ಈ ದಿನ ಚಾಲ್ತಿಗೆ ಬರುವುದು 75 ರೂಪಾಯಿ ಮುಖ ಬೆಲೆಯ ನಾಣ್ಯ : ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಟ

ಸಂಸತ್ ಭವನದ ಉದ್ಘಾಟನೆಯ  ಸವಿ ನೆನಪಿಗಾಗಿ ಹೊಸ  ನಾಣ್ಯವನ್ನು ಹೊರ ತರಲಾಗುವುದು.   75 ರೂಪಾಯಿ ಮುಖ ಬೆಲೆಯ ನಾಣ್ಯವನ್ನು ಬಿಡುಗಡೆ ಮಾಡುವುದಾಗಿ ಹಣಕಾಸು ಇಲಾಖೆ ಹೇಳಿದೆ.  

Written by - Ranjitha R K | Last Updated : May 26, 2023, 10:44 AM IST
  • ನೂತನ ಸಂಸತ್ ಭವನ ಉದ್ಘಾಟನೆ
  • 75 ರೂಪಾಯಿ ಮುಖ ಬೆಲೆಯ ನಾಣ್ಯ ಬಿಡುಗಡೆ
  • ಅಧಿಸೂಚನೆ ಹೊರಡಿಸಿದ ಹಣಕಾಸು ಸಚಿವಾಲಯ
ಈ ದಿನ ಚಾಲ್ತಿಗೆ ಬರುವುದು 75 ರೂಪಾಯಿ ಮುಖ ಬೆಲೆಯ ನಾಣ್ಯ : ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಟ  title=

ನವದೆಹಲಿ : ಮೇ 28ರಂದು ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ 75 ರೂಪಾಯಿ ಮುಖ ಬೆಲೆಯ ನಾಣ್ಯವನ್ನು ಹೊರತರಲಾಗುವುದು. ಸಂಸತ್ ಭವನದ ಉದ್ಘಾಟನೆಯ  ಸವಿ ನೆನಪಿಗಾಗಿ ಈ ನಾಣ್ಯವನ್ನು ಹೊರ ತರಲಾಗುವುದು. ಹಣಕಾಸು ಸಚಿವಾಲಯವು ಈ ಸಂಬಂಧ ಅಧಿಸೂಚನೆಯನ್ನು ಕೂಡಾ ಹೊರಡಿಸಿದೆ. 

ನಾಲ್ಕು ಲೋಹಗಳನ್ನು ಸೇರಿಸಿ ಹೊಸ ನಾಣ್ಯ ತಯಾರಿ : 
ನಾಣ್ಯವನ್ನು ನಾಲ್ಕು ಲೋಹಗಳಿಂದ ಮಾಡಲಾಗುವುದು. ಇದು 50 ಪ್ರತಿಶತ ಬೆಳ್ಳಿ, 40 ಪ್ರತಿಶತ ತಾಮ್ರ, 5 ಪ್ರತಿಶತ ನಿಕಲ್ ಮತ್ತು 5 ಪ್ರತಿಶತ ಸತುವನ್ನು ಹೊಂದಿರುತ್ತದೆ. ಸಂಸತ್ತಿನ ಸಂಕೀರ್ಣದ ಚಿತ್ರದ ಕೆಳಗೆ '2023' ವರ್ಷವನ್ನು ಕೆತ್ತಲಾಗಿದೆ. 

ಇದನ್ನೂ ಓದಿ : Good News: ಖಾಸಗಿ ಉದ್ಯೋಗಿಗಳಿಗೆ 25 ಲಕ್ಷ ರೂ.ವರೆಗೆ ತೆರಿಗೆ ವಿನಾಯ್ತಿ ನೀಡಿದ ಮೋದಿ ಸರ್ಕಾರ!

75 ರೂಪಾಯಿ ನಾಣ್ಯ ಹೀಗಿರಲಿದೆ : 
ಸಂಸತ್ ಭವನ ಉದ್ಘಾಟನೆ ಸಂದರ್ಭದಲ್ಲಿ ಬಿಡುಗಡೆಯಾಗಲಿರುವ 75 ರೂಪಾಯಿ ಮುಖ ಬೆಲೆಯ ನಾಣ್ಯ 35 ಗ್ರಾಂನಷ್ಟು ತೂಕವಿರಲಿದೆ. ಇನ್ನು ಅದರ ವಿನ್ಯಾಸದ ಬಗ್ಗೆ ಹೇಳುವುದಾದರೆ   ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭವನ್ನು ಕಾಣಬಹುದಾಗಿದೆ. ಅದರ ಕೆಳಭಾಗದಲ್ಲಿ 75 ರೂ ಎಂದು ಬರೆಯಲಾಗಿರುತ್ತದೆ. ಸಂಸತ್ ಸಂಕೀರ್ಣ ಮತ್ತು ಹೊಸ ಸಂಸತ್ತಿನ ಕಟ್ಟಡದ ಚಿತ್ರವನ್ನು ಈ ನಾಣ್ಯ ಹೊಂದಿರುತ್ತದೆ. ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, 75 ರೂಪಾಯಿಯ ನಾಣ್ಯವು 44 ಎಂಎಂ ವ್ಯಾಸವನ್ನು ಹೊಂದಿದ್ದು ವೃತ್ತಾಕಾರವಾಗಿರುತ್ತದೆ. 

ಈ ಪಕ್ಷಗಳು ಸಮಾರಂಭದಲ್ಲಿ ಭಾಗಿಯಾಗಲಿವೆ :
ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕನಿಷ್ಠ 25 ಪಕ್ಷಗಳು ಭಾಗವಹಿಸುವ ನಿರೀಕ್ಷೆಯಿದೆ. 20 ವಿರೋಧ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಆಡಳಿತಾರೂಢ ಎನ್‌ಡಿಎಯ 18 ಸದಸ್ಯರನ್ನು ಹೊರತುಪಡಿಸಿ, ಏಳು ಎನ್‌ಡಿಎಯೇತರ ಪಕ್ಷಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿವೆ. ಬಿಎಸ್‌ಪಿ, ಶಿರೋಮಣಿ ಅಕಾಲಿದಳ, ಜನತಾ ದಳ (ಜಾತ್ಯತೀತ), ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ವೈಎಸ್‌ಆರ್ ಕಾಂಗ್ರೆಸ್, ಬಿಜೆಡಿ ಮತ್ತು ಟಿಡಿಪಿ ಎನ್‌ಡಿಎಯೇತರ ಪಕ್ಷಗಳಾಗಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ : ಎಂಟು ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದ RBI:ಎಲ್ಲಾ ರೀತಿಯ ವ್ಯವಹಾರವೂ ನಿಷಿದ್ದ ! ಲಿಸ್ಟ್ ನಲ್ಲಿದೆ ಕರ್ನಾಟಕದ ಬ್ಯಾಂಕ್

ಪ್ರಧಾನಿ ಮೋದಿಯನ್ನು ಟಾರ್ಗೆಟ್ ಮಾಡಿದ ಪ್ರತಿಪಕ್ಷಗಳು :
ಹೊಸ ಸಂಸತ್ ಭವನದ ಉದ್ಘಾಟನೆ ವಿಚಾರವಾಗಿ ಹೇಳಿಕೆ ನೀಡಿರುವ ಪ್ರತಿಪಕ್ಷಗಳು ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡಿವೆ. ಕೇಂದ್ರ  ಸರ್ಕಾರವೂ ತನ್ನ ದುರಹಂಕಾರದಿಂದ ಸಂಸದೀಯ ವ್ಯವಸ್ಥೆಯನ್ನು ನಾಶಪಡಿಸಿದೆ ಎಂದು  ಖಾರವಾಗಿ ನುಡಿದಿವೆ. ಈ ಬಗ್ಗೆ ಟ್ವೀಟ್ ಮಾಡಿರುವ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸತ್ತು ಜನರಿಂದ ಸ್ಥಾಪಿಸಲ್ಪಟ್ಟ ಪ್ರಜಾಪ್ರಭುತ್ವದ ದೇವಾಲಯ. ರಾಷ್ಟ್ರಪತಿಗಳ ಕಚೇರಿಯು ಸಂಸತ್ತಿನ ಮೊದಲ ಭಾಗ. ಆದರೆ ನಿಮ್ಮ ಸರ್ಕಾರದ ದುರಹಂಕಾರದಿಂದ ಸಂಸದೀಯ ವ್ಯವಸ್ಥೆ ನಾಶವಾಗಿದೆ ಎಂದು ಕಿಡಿ ಕಾರಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News