ನವದೆಹಲಿ : ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ (Punjab national bank) ಖಾತೆ ಹೊಂದಿರುವವರಿಗೆ ಒಳ್ಳೆಯ ಸುದ್ದಿ ಇದೆ. ನಿಮ್ಮ ಡೆಬಿಟ್ ಕಾರ್ಡ್ ಮೇಲೆ ಈಗ ಬ್ಯಾಂಕ್ 2 ಲಕ್ಷ ರೂಪಾಯಿಗಳ ಲಾಭ ನೀಡುತ್ತಿದೆ. ಇಷ್ಟು ಮಾತ್ರ ಅಲ್ಲದೆ, ಇದರೊಂದಿಗೆ, ಇನ್ನು ಅನೇಕ ಪ್ರಯೋಜನಗಳು ಸಿಗಲಿವೆ. PNB ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೇಲೆ ಬ್ಯಾಂಕ್ ನಿಮಗೆ ಈ ಪ್ರಯೋಜನವನ್ನು ನೀಡುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab national bank) ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌ನಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ಅದು ಹೇಳಿದೆ. ಈ ಆಫರ್ ಮತ್ತು ಈ ಕಾರ್ಡ್ ನ ಲಾಭವನ್ನು ತಕ್ಷಣವೇ ಪಡೆದುಕೊಳ್ಳುವಂತೆ ಬ್ಯಾಂಕ್ (Bank) ತನ್ನ ಗ್ರಾಹಕರಿಗೆ ಹೇಳಿದೆ.
ಇದನ್ನೂ ಓದಿ : ಹಳೆಯ ನೋಟು, ನಾಣ್ಯಗಳ ಆನ್‌ಲೈನ್ ಮಾರಾಟ ಮತ್ತು ಖರೀದಿ: ಆರ್‌ಬಿಐನ ಎಚ್ಚರಿಕೆಯ ಸಂದೇಶ..!
PNB ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌ನ ಪ್ರಯೋಜನಗಳು :
-ಉಚಿತ ವಿಮಾನ ನಿಲ್ದಾಣ ಲಾಂಜ್ ಆಕ್ಸಸ್
-ಪ್ರತಿ ಶುಕ್ರವಾರ ಅಮೆಜಾನ್ (Amazon) ಮತ್ತು ಸ್ವಿಗ್ಗಿಯಲ್ಲಿ (Swiggy) 20% ರಿಯಾಯಿತಿ ಇರುತ್ತದೆ.
-2 ಲಕ್ಷ ಉಚಿತ ಅಪಘಾತ ವಿಮೆ ಸೌಲಭ್ಯ ಲಭ್ಯವಿರುತ್ತದೆ.
-ಇದರ ಹೊರತಾಗಿ, ನೀವು ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯಬಹುದು
ಕಾರ್ಡ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ :
ಈ ಕಾರ್ಡ್‌ನ ಪ್ರಯೋಜನಗಳ ಕುರಿತು ಹೆಚ್ಚಿನ ಮಾಹಿತಿಗಾಗಿ https://www.rupay.co.in/our-cards/rupay-debit/rupay-platinum ಈ ಲಿಂಕ್‌ಗೆ ಭೇಟಿ ನೀಡಬಹುದು. ಈ ಕಾರ್ಡ್‌ನಿಂದ ಸಿಗುವ ಎಲ್ಲಾ ಆಫರ್ ಗಳ ಬಗ್ಗೆ ಇಲ್ಲಿ ಮಾಹಿತಿ ಪಡೆಯಬಹುದು.
ಅನೇಕ ವಿಧದ ಕಾರ್ಡ್ ಲಭ್ಯ :
ಇದಲ್ಲದೇ, ಪಂಜಾಬ್ ನ್ಯಾಷನಲ್ ಬ್ಯಾಂಕಿನ ಗ್ರಾಹಕರಿಗೂ ಅನೇಕ ಕಾರ್ಡ್‌ಗಳ ಆಯ್ಕೆ ಸಿಗುತ್ತದೆ. ಬ್ಯಾಂಕ್ ಗ್ರಾಹಕರಿಗೆ ಎಲ್ಲಾ ರೀತಿಯ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು (debit card) ಒದಗಿಸುತ್ತದೆ. ಗ್ರಾಹಕರು ಎಲ್ಲಾ ಕಾರ್ಡ್‌ಗಳಲ್ಲಿ ಬೇರೆ ಬೇರೆ ಕೊಡುಗೆಗಳನ್ನು ಪಡೆಯಲಿದ್ದಾರೆ.
ಇದನ್ನೂ ಓದಿ : LIC ಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ನೀವು ₹ 1 ಕೋಟಿಯ ಪಡೆಯಬಹುದು ಲಾಭ!
ಅಗ್ಗದ ಮನೆ ಖರೀದಿ ಅವಕಾಶ :
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಮಗೆ ಆಗಸ್ಟ್ 12 ರಂದು ಅಗ್ಗದ ಮನೆ ಖರೀದಿಸಲು ಸುವರ್ಣಾವಕಾಶವನ್ನು ನೀಡುತ್ತಿದೆ.ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಂದು ಮೆಘಾ ಇ-ಹರಾಜನ್ನು ಆಯೋಜಿಸಲಿದೆ. ಇದರಲ್ಲಿ ಅಗ್ಗದ ದರಕ್ಕೆ ಮನೆಗಾಗಿ ಬಿಡ್ ಮಾಡಬಹುದು. ಈ ಹರಾಜಿನಲ್ಲಿ, ವಸತಿ, ವಾಣಿಜ್ಯ, ಕೈಗಾರಿಕಾ ಮತ್ತು ಕೃಷಿ ಸೇರಿದಂತೆ ಎಲ್ಲಾ ರೀತಿಯ ಆಸ್ತಿಗಳನ್ನು ಬ್ಯಾಂಕ್ ಹರಾಜು ಮಾಡಲಿದೆ. ಅಗತ್ಯಕ್ಕೆ ಅನುಗುಣವಾಗಿ ಯಾವುದೇ ಆಸ್ತಿಯನ್ನು ಬಿಡ್ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ