Good News: ಪ್ರಸಕ್ತ ಹಣಕಾಸು ವರ್ಷದಲ್ಲಿ GDP ಬೆಳವಣಿಗೆ ದರ ಶೇ.9.2ರಷ್ಟು, ಮತ್ತೆ ಹಳಿಗೆ ಮರಳಿದ ಆರ್ಥಿಕತೆ

GDP Growth - GDP Data 2021-22: ಪ್ರಸಕ್ತ ಹಣಕಾಸು ವರ್ಷ ಅಂದರೆ 2021-22 ರಲ್ಲಿ GDP ಶೇ.9.2 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2020-21 ರಲ್ಲಿ, GDP (ಮೈನಸ್) -7.3 ಪ್ರತಿಶತದಷ್ಟಿತ್ತು.

Written by - Nitin Tabib | Last Updated : Jan 7, 2022, 07:47 PM IST
  • 2021-22 ರಲ್ಲಿ GDP ಶೇ.9.2 ರಷ್ಟು ಇರಲಿದೆ.
  • ಕೃಷಿ ಮತ್ತು ಉತ್ಪಾದನಾ ಕ್ಷೇತ್ರದ ಉತ್ತಮ ಕಾರ್ಯಕ್ಷಮತೆಯಿಂದ ಇದು ಸಾಧ್ಯ.
  • NSO ಶುಕ್ರವಾರ ಬಿಡುಗಡೆ ಮಾಡಿದ ರಾಷ್ಟ್ರೀಯ ಆದಾಯದ ಮೊದಲ ಮುಂಗಡ ಅಂದಾಜಿನಲ್ಲಿ ಇದನ್ನು ಹೇಳಲಾಗಿದೆ.
Good News: ಪ್ರಸಕ್ತ ಹಣಕಾಸು ವರ್ಷದಲ್ಲಿ GDP ಬೆಳವಣಿಗೆ ದರ ಶೇ.9.2ರಷ್ಟು, ಮತ್ತೆ ಹಳಿಗೆ ಮರಳಿದ ಆರ್ಥಿಕತೆ title=
GDP Growth Rate (File Photo)

ನವದೆಹಲಿ: GDP Growth Rate - ಕೃಷಿ ಮತ್ತು ಉತ್ಪಾದನಾ ಕ್ಷೇತ್ರದ ಉತ್ತಮ ಕಾರ್ಯಕ್ಷಮತೆಯಿಂದಾಗಿ 2021-22ರ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರವು ಶೇ. 9.2 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ, ಒಂದು ವರ್ಷದ ಹಿಂದೆ ಇದರಲ್ಲಿ ಶೇ.7.3 ರಷ್ಟು ಕುಸಿತವಾಗಿತ್ತು. ರಾಷ್ಟ್ರೀಯ ಅಂಕಿ-ಅಂಶ ಕಚೇರಿ (NSO) ಶುಕ್ರವಾರ ಬಿಡುಗಡೆ ಮಾಡಿದ ರಾಷ್ಟ್ರೀಯ ಆದಾಯದ ಮೊದಲ ಮುಂಗಡ ಅಂದಾಜಿನಲ್ಲಿ ಇದನ್ನು ಹೇಳಲಾಗಿದೆ (Business News).

NSO ಪ್ರಕಾರ, "ನೈಜ GDP (ಒಟ್ಟು ದೇಶೀಯ ಉತ್ಪನ್ನ) ಬೆಳವಣಿಗೆ ದರವು 2021-22 ರಲ್ಲಿ ಶೇ.9.2 ರಾಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಒಂದು ವರ್ಷದ ಹಿಂದೆ 2020-21ರಲ್ಲಿ ಇದರಲ್ಲಿ ಶೇ.7.3ರಷ್ಟು ಇಳಿಕೆ ಉಂಟಾಗಿತ್ತು.

     
ಮೂಲ ಬೆಲೆಯಲ್ಲಿ ವಾರ್ಷಿಕ ನೈಜ ಒಟ್ಟು ಮೌಲ್ಯವರ್ಧನೆಯು (GVA) ಹಿಂದಿನ ಹಣಕಾಸು ವರ್ಷದ 2020-21 ರಲ್ಲಿ 124.53 ಲಕ್ಷ ಕೋಟಿಗಿಂತ 2021-22 ರಲ್ಲಿ 135.22 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಇದು ಶೇ.8.6ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ : ಜ. 26 ರಂದು ನಿಮ್ಮ ಸಂಬಳದಲ್ಲಿ ಭಾರೀ ಹೆಚ್ಚಳ

ಚಿಂತೆ ಹೆಚ್ಚಿಸಿದ ಕೊರೊನಾ ವೈರಸ್ ಮೂರನೇ ಅಲೆ (Business News In Kannada)
ಪ್ರಸ್ತುತ ದೇಶದಲ್ಲಿ ಕೊರೊನಾ ವೈರಸ್ ನ ಮೂರನೇ ಅಲೆ ಆರಂಭಗೊಂಡಿದೆ. ಇದರಿಂದಾಗಿ ರಾಜ್ಯ ಸರ್ಕಾರಗಳು ಹಲವು ನಿರ್ಬಂಧಗಳನ್ನು ವಿಧಿಸುತ್ತಿವೆ. ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಮತ್ತು ಲಾಕ್‌ಡೌನ್‌ನಿಂದ ಆರ್ಥಿಕತೆಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ಈಗಲೇ ಹೇಳಲಾಗುವುದಿಲ್ಲ. ಆದರೆ ಅದರಿಂದಾಗುವ ಹಾನಿಯನ್ನು ಅಲ್ಲಗಳೆಯುವಂತಿಲ್ಲ. ಕೊರೊನಾ ಎರಡನೇ ಅಲೆಯ ಕೆಟ್ಟ ಪರಿಣಾಮದ ನಂತರ, ಜುಲೈ ತ್ರೈಮಾಸಿಕದಿಂದ ಸೆಪ್ಟೆಂಬರ್ ತ್ರೈಮಾಸಿಕದ ನಡುವೆ ಆರ್ಥಿಕತೆಯು ಮತ್ತೊಮ್ಮೆ ಏರಿಕೆ ಕಂಡಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-PM Kisan 10ನೇ ಕಂತಿನ ಹಣ ನಿಮ್ಮಗೆ ಬಂದಿಲ್ಲವೆ? ತಕ್ಷಣವೇ ಈ ಕೆಲಸ ಮಾಡಿ, ಹಣ ಬರುತ್ತೆ!

ಕೊರೊನಾ ವೈರಸ್ ನ ಮೂರನೇ ತರಂಗವು ಅಂದಾಜಿನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ  ಎಂದು ನೈಟ್ ಫ್ರಾಂಕ್ ಇಂಡಿಯಾದ ಸಲಹಾ ನಿರ್ದೇಶಕ ವಿವೇಕ್ ರಾಠಿ ಹೇಳಿದ್ದಾರೆ. ಮೂರನೇ ಅಲೆಯಿಂದ ನಾವು ಸುಲಭವಾಗಿ ಹೊರಬರಲು ಸಾಧ್ಯವಾಗುತ್ತದೆ ಎಂದು ವಿವೇಕ್ ಹೇಳುತ್ತಾರೆ. ಮತ್ತು ಆರ್ಥಿಕ ಚಟುವಟಿಕೆಗಳು ಅಡೆತಡೆಯಿಲ್ಲದೆ ಮುಂದುವರಿಯುತ್ತವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-Pan card Alert : ಆಧಾರ್ ಜೊತೆ ಪಾನ್ ಕಾರ್ಡ್ ಜೋಡಣೆ ಮಾಡದಿದ್ದರೆ ಬೀಳಲಿದೆ ₹10 ಸಾವಿರ ದಂಡ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News