ನವದೆಹಲಿ : ಪ್ರಸ್ತುತ ದಿನಗಳಲ್ಲಿ ಆಧಾರ್ ಕಾರ್ಡ್ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ. ಬಹುತೇಕ ಎಲ್ಲಾ ಅಧಿಕೃತ ಕೆಲಸಗಳಿಗೆ ಮತ್ತು ನಮ್ಮ ದೈನಂದಿನ ಚಟುವಟಿಕೆಗಳಿಗೆ ಆಧಾರ್ ತುಂಬಾ ಅಗತ್ಯವಿದೆ. ಇದನ್ನು ಗಮನಿಸಿದರೆ, ಆಧಾರ್ ಅಪ್ಡೇಟ್ ಆಗಬೇಕು ಮತ್ತು ಪ್ಯಾನ್ ಕಾರ್ಡ್ ಜೊತೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಕೇಂದ್ರ ಸರ್ಕಾರವು ವ್ಯಕ್ತಿಗಳು ತಮ್ಮ ಪ್ಯಾನ್ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್(PAN Aadhaar Linking) ಮಾಡುವುದನ್ನು ಕಡ್ಡಾಯಗೊಳಿಸಿದೆ ಮತ್ತು ಗಡುವಿನ ಮೊದಲು ಅದನ್ನು ಮಾಡಲು ವಿಫಲವಾದರೆ, ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.
ಇದನ್ನೂ ಓದಿ : LPG Gas Cylinder Price: ಅಡುಗೆ ಅನಿಲ ಬೆಲೆಯಲ್ಲಿ ರೂ.73.50 ಏರಿಕೆ, ಈ ತಿಂಗಳ ದರ ಎಷ್ಟು?
ಆನ್ಲೈನ್(Online)ನಲ್ಲಿ ಕೆಲವೆ ನಿಮಿಷಗಳಲ್ಲಿ ನಿಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಬಹುದು. ಈ ಕೆಳಗಿನ ಹಂತಗಳನ್ನ ಅನುಸರಿಸಿ:
- ಆದಾಯ ತೆರಿಗೆ ಇ-ಫಿಲ್ಲಿಂಗ್ ಪೋರ್ಟಲ್ಗೆ ಹೋಗಿ, https://incometaxindiaefiling.gov.in/
- ಕ್ವಿಕ್ ಲಿಂಕ್ಸ್ ವಿಭಾಗದಲ್ಲಿರುವ 'ಲಿಂಕ್ ಆಧಾರ್' ಗೆ ಹೋಗಿ
- ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆ(Aadhar Number)ಯನ್ನು ನಮೂದಿಸಿ
- ನಿಮ್ಮ ಆಧಾರ್ ಕಾರ್ಡ್ನಲ್ಲಿ ಉಲ್ಲೇಖಿಸಿರುವಂತೆ ನಿಮ್ಮ ಹೆಸರನ್ನು ನಮೂದಿಸಿ
ಇದನ್ನೂ ಓದಿ : New RBI Rules : ಇಂದಿನಿಂದ ಬದಲಾಗಲಿದೆ ವೇತನ, ಪಿಂಚಣಿ, EMI ಪಾವತಿ ನಿಯಮ
- ನೀವು ನಿಮ್ಮ ಸಂಖ್ಯೆಯನ್ನು ಆಧಾರ್ನಲ್ಲಿ ಲಿಂಕ್(Link) ಮಾಡಿದ್ದರೆ, ಅದನ್ನು ನಮೂದಿಸಿ ಮತ್ತು ಅದನ್ನು OTP ಮೂಲಕ ಪರಿಶೀಲಿಸಿ. ನಿಮ್ಮ ಸಂಖ್ಯೆಯನ್ನು ಲಿಂಕ್ ಮಾಡಿದ್ದರೆ ಮತ್ತು ನಿಮ್ಮ ಹುಟ್ಟಿದ ದಿನಾಂಕವನ್ನು ಮಾತ್ರ ಉಲ್ಲೇಖಿಸಿದರೆ, 'ಆಧಾರ್ ಕಾರ್ಡ್ನಲ್ಲಿ ನನ್ನ ಜನ್ಮ ವರ್ಷ ಮಾತ್ರ ಇದೆ' ಎಂಬ ಚೌಕ ಪೆಟ್ಟಿಗೆಯನ್ನು ಟಿಕ್ ಮಾಡಿ
- ಟಿಕ್ ಮಾರ್ಕ್ ‘ಯುಐಡಿಎಐ(UIDAI)ನೊಂದಿಗೆ ನನ್ನ ಆಧಾರ್ ವಿವರಗಳನ್ನು ಮೌಲ್ಯೀಕರಿಸಲು ನಾನು ಒಪ್ಪುತ್ತೇನೆ’
- ಪರಿಶೀಲನೆಗಾಗಿ Captcha Code ನಮೂದಿಸಿ
- 'ಲಿಂಕ್ ಆಧಾರ್' ಬಟನ್ ಆಯ್ಕೆ ಮಾಡಿ
- ಈಗ, ನೀವು ನಿಮ್ಮ ಆಧಾರ್ ಅನ್ನು ಪ್ಯಾನ್ ಕಾರ್ಡ್(PAN Card)ನೊಂದಿಗೆ ಯಶಸ್ವಿಯಾಗಿ ಲಿಂಕ್ ಮಾಡಿದ್ದೀರಿ ಎಂದು pop-up ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ : Sukanya Samriddhi Yojana: ಮಗಳ ಭವಿಷ್ಯ ಆರ್ಥಿಕವಾಗಿ ಭದ್ರಗೊಳಿಸಬೇಕಾದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ
ನೀವು ನಿಮ್ಮ ಆಧಾರ್ ಅನ್ನು ಪ್ಯಾನ್ ಜೊತೆಗೆ ಎಸ್ಎಂಎಸ್(SMS) ಮೂಲಕ ಲಿಂಕ್ ಮಾಡಬಹುದು. ನಿಮ್ಮ ನೋಂದಾಯಿತ ಸಂಖ್ಯೆಯಿಂದ "UIDPAN (Space) ನಿಮ್ಮ 12-ಅಂಕಿಯ ಆಧಾರ್ (Space) ನಿಮ್ಮ 10-ಅಂಕಿಯ PAN" ಅನ್ನು 567678 ಅಥವಾ 56161 ಗೆ ಕಳುಹಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ