Budget 2023: ಇಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಿಕ್ತು ಸಂತಸದ ಸುದ್ದಿ, ಆಟೋ ಸೆಕ್ಟರ್ ಘೋಷಣೆಗಳು ಇಲ್ಲಿವೆ

Union Budget 2023: ಈ ಬಾರಿಯ ಬಜೆಟ್ ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದಂತೆ ಬಗ್ಗೆ ಸರ್ಕಾರದ ಬದ್ಧತೆ ಮತ್ತು ಸಕಾರಾತ್ಮಕ ಧೋರಣೆ ಕಂಡುಬಂದಿದೆ. ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಕೈಗೆಟುಕುವಂತೆ ಮಾಡುವ ಮೂಲಕ, ಹೆಚ್ಚಿನ ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳತ್ತ ತಿರುಗಿಸಲು ಸರ್ಕಾರ ಪ್ರಯತ್ನಿಸಿದೆ.  

Written by - Nitin Tabib | Last Updated : Feb 1, 2023, 03:11 PM IST
  • ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸರ್ಕಾರದ ಅತ್ಯಂತ ಸಕಾರಾತ್ಮಕ ಧೋರಣೆ ಕಂಡುಬಂದಿದೆ.
  • ಈ ಬಜೆಟ್ ಮೂಲಕ, ಎಲೆಕ್ಟ್ರಿಕ್ ವಾಹನಗಳ ಬೆಲೆಗಳನ್ನು ಸಮಂಜಸವಾಗಿ ಇರಿಸುವ ಮೂಲಕ
  • ಹೆಚ್ಚಿನ ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳತ್ತ ತಿರುಗಿಸಲು ಸರ್ಕಾರ ಪ್ರಯತ್ನಿಸುತ್ತದೆ.
Budget 2023: ಇಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಿಕ್ತು ಸಂತಸದ ಸುದ್ದಿ, ಆಟೋ ಸೆಕ್ಟರ್ ಘೋಷಣೆಗಳು ಇಲ್ಲಿವೆ title=
ಎಲೆಕ್ಟ್ರಿಕ್ ಆಟೋ ಉದ್ಯಮಕ್ಕೆ ಬಜೆಟ್ ಕೊಡುಗೆ

Auto Budget 2023: ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್ ಆಟೋ ಉದ್ಯಮಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಮುಂಬರುವ ದಿನಗಳಲ್ಲಿ ಇದರ ಪ್ರಯೋಜನಗಳು ನೋಡಲು ಸಿಗಲಿದೆ ಎಂಬುದ ಹೇಳಿದರೆ ಅತಿಶಯೋಕ್ತಿ ಎನಿಸದು, ಈ ಬಜೆಟ್ ಮೂಲಕ, ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನು ಉತ್ತೇಜಿಸಲು ಸರ್ಕಾರವು ಅತ್ಯುತ್ತಮವಾಗಿ ಪ್ರಯತ್ನಿಸಿದೆ. ಈ ಬಾರಿಯ ಬಜೆಟ್ ನಲ್ಲಿ ಆಟೋ ಉದ್ಯಮಕ್ಕಾಗಿ ಏನು ಘೋಷಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೈಲೈಟ್ಸ್
>> ವಾಹನ ರಿಪ್ಲೇಸ್ಮೆಂಟ್.
>> ವಾಹನಗಳ ರಿಪ್ಲೇಸ್ಮೆಂಟ್, ಮಾಲಿನ್ಯವನ್ನು ಹೆಚ್ಚಿಸುವ ವಾಹನಗಳನ್ನು ಬದಲಾಯಿಸುವುದು ಅಥವಾ ಸ್ಕ್ರ್ಯಾಪ್ ಮಾಡುವುದು ಹಸಿರು ಪರಿಸರಕ್ಕೆ ಅವಶ್ಯಕ.
>> ಹಳೆಯ ವಾಹನಗಳನ್ನು ಬದಲಾಯಿಸಲು ರಾಜ್ಯಗಳಿಗೆ ನೆರವು ನೀಡಲಾಗುವುದು.
>> ಇದರ ಮೂಲಕ, ಹಳೆಯ ಆಂಬ್ಯುಲೆನ್ಸ್‌ಗಳನ್ನು ಸಹ ಬದಲಾಯಿಸಲಾಗುವುದು, ಇದರಿಂದ ಮಾಲಿನ್ಯವನ್ನು ಕಡಿಮೆ ಮಾಡಲು ಅದು ಸಹಕಾರಿಯಾಗಲಿದೆ.
>> ಕೈಗೆಟಕುವ ದರದಲ್ಲಿ ವಾಹನಗಳು.

ಆಟೋ ವಲಯಕ್ಕೆ ಬಜೆಟ್: ಪ್ರಮುಖ ಘೋಷಣೆಗಳು
2023 ರ ಬಜೆಟ್‌ನಲ್ಲಿ ಹಣಕಾಸು ಸಚಿವರು ಆಟೋ ವಲಯಕ್ಕೆ ಮಹತ್ವದ ಘೋಷಣೆಗಳನ್ನು ನೋಳಗಿಸಿದ್ದಾರೆ. ಇದರಲ್ಲಿ ವಾಹನ ಬದಲಾವಣೆಗೆ ಆದ್ಯತೆ ನೀಡಲಾಗುವುದು. ವಾಹನ ಬದಲಾವಣೆಯಲ್ಲಿ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಇದರ ದೊಡ್ಡ ಪ್ರಯೋಜನವೆಂದರೆ ಇದು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಇದು ಹಸಿರು ವಾತಾವರಣವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಎರಡನೆಯ ಮಹತ್ವದ ವಿಷಯ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಇದಕ್ಕಾಗಿ ನೆರವು ನೀಡಲಿದೆ. ಆದ್ದರಿಂದ ರಾಜ್ಯಗಳು ಹಳೆಯ ವಾಹನಗಳನ್ನು ಹೊಸ ವಾಹನಗಳೊಂದಿಗೆ ಬದಲಾಯಿಸಬಹುದು. ಇದು ಈ ಬಜೆಟ್‌ನ ಮಹತ್ವದ ಹೆಜ್ಜೆ. ಇದರಲ್ಲಿ ಈಗಿರುವ ಹಳೆಯ ಆಂಬ್ಯುಲೆನ್ಸ್ ಅನ್ನು ಸಹ ನೀವು ಬದಲಾಯಿಸಿಕೊಳ್ಳಬಹುದು.  ಇದು ಮಾಲಿನ್ಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಸಾಕಷ್ಟು ಪರಿಹಾರ ನಿರೀಕ್ಷಿಸಬಹುದು.

ಇದನ್ನೂ ಓದಿ-Budget 2023: ಇನ್ಮುಂದೆ ಸಗಣಿ ಕೂಡ ಆದಾಯದ ಮೂಲವಾಗಲಿದೆ. ಕೇಂದ್ರ ಸಚಿವೆಯ ಮಹತ್ವದ ಬಜೆಟ್ ಘೋಷಣೆ

ಮೂರನೆಯದಾಗಿ, 2023 ರ ಕೇಂದ್ರ ಬಜೆಟ್‌ನಲ್ಲಿ, ಆಟೋಮೊಬೈಲ್‌ಗಳು ಅಗ್ಗವಾಗಲಿದೆ ಎಂದು ಘೋಷಿಸಲಾಗಿದೆ. ಇದರಿಂದ ಜನಸಾಮಾನ್ಯರ ಜೇಬಿಗೆ ನೇರ ಲಾಭವಾಗಲಿದೆ ಮತ್ತು ದೇಶದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಲಿದೆ.

ಇದನ್ನೂ ಓದಿ-Budget 2023 Update: ಯಾವುದು ಅಗ್ಗವಾಯ್ತು, ಯಾವುದು ದುಬಾರಿಯಾಯ್ತು? ಇಲ್ಲಿದೆ ಲಿಸ್ಟ್

ನಾಲ್ಕನೆಯದಾಗಿ, ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸರ್ಕಾರದ ಅತ್ಯಂತ ಸಕಾರಾತ್ಮಕ ಧೋರಣೆ ಕಂಡುಬಂದಿದೆ. ಈ ಬಜೆಟ್ ಮೂಲಕ, ಎಲೆಕ್ಟ್ರಿಕ್ ವಾಹನಗಳ ಬೆಲೆಗಳನ್ನು ಸಮಂಜಸವಾಗಿ ಇರಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳತ್ತ ತಿರುಗಿಸಲು ಸರ್ಕಾರ ಪ್ರಯತ್ನಿಸುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News