆಲವರು ವಾಕಿಂಗ್‌ಗೆ ಹೋಗುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಪ್ರೇಮಿಗಳ ದಿನವನ್ನು ಮರೆಯಲಾಗದ ರೀತಿಯಲ್ಲಿ ಆಚರಿಸಲು ನೀವು ಕೂಡ ಬಯಸುತ್ತಿದ್ದರೆ, ನೀವು ಪ್ರಣಯ ಪ್ರವಾಸ ಕೈಗೊಳ್ಳಬಹುದು. ಪ್ರೀತಿಯಲ್ಲಿರುವವರಿಗೆ, IRCTC ರೊಮ್ಯಾಂಟಿಕ್ ವ್ಯಾಲೆಂಟೈನ್ ವಿಶೇಷ ಟೂರ್ ಪ್ಯಾಕೇಜ್‌ ಬಿಡುಗಡೆ ಮಾಡಿದೆ. IRCTC ಯ ವ್ಯಾಲೆಂಟೈನ್ ಟೂರ್ ಪ್ಯಾಕೇಜ್‌ನ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ,

IRCTC ವ್ಯಾಲೆಂಟೈನ್ ಟೂರ್ ಪ್ಯಾಕೇಜುಗಳು
IRCTC ನಿಮ್ಮನ್ನು ಪ್ರೇಮಿಗಳ ದಿನದಂದು ಗೋವಾ ಪ್ರವಾಸಕ್ಕೆ ಕರೆದೊಯ್ಯುತ್ತಿದೆ. ಯುವಕರು ಹಾಗೂ ದಂಪತಿಗಳಲ್ಲಿ ಗೋವಾ ಅತ್ಯಂತ ಜನಪ್ರಿಯ ತಾಣವಾಗಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಫೆಬ್ರವರಿ 14 ರಂದು ಗೋವಾದಲ್ಲಿ ಕಳೆಯಬಹುದು. ಸಂಜೆ, ನೀವು ಸಮುದ್ರತೀರದಲ್ಲಿ ಕೈ-ಕೈ ಹಿಡಿದುಕೊಂಡು ಪ್ರಣಯ ವಿಹಾರ ನಡೆಸಬಹುದು. ನೀವು ತಡರಾತ್ರಿಯ ಪಾರ್ಟಿಯನ್ನು ಸಹ ಆನಂದಿಸಬಹುದು. ಪ್ಯಾಕೇಜ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯು IRCTC ವೆಬ್‌ಸೈಟ್‌ನಲ್ಲಿಯೂ ಲಭ್ಯವಿದೆ. ಹೀಗಾಗಿ, ನೀವು IRCTC ಸೈಟ್‌ಗೆ ಭೇಟಿ ನೀಡುವ ಮೂಲಕ ಪ್ರವಾಸ ಬುಕ್ ಮಾಡಬಹುದು. ಇದಲ್ಲದೇ ನೇರವಾಗಿ ಕಚೇರಿಗೆ ತೆರಳಿ ಬುಕ್ಕಿಂಗ್ ಕೂಡ ಮಾಡಬಹುದು.

RCTC ಯಿಂದ 4N/5D ನ ಕೂಲ್ ಪ್ಯಾಕೇಜ್
ವ್ಯಾಲೆಂಟೈನ್ ವಿಶೇಷ ಗೋವಾ ಟೂರ್ ಪ್ಯಾಕೇಜ್ 4 ರಾತ್ರಿಗಳು ಮತ್ತು 5 ದಿನಗಳ ಅವಧಿಯನ್ನು ಹೊಂದಿದೆ. ಈ ಟೂರ್ ಪ್ಯಾಕೇಜ್ ಫೆಬ್ರವರಿ 11 ರಿಂದ ಅಂದರೆ ಪ್ರಾಮಿಸ್ ಡೇಯಿಂದ ಪ್ರಾರಂಭವಾಗುತ್ತದೆ ಮತ್ತು ಪ್ರವಾಸದ ಪ್ಯಾಕೇಜ್ ಫೆಬ್ರವರಿ 15 ರವರೆಗೆ ಇರಲಿದೆ. ಫೆಬ್ರವರಿ 11 ರಿಂದ ಮಾರ್ಚ್ 7 ರವರೆಗೆ ನೀವು ಯಾವಾಗ ಬೇಕಾದರೂ ಬುಕ್ ಮಾಡಬಹುದಾದ ಇನ್ನೊಂದು ಪ್ಯಾಕೇಜ್ ಕೂಡ ಅಲ್ಲಿ ನೀವು ಗಮನಿಸಬಹುದು.

IRCTC ಗೋವಾ ಪ್ಯಾಕೇಜ್ ನಲ್ಲಿ ಎಲ್ಲೆಲ್ಲಿ ಪ್ರವಾಸ ಮಾಡಬಹುದು?
IRCTC ಈ ಪ್ರವಾಸದ ಪ್ಯಾಕೇಜ್‌ ಉತ್ತರ ಮತ್ತು ದಕ್ಷಿಣ ಗೋವಾ ಪ್ರವಾಸ ಒಳಗೊಂಡಿದೆ. ಈ ಸಮಯದಲ್ಲಿ, ದಂಪತಿಗಳನ್ನು ಅಗುಡಾ ಫೋರ್ಟ್, ಸಿಂಕ್ವೇರಿಯಂ ಬೀಚ್ ಮತ್ತು ಕ್ಯಾಂಡೋಲಿಮ್ ಬೀಚ್, ಬಾಗಾ ಬೀಚ್, ಬಾಮ್ ಜೀಸಸ್ ಚರ್ಚ್ ಮತ್ತು ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್, ಮಿರಾಮರ್ ಬೀಚ್ ಮತ್ತು ಮಾಂಡೋವಿ ರಿವರ್ ಕ್ರೂಸ್ ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ.

ಇದನ್ನೂ ಓದಿ-Gold Price Today: ಚಿನ್ನದ ಬೆಲೆಗೆ ಸಂಬಂಧಿಸಿದಂತೆ ಒಂದು ಗುಡ್ ನ್ಯೂಸ್, 2200 ರೂ.ಗಳಷ್ಟು ಅಗ್ಗವಾಯ್ತು ತೊಲೆ ಚಿನ್ನ!

ಪ್ರವಾಸ ಪ್ಯಾಕೇಜ್ ಸೌಕರ್ಯಗಳು
ಈ ಪ್ರವಾಸದ ಪ್ಯಾಕೇಜ್ ಉಪಹಾರ ಮತ್ತು ರಾತ್ರಿಯ ಊಟ, ತಂಗಲು ಹೋಟೆಲ್ ಕೊಠಡಿ ಮತ್ತು ಸ್ಥಳೀಯ ದೃಶ್ಯವೀಕ್ಷಣೆಗೆ ಸಾರಿಗೆಯನ್ನು ಒಳಗೊಂಡಿರುತ್ತದೆ. ಇದಲ್ಲದೇ ವಿಮಾನ ಸೌಲಭ್ಯವೂ ದೊರೆಯಲಿದೆ. ಫೆಬ್ರವರಿ 12 ರಂದು ಇಂದೋರ್‌ನಿಂದ ಗೋವಾಕ್ಕೆ ವಿಮಾನ ಸೇವೆಯನ್ನು ನೀವು ಪಡೆಯಬಹುದು.

ಇದನ್ನೂ ಓದಿ-Cheapest Electric Scooter: ಎರಡು ಅಗ್ಗದ ಇಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಓಲಾ, ಬೆಲೆ ಕೇವಲ ಸ್ಪ್ಲೆಂಡರ್ ನಷ್ಟು ಮಾತ್ರ

ಆಫರ್ ಯಾವಾಗ ಪ್ರಾರಂಭ?
ನೀವು ಏಕಾಂಗಿಯಾಗಿ ಪ್ರವಾಸಕ್ಕೆ ಹೋಗಲು ಬಯಸುತ್ತಿದ್ದರೆ, ನೀವು 51,000 ರೂ. ಪಾವತಿಸಬೇಕು. ಆದರೆ, ಪ್ರೇಮಿಗಳ ದಿನವನ್ನು ಆಚರಿಸಲು ಯಾರೂ ಒಬ್ಬರೇ ಹೋಗುವುದಿಲ್ಲ. ಇಬ್ಬರೂ ಹೋದರೆ ಒಬ್ಬರಿಗೆ 40 ಸಾವಿರದ 500 ರೂ. ಮೂರು ಜನ ಹೋದರೆ ಒಬ್ಬರಿಗೆ 38 ಸಾವಿರದ 150 ರೂ. ಪಾವತಿಸಬೇಕು. IRCTC ಯ ಪ್ರವಾಸ ಪ್ಯಾಕೇಜ್‌ಗಳು ಪ್ರೇಮಿಗಳ ವಾರದಿಂದ ಪ್ರಾರಂಭವಾಗುತ್ತವೆ.

ಇದನ್ನೂ ಓದಿ-Good News: ಕೇವಲ 4 ವರ್ಷಗಳಲ್ಲಿ 40 ಲಕ್ಷ ಗಳಿಕೆಗೆ ಕೇಂದ್ರ ಸರ್ಕಾರ ನೀಡುತ್ತಿದೆ ಈ ಅವಕಾಶ, ಮಿಸ್ ಮಾಡ್ಕೋಬೇಡಿ!

ಪ್ಯಾಕೇಜ್‌ನಲ್ಲಿ ಯಾವ ಸೌಲಭ್ಯಗಳನ್ನು ಸೇರಿಸಲಾಗಿದೆ?
ಈ ಪ್ಯಾಕೇಜ್‌ನಲ್ಲಿ ನೀವು ಉತ್ತರ ಮತ್ತು ದಕ್ಷಿಣ ಗೋವಾ ಎರಡಕ್ಕೂ ಭೇಟಿ ನೀಡುವ ಅವಕಾಶವನ್ನು ಪಡೆಯಬಹುದು. ನಿಮ್ಮನ್ನು ಭುವನೇಶ್ವರ್, ಚಂಡೀಗಢ ಮತ್ತು ಇಂದೋರ್, ಪಾಟ್ನಾ ಮೂಲಕ ಗೋವಾಕ್ಕೆ ಕರೆದೊಯ್ಯಲಾಗುತ್ತದೆ. ಈ ಪ್ಯಾಕೇಜ್ ಐದು ಉಪಹಾರಗಳು ಮತ್ತು ಐದು ಭೋಜನಗಳನ್ನು ಒಳಗೊಂಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News