ICICI Bank Q2 FY22 Results: ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಶೇಕಡ 29.6 ರಷ್ಟು ಏರಿಕೆ

Written by - Zee Kannada News Desk | Last Updated : Oct 23, 2021, 05:31 PM IST
  • 2021-22 ರ ಆರ್ಥಿಕ ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹ 5,511 ಕೋಟಿ ನಿವ್ವಳ ಲಾಭವನ್ನು ಗಳಿಸುವ ಮೂಲಕ ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಶೇಕಡ 29.6 ಏರಿಕೆಯನ್ನು ಕಂಡಿದೆ.
  • ಇದು ಒಂದು ವರ್ಷದ ಹಿಂದೆ 4,251.3 ಕೋಟಿ ರೂ.ಇತ್ತು ಎನ್ನಲಾಗಿದೆ.
 ICICI Bank Q2 FY22 Results: ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಶೇಕಡ 29.6 ರಷ್ಟು ಏರಿಕೆ title=
ಸಾಂದರ್ಭಿಕ ಚಿತ್ರ

ನವದೆಹಲಿ: 2021-22 ರ ಆರ್ಥಿಕ ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ  ₹ 5,511 ಕೋಟಿ ನಿವ್ವಳ ಲಾಭವನ್ನು ಗಳಿಸುವ ಮೂಲಕ ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಶೇಕಡ  29.6 ಏರಿಕೆಯನ್ನು ಕಂಡಿದೆ..ಇದು ಒಂದು ವರ್ಷದ ಹಿಂದೆ 4,251.3 ಕೋಟಿ ರೂ.ಇತ್ತು ಎನ್ನಲಾಗಿದೆ.

ಐಸಿಐಸಿಐ ಬ್ಯಾಂಕ್ ಕ್ಯೂ 2 ಫಲಿತಾಂಶಗಳು: ನೀವು ತಿಳಿದುಕೊಳ್ಳಬೇಕಾಗಿರುವ ಸಂಗತಿಗಳು: 

ಐಸಿಐಸಿಐ ಬ್ಯಾಂಕಿನ( ICICI Bank) ಪ್ರಮುಖ ಕಾರ್ಯಾಚರಣೆಯ ಲಾಭ-ನಿಬಂಧನೆಗಳು ಮತ್ತು ತೆರಿಗೆಗಳ ಮೊದಲು ಲಾಭ, 2021-22ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 23 ರಷ್ಟು ಏರಿಕೆಯಾಗಿದೆ, 9,518 ಕೋಟಿಗೆ ಹೆಚ್ಚಳಗೊಂಡಿದೆ. ಈ ಹಿಂದಿನ ವರ್ಷದ ಅವಧಿಯಲ್ಲಿ ಇದು .7,719 ಕೋಟಿ ರೂ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: ICICI Bank Alert! ಖಾತೆಯ ಈ ವಿವರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ, ಭಾರೀ ನಷ್ಟ ಅನುಭವಿಸಬೇಕಾಗಬಹುದು

ಖಾಸಗಿ ವಲಯದ ಬ್ಯಾಂಕಿನ ನಿವ್ವಳ ಬಡ್ಡಿ ಆದಾಯ (NII) - ಅಥವಾ ಗಳಿಸಿದ ಬಡ್ಡಿ ಮತ್ತು ಪಾವತಿಸಿದ ಬಡ್ಡಿಯ ನಡುವಿನ ವ್ಯತ್ಯಾಸವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 25 ಶೇಕಡಾ 25 ರಷ್ಟು ಏರಿಕೆಯಾಗಿ ₹ 11,690 ಕೋಟಿಗೆ ತಲುಪಿದೆ, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ₹ 9,366 ಕೋಟಿ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: Mobile Banking: ನೀವು ಮೊಬೈಲ್ ಬ್ಯಾಂಕಿಂಗ್ ಬಳಸುತ್ತಿದ್ದರೆ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ಅಕ್ಟೋಬರ್ 22 ರಂದು, ಐಸಿಐಸಿಐ ಬ್ಯಾಂಕ್‌ನ ಷೇರುಗಳು ಬಿಎಸ್‌ಇಯಲ್ಲಿ 0.30 ಶೇಕಡಾ ಏರಿಕೆಯಾಗಿ ₹ 759.10 ಕ್ಕೆ ಸ್ಥಿರವಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News