ರೇಷನ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಪಡಿತರ ಚೀಟಿ ಇರುವ ಎಲ್ಲರಿಗೂ ಈ ಅವಕಾಶ ನೀಡಿದ ರಾಜ್ಯ ಸರ್ಕಾರ

ಸಾರ್ವಜನಿಕರಿಂದ ಮನವಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೀಗ ರೇಶನ್ ಕಾರ್ಡ್ ತಿದ್ದುಪಡಿಗೆ ಮತ್ತೊಮ್ಮೆಅವಕಾಶ ಕಲ್ಪಿಸಲಾಗಿದೆ.   

Written by - Ranjitha R K | Last Updated : Nov 2, 2023, 11:29 AM IST
  • ಪಡಿತರ ಚೀಟಿ ಹೊಂದಿರುವವರಿಗೆ ಗುಡ್ ನ್ಯೂಸ್
  • ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ
  • ಹಂತ-ಹಂತವಾಗಿ ತಿದ್ದುಪಡಿಗೆ ಅವಕಾಶ
ರೇಷನ್  ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಪಡಿತರ ಚೀಟಿ ಇರುವ ಎಲ್ಲರಿಗೂ ಈ ಅವಕಾಶ ನೀಡಿದ ರಾಜ್ಯ ಸರ್ಕಾರ  title=

ಬೆಂಗಳೂರು :  ಪಡಿತರ ಚೀಟಿ ಹೊಂದಿರುವವರಿಗೆ ಗುಡ್ ನ್ಯೂಸ್ ಇದೆ. ರೇಷನ್‌ ಕಾರ್ಡ್‌ ತಿದ್ದುಪಡಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಈ ಮೂಲಕ ಪಡಿತರ ಚೀಟಿದಾರರು ತಮ್ಮ ದಾಖಲೆಯನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. 

ರೇಶನ್ ಕಾರ್ಡ್ ತಿದ್ದುಪಡಿಗೆ ಅವಕಾಶ : 
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ತಿದ್ದಪಡಿಗೆ ಅವಕಾಶ ನೀಡುವಂತೆ  ಸಾರ್ವಜನಿಕರಿಂದ ಮನವಿ ಕೇಳಿ ಬಂದಿತ್ತು. ಈ ಮನವಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೀಗ ರೇಶನ್ ಕಾರ್ಡ್ ತಿದ್ದುಪಡಿಗೆ ಮತ್ತೊಮ್ಮೆಅವಕಾಶ ಕಲ್ಪಿಸಲಾಗಿದೆ. 

ಇದನ್ನೂ ಓದಿ : 18 ತಿಂಗಳ ಬಾಕಿ ಡಿಎ ಬಗ್ಗೆ ಹೊರ ಬಿತ್ತು ಮಾಹಿತಿ ! ಸರ್ಕಾರಿ ನೌಕರರಿಗೆ ಈ ದಿನ ರಿಲೀಸ್ ಆಗಲಿದೆ ಹಣ

ಹಂತ-ಹಂತವಾಗಿ ತಿದ್ದುಪಡಿಗೆ ಅವಕಾಶ : 
ಇನ್ನು ಸರ್ವರ್‌ ಸಮಸ್ಯೆಯನ್ನು ನಿವಾರಿಸುವ ಹಿನ್ನೆಲೆ ಈ ಬಾರಿ ಹಂತ-ಹಂತವಾಗಿ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಹಿಂದೆ ಎರಡು ಬಾರಿ ರೇಶನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದಾಗಲೂ ಸರ್ವರ್ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿ  ಹಂತ ಹಂತವಾಗಿ ಅವಕಾಶ ಕಲ್ಪಿಸಲಾಗಿದೆ. 

ಎಲ್ಲಿ  ಮಾಡಿಸಬಹುದು ತಿದ್ದುಪಡಿ ? : 
ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು. 

ಏನೇನು ತಿದ್ದುಪಡಿ ಮಾಡಬಹುದು ? :
-ಫಲಾನುಭವಿ ಹೆಸರು ಬದಲಾವಣೆ
- ಪಡಿತರ ಕೇಂದ್ರ ಬದಲಾವಣೆ
- ಕಾರ್ಡ್ ಸದಸ್ಯರ ಹೆಸರು ಡಿಲಿಟ್ & ಸೇರ್ಪಡೆ ಮಾಡುವುದು 
- ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆ ಮಾಡಬಹುದಾಗಿದೆ

ಮಹಿಳೆಯನ್ನು ಮನೆಯ ಯಜಮಾನಿ ಎಂದು ಹೆಸರು ಬದಲಾವಣೆ ಮಾಡಲು ಬಯಸುವವರು ಈ ಸಂದರ್ಭದಲ್ಲಿ ಮಾಡಿಕೊಳ್ಳಬಹುದಾಗಿದೆ. 

ಇದನ್ನೂ ಓದಿ : ಸ್ವಿಗ್ಗಿ, ಜೊಮಾಟೋಗಿಂತ ಕಡಿಮೆ ದರದಲ್ಲಿ ಫುಡ್‌ ಡೆಲಿವರಿ ಮಾಡುತ್ತೆ ONDC: ಕಾರಣವೇನು ಗೊತ್ತಾ?

ಪಡಿತರ ವಿತರಕರ ಬೇಡಿಕೆ : 
ಈ ಮಧ್ಯೆ, ಕಮಿಷನ್ ಹಣಕ್ಕೆ ಆಗ್ರಹಿಸಿ ನವೆಂಬರ್ 7ರ ವರೆಗೂ  ಪಡಿತರ ವಿತರಿಸದಿರಲು ಪಡಿತರ ವಿತರಕರೂ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪಡಿತರ ಅಂಗಡಿ ಬಂದ್ ಮಾಡಲು ತೀರ್ಮಾನಿಸಲಾಗಿದೆ.  
ಪಡಿತರ ವಿತರಕರಿಂದ‌ ನವೆಂಬರ್ 7ರಂದು ಫ್ರೀಡಂ ಪಾರ್ಕ್‌ನಲ್ಲಿ  ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಫೇರ್‌ಪ್ರೈಸ್ ಷಾಪ್ ಡೀಲರ್ಸ್ ಅಸೋಸಿಯೇಷನ್ ಸಭೆಯಲ್ಲಿ ತಿರ್ಮಾನದಂತೆ  ಪ್ರತಿಭಟನೆ  ನಡೆಯಲಿದೆ. 

ಬೇಡಿಕೆಗಳು ಏನು? :
-ಇ ಕೆ ವೈ ಸಿ ಕೆಲಸ ನಿರ್ವಹಿಸಿದ 23.75 ಕೋಟಿ ಸಹಾಯಧನ ಕೂಡಲೇ ಬಿಡುಗಡೆ ಮಾಡುವುದು
-ಗೋವಾ ಕೇರಳ ಮಹಾರಾಷ್ಟ ರಾಜ್ಯದಲ್ಲಿ ಕೊಡುತ್ತಿರುವ ಕಮಿಷನ್ ಹಾಗೆ ಕರ್ನಾಟಕದಲ್ಲೂ ಕಮಿಷನ್  ಕೊಡಬೇಕು
-ಕ್ವಿಂಟಲ್ ಗೆ 250 ರೂ. ಯಂತೆ ಕಮಿಷನ್ ಜಾರಿಗೆ ಸರ್ಕಾರ ಆದೇಶ ಹೊರಡಿಸಬೇಕು
-ಮಾಲೀಕರು ಮೃತಪಟ್ಟರೆ ಅವರ ಕುಟುಂಬಕ್ಕೆ ನೆರವು ನೀಡಬೇಕು
-ಸರ್ವರ್ ಸಮಸ್ಯೆ ಇರುವುದರಿಂದ ಪ್ರತಿ ಜಿಲ್ಲೆಗೂ ಪ್ರತ್ಯೇಕ ಸರ್ವರ್ ಸೆಂಟರ್ ಕಲ್ಪಿಸಬೇಕು
-ಐದು ಕೆ. ಜಿ ಅಕ್ಕಿ ಹಣವನ್ನು DBT ಮಾಡುವ ಬದಲು ಬೇರೆ ಆಹಾರ ಪದಾರ್ಥಗಳನ್ನು ನೀಡಬೇಕು
-DBT ಮೂಲಕವೇ ಕಮಿಷನ್ ಹಣವನ್ನು ಪಡಿತರ ವಿತರಕರಿಗೆ ನೀಡಬೇಕು.

ಇದನ್ನೂ ಓದಿ : ಮತ್ತೆ ಭರ್ಜರಿ ಕುಸಿತ ಕಂಡ ಬಂಗಾರದ ಬೆಲೆ ! ಚಿನ್ನ ಖರೀದಿಸಲು ಸೂಕ್ತ ಸಮಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News