ಮತ್ತೆ ಹೊಳಪು ಪಡೆದ ಚಿನ್ನ ಮತ್ತು ಬೆಳ್ಳಿ ! ಇಂದು ಎಷ್ಟಿದೆ ನೋಡಿ ಬಂಗಾರದ ಬೆಲೆ

Gold-Silver Price Today, 2nd November : ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಹೆಚ್ಚಳವಾಗಿದೆ.  

Written by - Ranjitha R K | Last Updated : Nov 2, 2023, 01:17 PM IST
  • ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಏರಿಕೆ
  • ಮತ್ತೆ ದುಬಾರಿಯಾದ ಚಿನ್ನ
  • COMEX ನಲ್ಲಿಯೂ ಏರಿಕೆ ಕಂಡ ಚಿನ್ನ
ಮತ್ತೆ ಹೊಳಪು ಪಡೆದ ಚಿನ್ನ ಮತ್ತು ಬೆಳ್ಳಿ ! ಇಂದು ಎಷ್ಟಿದೆ ನೋಡಿ ಬಂಗಾರದ ಬೆಲೆ  title=

Gold-Silver Price Today, 2nd November : ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಹೆಚ್ಚಳವಾಗಿದೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿತ್ತು. ಆದರೆ ಇಂದು ಮತ್ತೆ ಬಂಗಾರದ ದರದಲ್ಲಿ 110 ರೂ. ಏರಿಕೆಯಾಗಿದೆ. 

ಮತ್ತೆ ದುಬಾರಿಯಾದ ಚಿನ್ನ : 
ಎಂಸಿಎಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಮತ್ತೆ ಏರಿಕೆಯಾಗಿದೆ. ಚಿನ್ನದ ದರದಲ್ಲಿ 125 ರೂಪಾಯಿ ಏರಿಕೆಯಾಗಿದೆ. ಡಿಸೆಂಬರ್ ಫ್ಯೂಚರ್ಸ್ ಬೆಲೆ 10 ಗ್ರಾಂಗೆ 60,910 ರೂ. ಆಗಿದೆ.  ಅದೇ ರೀತಿ ಬೆಳ್ಳಿ ಬೆಲೆ ಕೂಡಾ ಸುಮಾರು 600 ರೂ.ಯಷ್ಟು ಏರಿಕೆ ಕಂಡಿದೆ.  ಎಂಸಿಎಕ್ಸ್‌ನಲ್ಲಿ ಬೆಳ್ಳಿಯ ದರ ಪ್ರತಿ ಕೆಜಿಗೆ 71885 ರೂ.ಗೆ ತಲುಪಿದೆ.

ಬೆಂಗಳೂರಿನಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ : 
22 ಕ್ಯಾರೆಟ್ ಚಿನ್ನದ ದರ  - 56,500 ರೂ. 
24 ಕ್ಯಾರೆಟ್ ಚಿನ್ನದ ದರ - 61,640 ರೂ. 

ದೇಶದ ವಿವಿಧ ನಗರಗಳಲ್ಲಿ 22 ಕ್ಯಾರೆಟ್ 10 ಗ್ರಾಂ  ಚಿನ್ನದ ಬೆಲೆ : 
ದೆಹಲಿ - 56,650 ರೂ.
ಚೆನ್ನೈ - 56,950 ರೂ. 
ಬೆಂಗಳೂರು -56,500 ರೂ. 
ಹೈದರಾಬಾದ್ -56,500 ರೂ. 
ಕೋಲ್ಕತ್ತಾ -56,500 ರೂ. 
ಕೇರಳ - 56,500 ರೂ. 

ಇದನ್ನೂ ಓದಿ :Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಕುಸಿತ..!

COMEX ನಲ್ಲಿಯೂ ಏರಿಕೆ ಕಂಡ ಚಿನ್ನ : 
ಅಂತರಾಷ್ಟ್ರೀಯ ಸ್ಪಾಟ್ ಮಾರುಕಟ್ಟೆಯಲ್ಲಿ, ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 1993 ಡಾಲರ್ ನಂತೆ ವಹಿವಾಟು ನಡೆಸುತ್ತಿದೆ. COMEXನಲ್ಲಿ ಬೆಳ್ಳಿಯ ಬೆಲೆ ಪ್ರತಿ ಔನ್ಸ್ ಗೆ  23.12 ಡಾಲರ್  ತಲುಪಿದೆ. 

ದೇಶದ ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಂ ) : 
ದೆಹಲಿ - 7,480 ರೂ.  
ಚೆನ್ನೈ - 7,770 ರೂ. 
ಬೆಂಗಳೂರು - 7,300 ರೂ.
ಹೈದರಾಬಾದ್ - 7,770 ರೂ. 
ಕೋಲ್ಕತ್ತಾ -7,480 ರೂ.  
ಕೇರಳ - 7,770 ರೂ. 

ಇದನ್ನೂ ಓದಿ : ರೇಷನ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಪಡಿತರ ಚೀಟಿ ಇರುವ ಎಲ್ಲರಿಗೂ ಈ ಅವಕಾಶ ನೀಡಿದ ರಾಜ್ಯ ಸರ್ಕಾರ

ಈ ರೀತಿಯ ದರಗಳನ್ನು ಪರಿಶೀಲಿಸಿ : 
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಇಂದಿನ ಬೆಲೆಯನ್ನು ಪರಿಶೀಲಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News