ನಿವೃತ್ತಿಯ ನಂತರವೂ ಎದುರಾಗುವುದಿಲ್ಲ ಹಣದ ಸಮಸ್ಯೆ; ಸರ್ಕಾರದ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಪ್ರತೀ ತಿಂಗಳು ಸಿಗಲಿದೆ ಆದಾಯ

ನಮ್ಮ ಭವಿಷ್ಯವನ್ನು ಗಟ್ಟಿ ಮಾಡಿಕೊಳ್ಳುವುದು ತುಂಬಾ ಮುಖ್ಯ. ಬಹಳ ಸಲ  ನಿವೃತ್ತಿಯ ನಂತರ ಬದುಕು ಕಷ್ಟವಾಗಿ ಬಿಡುತ್ತದೆ. ಹಾಗಾಗಿ, ಮೊದಲೇ ಒಂದಷ್ಟು ಸ್ಕೀಮ್ ಗಳಲ್ಲಿ ಹೂಡಿಕೆ  ಮಾಡಿಬಿಟ್ಟರೆ ನಿವೃತ್ತಿಯ ನಂತರವೂ ಬದುಕು ಸುಂದರವಾಗಿರುತ್ತದೆ.    

Written by - Ranjitha R K | Last Updated : Jul 4, 2021, 11:27 AM IST
  • ನಿವೃತ್ತಿಯ ನಂತರ ಹಣಕಾಸು ಸುರಕ್ಷತೆಗಾಗಿ ಇಲ್ಲಿದೆ ಆಯ್ಕೆ,
  • ಮಾರುಕಟ್ಟೆಯಲ್ಲಿ ಲಭ್ಯವಿದೆ ಹಲವಾರು ಹೂಡಿಕೆ ಸ್ಕೀಮ್
  • ಆದರೆ ಬೆಸ್ಟ್ ಹೂಡಿಕೆ ಸ್ಕೀಂ ಆಯ್ಕೆ ಹೇಗೆ.. ?
ನಿವೃತ್ತಿಯ ನಂತರವೂ ಎದುರಾಗುವುದಿಲ್ಲ ಹಣದ ಸಮಸ್ಯೆ; ಸರ್ಕಾರದ  ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಪ್ರತೀ ತಿಂಗಳು ಸಿಗಲಿದೆ ಆದಾಯ  title=
ಮಾರುಕಟ್ಟೆಯಲ್ಲಿ ಲಭ್ಯವಿದೆ ಹಲವಾರು ಹೂಡಿಕೆ ಸ್ಕೀಮ್ (photo zee news)

ನವದೆಹಲಿ :  ನಮ್ಮ ಭವಿಷ್ಯವನ್ನು ಗಟ್ಟಿ ಮಾಡಿಕೊಳ್ಳುವುದು ತುಂಬಾ ಮುಖ್ಯ. ಬಹಳ ಸಲ  ನಿವೃತ್ತಿಯ ನಂತರ ಬದುಕು ಕಷ್ಟವಾಗಿ ಬಿಡುತ್ತದೆ. ಹಾಗಾಗಿ, ಮೊದಲೇ ಒಂದಷ್ಟು ಸ್ಕೀಮ್ ಗಳಲ್ಲಿ ಹೂಡಿಕೆ (Investment plans) ಮಾಡಿಬಿಟ್ಟರೆ ನಿವೃತ್ತಿಯ ನಂತರವೂ ಬದುಕು ಸುಂದರವಾಗಿರುತ್ತದೆ.  ಈ  ನಿವೃತ್ತಿ ಹೂಡಿಕೆಗಾಗಿಯೇ ಮಾರುಕಟ್ಟೆಯಲ್ಲಿ ಇದೀಗ ಅತ್ಯುತ್ತಮ ಸ್ಕೀಮ್ ಗಳು ಲಭ್ಯವಿವೆ.  ಆದರೆ, ಇದನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ.  ಹೂಡಿಕೆ ಮಾಡುವುದು ಎಲ್ಲಿ..? ತಿಳಿದಕೊಳ್ಳೋಣ ಬನ್ನಿ.

1. ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (SCSS) :
ಅಂಚೆ ಕಚೇರಿ ಅಥವಾ ಸಾರ್ವಜನಿಕ ವಲಯದ ಬ್ಯಾಂಕುಗಳ ಮೂಲ SCSSಯಲ್ಲಿ ಹೂಡಿಕೆ ಮಾಡಬಹುದು.  ಇದರಿಂದ ನಿಮ್ಮ ಭವಿಷ್ಯ ಸುರಕ್ಷಿತವಾಗಿರುತ್ತದೆ.  ಇದರಲ್ಲಿ 15 ಲಕ್ಷ ಹೂಡಿಕೆ (investment) ಮಾಡಬಹುದು.  ಇದರ ಮೆಚ್ಯೂರಿಟಿ ಅವಧಿ 5 ವರ್ಷ.  ಬೇಕಾದರೆ ಇನ್ನೂ ಮೂರು ವರ್ಷ ವಿಸ್ತರಿಸಬಹುದು.  ಇದರಲ್ಲಿ ನಾವು ತ್ರೈಮಾಸಿಕ ಪಾವತಿ ಆಯ್ಕೆ ಮಾಡಬಹುದಾಗಿದೆ. ಇದರಲ್ಲಿ ಸದ್ಯ ಶೇ. 7.40 ರಷ್ಟು ವಾರ್ಷಿಕ ಬಡ್ಡಿ ಸಿಗಲಿದೆ.

ಇದನ್ನೂ ಓದಿ : Petrol-Diesel Price : ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್ 36 ಪೈಸೆ,ಡೀಸೆಲ್ 17 ಏರಿಕೆ!

2. ಪ್ರಧಾನ ಮಂತ್ರಿ ಬಂಧನ ಯೋಜನೆ :
PMVYY ಇದು ವರಿಷ್ಠ ನಾಗರಿಕರಿಗೆ ಸರ್ಕಾರದ ಪರವಾಗಿ ನೀಡುವ ಯೋಜನೆಯಾಗಿದೆ.  ಇದರಲ್ಲಿ 60 ವರ್ಷ ಅಥವಾ ಅದಕ್ಕೂ ಅಧಿಕ ವರ್ಷದವರು ಹೂಡಿಕೆ ಮಾಡಬಹುದಾಗಿದೆ. ಈ ಸರ್ಕಾರಿ ಯೋಜನೆಯಲ್ಲಿ  (Government scheme) ಗರಿಷ್ಠ ವಯೋಮಿತಿ ಇಲ್ಲ.  ಇದರಲ್ಲೂ 15 ಲಕ್ಷದ ತನಕ ಹೂಡಿಕೆ ಮಾಡಬಹುದು. ವಾರ್ಷಿಕ ಪಿಂಚಣಿಗಾಗಿ (Pension) ನೀವು ಕಡಿಮೆಯೆಂದರೆ 1,44,578 ರೂಪಾಯಿ ಹಾಕಬಹುದು.  ಆದರೆ, ಗರಿಷ್ಠ ಖರೀದಿ ದರ 14,45,783 ರೂಪಾಯಿ ಆಗಿದೆ.  ಪಿಎಂವಿವಿವೈ ಯೋಜನೆಯ (PMVYY) ಪ್ರಿಮೆಚ್ಯೂರ್ ವಿತ್ ಡ್ರಾವಲ್ ಸೌಲಭ್ಯ ಕೂಡಾ ಇದೆ. 

3.ಆರ್ ಬಿಐ ಫ್ಲೋಟಿಂಗ್ ರೇಟ್ ಬಾಂಡ್ :
ವೃದ್ದಾಪ್ಯದಲ್ಲಿ ಹಣಕಾಸು ಸುರಕ್ಷತೆಗಾಗಿ ಆರ್ ಬಿಐ ಫ್ಲೋಟಿಂಗ್ ರೇಟ್ ಬಾಂಡ್ ನಲ್ಲಿ (RBI Floating rate bond) ಹೂಡಿಕೆ ಮಾಡಬಹುದು. ಇದರಲ್ಲಿ ಗರಿಷ್ಠ 15 ಲಕ್ಷ ರೂಪಾಯಿ ಅಥವಾ ಅದಕ್ಕೂ ಹೆಚ್ಚು ಹಣ ಹೂಡಿಕೆ ಮಾಡಲು ಅವಕಾಶ ಇದೆ. 1000 ರೂಪಾಯಿಯಿಂದ ಹೂಡಿಕೆ ಆರಂಭಿಸಬಹುದು.  ಇದಕ್ಕೆ ಯಾವುದೇ ಗರಿಷ್ಠ ಮಿತಿ ಇಲ್ಲ. ಬಡ್ಡಿ ಶೇ. 7.15 ರಷ್ಟು ನೀಡಲಾಗುತ್ತಿದೆ.

4.ನ್ಯಾಶನಲ್ ಸೇವಿಂಗ್ಸ್ ಸ್ಕೀಮ್ :
ಅಂಚೆ ಕಚೇರಿಯ ಸ್ಕೀಮ್ ಯಾವತ್ತಿಗೂ ಸೆಕ್ಯೂರ್ ಮತ್ತು ಸುರಕ್ಷಿತ ಎಂದು ಹೇಳಲಾಗುತ್ತದೆ.  ಹಾಗಾಗಿ, ನೀವು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೆಟ್ (NSC) ಯೋಜನೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದರಲ್ಲಿ ಆದಾಯ ತೆರಿಗೆ ವಿನಾಯಿತಿ ಕೂಡಾ ಸಿಗುತ್ತದೆ.  ವಾರ್ಷಿಕ ಶೇ. 6.8 ರ ಬಡ್ಡಿ ಸಿಗುತ್ತದೆ. 

ಇದನ್ನೂ ಓದಿ : Business Opportunity: ಕೇವಲ 10000 ರೂ. ವಿನಿಯೋಗಿಸಿ ಲಕ್ಷಾಂತರ ಗಳಿಕೆ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News