ಇಪಿಎಫ್ ಆನ್‌ಲೈನ್ ನಾಮಿನೇಷನ್: 7 ಲಕ್ಷ ರೂ. ವಿಮೆ ಲಾಭಕ್ಕಾಗಿ ಕುಟುಂಬ ಸದಸ್ಯರನ್ನು ನೋಂದಾಯಿಸುವುದು ಹೇಗೆ?

ಇಪಿಎಫ್ ಆನ್‌ಲೈನ್ ನಾಮನಿರ್ದೇಶನ: ಇಪಿಎಫ್ ಚಂದಾದಾರರು ಆನ್‌ಲೈನ್ ನಾಮಿನೇಷನ್ ಮಾಡುವುದು ಹೇಗೆ? 7 ಲಕ್ಷ ರೂ. ವಿಮೆ ಲಾಭಕ್ಕಾಗಿ ಕುಟುಂಬ ಸದಸ್ಯರನ್ನು ನೋಂದಾಯಿಸುವುದು ಹೇಗೆ ಎಂದು ತಿಳಿಯಿರಿ.

Written by - Yashaswini V | Last Updated : Apr 18, 2022, 01:28 PM IST
  • ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯರು ಈಗ ತಮ್ಮ ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬಹುದು.
  • ಆದರೆ, ಪ್ರಯೋಜನಗಳನ್ನು ಪಡೆಯಲು, ಪಿಎಫ್ ಖಾತೆದಾರರು ಇ-ನಾಮನಿರ್ದೇಶನವನ್ನು ಸಲ್ಲಿಸಬೇಕು.
  • ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ, ಬದಲಿಗೆ ನೀವು ಕುಳಿತಲ್ಲಿಯೇ ಈ ಕೆಲಸವನ್ನು ಪೂರ್ಣಗೊಳಿಸಬಹುದು.
ಇಪಿಎಫ್ ಆನ್‌ಲೈನ್ ನಾಮಿನೇಷನ್: 7 ಲಕ್ಷ ರೂ. ವಿಮೆ ಲಾಭಕ್ಕಾಗಿ ಕುಟುಂಬ ಸದಸ್ಯರನ್ನು ನೋಂದಾಯಿಸುವುದು  ಹೇಗೆ? title=
Epf e nomination benefits

ಇಪಿಎಫ್ ಆನ್‌ಲೈನ್ ನಾಮಿನೇಷನ್:   ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇತ್ತೀಚೆಗೆ ಭವಿಷ್ಯ ನಿಧಿ (ಪಿಎಫ್) ಖಾತೆಗೆ ಇ-ನಾಮನಿರ್ದೇಶನ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಪ್ರಕಟಣೆಯ ಪ್ರಕಾರ,  ಇಪಿಎಫ್ಒನಲ್ಲಿ ಇ-ನಾಮನಿರ್ದೇಶನವನ್ನು ಸಲ್ಲಿಸದಿದ್ದಲ್ಲಿ, ಬಳಕೆದಾರರು ತಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ. 

ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯರು ಈಗ ತಮ್ಮ ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬಹುದು. ಆದರೆ, ಪ್ರಯೋಜನಗಳನ್ನು ಪಡೆಯಲು, ಪಿಎಫ್ ಖಾತೆದಾರರು ಇ-ನಾಮನಿರ್ದೇಶನವನ್ನು ಸಲ್ಲಿಸಬೇಕು. ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ, ಬದಲಿಗೆ ನೀವು ಕುಳಿತಲ್ಲಿಯೇ ಈ ಕೆಲಸವನ್ನು ಪೂರ್ಣಗೊಳಿಸಬಹುದು. 

ಇಪಿಎಫ್ ಆನ್‌ಲೈನ್ ನಾಮಿನೇಷನ್ ಪಿಎಫ್, ಪಿಂಚಣಿ ಮತ್ತು ಉದ್ಯೋಗಿ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (ಇಡಿಎಲ್‌ಐ)  ಅರ್ಹ ಕುಟುಂಬ ಸದಸ್ಯರಿಗೆ 7 ಲಕ್ಷ ರೂ.ವರೆಗೆ ವಿಮೆ  ಸೌಲಭ್ಯವನ್ನು ಒದಗಿಸುತ್ತದೆ. 

ಇದನ್ನೂ ಓದಿ- New Wage Code ಹೊಸ ಅಪ್‌ಡೇಟ್‌ ಜೊತೆಗೆ ಯಾವಾಗ ಜಾರಿ? ಇಲ್ಲಿದೆ ಮಾಹಿತಿ

ಇ-ನಾಮನಿರ್ದೇಶನವನ್ನು ಈಗ ಇಪಿಎಫ್ಒನಲ್ಲಿ ನೋಂದಾಯಿಸಲಾಗಿದೆ. ಇ-ನೋಂದಣಿ ನಂತರ, ಹೆಚ್ಚಿನ ಭೌತಿಕ ದಾಖಲೆಗಳ ಅಗತ್ಯವಿಲ್ಲ.
ಇಪಿಎಫ್ ಆನ್‌ಲೈನ್ ನಾಮಿನೇಷನ್ ಪ್ರಕ್ರಿಯೆ:
>> ನೀವು ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಸೇವೆಗಳ ವಿಭಾಗಕ್ಕೆ ಹೋಗಿ ಮತ್ತು ನಂತರ 'ಉದ್ಯೋಗಿಗಳಿಗಾಗಿ' ವರ್ಗಕ್ಕೆ ಹೋಗಿ.
>> ನೀವು 'ಸದಸ್ಯ ಯುಎಎನ್/ಆನ್‌ಲೈನ್ ಸೇವೆ' ಮೇಲೆ ಕ್ಲಿಕ್ ಮಾಡಬೇಕು.
>> ಯುನಿವರ್ಸಲ್ ಖಾತೆ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ.
>> 'ಮ್ಯಾನೇಜ್ ಟ್ಯಾಬ್' ಅಡಿಯಲ್ಲಿ 'ಇ-ನಾಮನಿರ್ದೇಶನ' ಆಯ್ಕೆಮಾಡಿ.
>> ಪರದೆಯ ಮೇಲೆ 'ವಿವರಗಳನ್ನು ಒದಗಿಸಿ' ಎಂಬ ಟ್ಯಾಬ್ ಕಾಣಿಸುತ್ತದೆ. ಅದರಲ್ಲಿ ಅಗಯ್ತ ದಾಖಲೆ ಭರ್ತಿ ಮಾಡಿ 'ಸೇವ್' ಬಟನ್ ಕ್ಲಿಕ್ ಮಾಡಿ.
>> ಕುಟುಂಬದ ಘೋಷಣೆಯನ್ನು ನವೀಕರಿಸಲು 'ಹೌದು' ಎಂದು ಕ್ಲಿಕ್ ಮಾಡಿ.
>> 'ಕುಟುಂಬ ವಿವರಗಳನ್ನು ಸೇರಿಸಿ' ಕ್ಲಿಕ್ ಮಾಡಿ. (ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬಹುದು).
>> ನಂತರ ಕುಟುಂಬದ ಯಾವ ಸದಸ್ಯರಿಗೆ ಎಷ್ಟು ಷೇರು ನೀಡಬೇಕು ಎಂಬುದನ್ನು ನೀವೇ ನಿರ್ಧರಿಸಿ. ಆದರೆ ಒಟ್ಟು ಮೊತ್ತವು ಶೇ.100ಕ್ಕೆ ಸಮವಾಗಿ ಹೊಂದಿಕೆಯಾಗಬೇಕು ಎಂಬುದನ್ನು ನೆನಪಿನಲ್ಲಿಡಿ.
>> ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ 'ಸೇವ್ ಇಪಿಎಫ್ ದಾಖಲಾತಿ' ಮೇಲೆ ಕ್ಲಿಕ್ ಮಾಡಿ.
>>  ಒಟಿಪಿ ರಚಿಸಲು 'e-Sign' ಮೇಲೆ ಕ್ಲಿಕ್ ಮಾಡಿ. ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ 'ಒಟಿಪಿ' ಅನ್ನು ಸಲ್ಲಿಸಿ.

ಇದನ್ನೂ ಓದಿ- Life insurance policy : ಜೀವ ವಿಮಾ ಪಾಲಿಸಿ ಖರೀದಿಸುವ ನೆನಪಿರಲಿ 5 ವಿಷಯಗಳು

ಇಪಿಎಫ್ ಇ-ನಾಮಿನೇಷನ್ ಪ್ರಯೋಜನಗಳು:
ಇಪಿಎಫ್ ಇ-ನಾಮನಿರ್ದೇಶನವು  ಪಿಎಫ್, ಪಿಂಚಣಿ, ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮಾ ಯೋಜನೆ  7 ಲಕ್ಷದವರೆಗೆ ಅರ್ಹ ಕುಟುಂಬ ಸದಸ್ಯರಿಗೆ ಆನ್‌ಲೈನ್ ಪಾವತಿಗೆ ಸಹಾಯ ಮಾಡುತ್ತದೆ. ನಾಮನಿರ್ದೇಶನಗಳನ್ನು ಯಾವಾಗ ಬೇಕಾದರೂ ನವೀಕರಿಸಬಹುದು. ಮದುವೆಯ ನಂತರ ಕಡ್ಡಾಯವಾಗಿ ನವೀಕರಣದ ಅಗತ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News