GST Return New Rule: ಜನವರಿ 1 ರಿಂದ ಬದಲಾಗುತ್ತಿದೆ GST Return ನಿಯಮ, ಈ ಕೆಲಸ ಮಾಡುವುದನ್ನು ತಪ್ಪಿದರೆ GSTR-1 ಪಾವತಿಸಲು ಸಾಧ್ಯವಿಲ್ಲ

GST Return New Rule - ಈ ಕ್ರಮದಿಂದ  ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವಂಚನೆಯಿಂದ ಆದಾಯದ ನಷ್ಟವನ್ನು ತಡೆಗಟ್ಟಬಹುದು ಎಂಬುದನ್ನು ನಿರೀಕ್ಷಿಸಲಾಗಿದೆ.

Written by - Nitin Tabib | Last Updated : Sep 18, 2021, 09:54 PM IST
  • ಜನವರಿ 1, 2022 ರಿಂದ GST Return ನಿಯಮದಲ್ಲಿ ಬದಲಾವಣೆ.
  • GST ಕಳ್ಳತನದಿಂದಾಗುವ ಆದಾಯ ನಷ್ಟವನ್ನು ಇದರಿಂದ ತಡೆಯಬಹುದು ಎಂದ ಕೌನ್ಸಿಲ್
  • ಇದಲ್ಲದೆ GST Registrationಗೆ ಆಧಾರ್ ಕೂಡ ಕಡ್ಡಾಯವಾಗಿದೆ.
GST Return New Rule: ಜನವರಿ 1 ರಿಂದ ಬದಲಾಗುತ್ತಿದೆ GST Return ನಿಯಮ, ಈ ಕೆಲಸ ಮಾಡುವುದನ್ನು ತಪ್ಪಿದರೆ GSTR-1 ಪಾವತಿಸಲು ಸಾಧ್ಯವಿಲ್ಲ title=
GST Return New Rule (File Photo)

GST Return New Rule - ಹೊಸ ವರ್ಷ ಅಂದರೆ ಜನವರಿ 1 ರಿಂದ, ಸಂಕ್ಷಿಪ್ತ ಪಾವತಿ  ಮತ್ತು ಮಾಸಿಕ ಸರಕು ಮತ್ತು ಸೇವಾ ತೆರಿಗೆ (GST) ಪಾವತಿಸದ ಕಂಪನಿಗಳಿಗೆ ಮುಂದಿನ ತಿಂಗಳಲ್ಲಿ GSTR-1  ಮಾರಾಟ ರಿಟರ್ನ್ ಸಲ್ಲಿಸಲು ಅನುಮತಿ ನೀಡಲಾಗುವುದಿಲ್ಲ. ಪಿಟಿಐ ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿಯ ಪ್ರಕಾರ, ಶುಕ್ರವಾರ ಲಕ್ನೋದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ (GST Council Meet) ಸಭೆಯಲ್ಲಿ, ಅನುಸರಣೆಯ ಸಮನ್ವಯವನ್ನು ಗಮನದಲ್ಲಿಟ್ಟುಕೊಂಡು ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕಂಪನಿಗಳು ಅಥವಾ ವ್ಯವಹಾರಗಳಿಗೆ ಮರುಪಾವತಿಯನ್ನು ಪಡೆಯಲು ಆಧಾರ್ ಪರಿಶೀಲನೆಯನ್ನು ಕಡ್ಡಾಯಗೊಳಿಸುವುದೂ ಕೂಡ ಇದರಲ್ಲಿ ಶಾಮೀಲಾಗಿವೆ.

GST ಕಳ್ಳತನದಿಂದಾಗುವ ಆದಾಯ ನಷ್ಟವನ್ನು ತಡೆಯಬಹುದು 
ವರದಿಗಳ ಪ್ರಕಾರ, ಸರ್ಕಾರದ ಈ ಹೆಜ್ಜೆಯಿಂದ ಜಿಎಸ್ಟಿ ವಂಚನೆಯಿಂದಾಗುವ ಆದಾಯದ ನಷ್ಟವನ್ನು ತಡೆಯಬಹುದು ಎಂದು ನಿರೀಕ್ಷಿಸಲಾಗಿದೆ. GST ವ್ಯವಸ್ಥೆ ಜುಲೈ 1, 2017 ರಿಂದ ಜಾರಿಗೆ ಬಂದಿತ್ತು. ಜನವರಿ 1, 2022 ರಿಂದ ಜಾರಿಗೆ ಬರುವಂತೆ ಕೇಂದ್ರ ಜಿಎಸ್‌ಟಿ ವ್ಯವಸ್ಥೆಯ ನಿಯಮ 59 (6) ಕ್ಕೆ ತಿದ್ದುಪಡಿ ಮಾಡಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ. ಇದರ ಅಡಿಯಲ್ಲಿ, ನೋಂದಾಯಿತ ವ್ಯಕ್ತಿಯು ಹಿಂದಿನ ತಿಂಗಳ ಫಾರ್ಮ್ (GST Return Form) ಜಿಎಸ್‌ಟಿಆರ್ -3 ಬಿ ಯಲ್ಲಿ ರಿಟರ್ನ್ ಸಲ್ಲಿಸದಿದ್ದರೆ, ಆತನಿಗೆ ಜಿಎಸ್‌ಟಿಆರ್ -1 ಸಲ್ಲಿಸಲು ಅವಕಾಶ ನೀಡಲಾಗುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ-Small Business Idea: ಬಂಪರ್ ಲಾಭ ನೀಡುವ ಈ ಸಣ್ಣ ಉದ್ಯಮ ಇಂದೇ ಆರಂಭಿಸಿ, ಲಕ್ಷಾಂತರ ಲಾಭದ ಜೊತೆಗೆ ಸರ್ಕಾರಿ ನೆರವು ಕೂಡ ಸಿಗುತ್ತದೆ

ಪ್ರಸ್ತುತ ಇರುವ ನಿಯಮ ಏನು?
ಪ್ರಸ್ತುತ, ಕಂಪನಿಗಳು ಕಳೆದ ಎರಡು ತಿಂಗಳುಗಳಿಂದ ಜಿಎಸ್‌ಟಿಆರ್ -3 ಬಿ ಸಲ್ಲಿಸಲು ವಿಫಲವಾಗಿದ್ದದ, ಔಟರ್ ಸಪ್ಲೈ  ಅಥವಾ ಜಿಎಸ್‌ಟಿಆರ್ -1 ಅನ್ನು ಸಲ್ಲಿಸಲು ಅವರಿಗೆ ಅನುಮತಿ ನೀಡಲಾಗುವುದಿಲ್ಲ. ಕಂಪನಿಗಳು GSTR-1 ಅನ್ನು ಒಂದು ತಿಂಗಳವರೆಗೆ ಮುಂದಿನ ತಿಂಗಳಿನ 11 ನೇ ದಿನದೊಳಗೆ ಸಲ್ಲಿಸಬೇಕು. ಮತ್ತೊಂದೆಡೆ, GSTR-3B ಅನ್ನು ತಿಂಗಳ 20 ರಿಂದ 24 ನೇ ದಿನದವರೆಗೆ ಸಲ್ಲಿಸಬೇಕು, ಅದರ ಮೂಲಕ ಕಂಪನಿಗಳು ತೆರಿಗೆ ಪಾವತಿಸುತ್ತವೆ.

ಇದನ್ನೂ ಓದಿ-GOOD NEWS! IT ಕಂಪನಿಗಳಲ್ಲಿ ಬಂಪರ್ ಉದ್ಯೋಗಾವಕಾಶ - ಒಳ್ಳೆಯ ವೇತನ ಮತ್ತು ಬೋನಸ್!

GST ನೋಂದಣಿಗೆ ಆಧಾರ್ ಕಡ್ಡಾಯ (Aadhaar Mandatory For GST Registration)
ಇದಲ್ಲದೆ GST ನೋಂದಣಿಗಾಗಿ ಆಧಾರ್ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ, ಆಗ ಮಾತ್ರ ಕಂಪನಿಯು ಮರುಪಾವತಿಗಾಗಿ ಕ್ಲೈಮ್ ಮಾಡಬಹುದು. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಆಗಸ್ಟ್ 21, 2020 ರಿಂದ ಅನ್ವಯವಾಗುವಂತೆ GST ನೋಂದಣಿಗೆ ಆಧಾರ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ. ಕಂಪನಿಗಳು ತಮ್ಮ ಜಿಎಸ್‌ಟಿ ನೋಂದಣಿಯನ್ನು ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು ಎಂದು ಕೌನ್ಸಿಲ್ ಇದೀಗ ನಿರ್ಧರಿಸಿದೆ, ಆಗ ಮಾತ್ರ ಅವರು ಮರುಪಾವತಿಗಾಗಿ ಕ್ಲೈಮ್ ಮಾಡಬಹುದು ಅಥವಾ ರದ್ದಾದ ನೋಂದಣಿಯ ಮರುಸ್ಥಾಪನೆಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ-PAN Aadhaar Link:ಮತ್ತೆ ವಿಸ್ತರಣೆಯಾದ ಆಧಾರ್-ಪ್ಯಾನ್ ಜೋಡಣೆಯ Deadline

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News