Indian Railways : ರೈಲು ಟಿಕೆಟ್ ಬುಕ್ ಮಾಡಲು ಆಧಾರ್ ಕಾರ್ಡ್, ಪಾಸ್ ಪೋರ್ಟ್ ಕಡ್ಡಾಯ!

ರೈಲ್ವೆ ಆನ್ ಲೈನ್ ಕೆಟ್ ಬುಕಿಂಗ್ ಸಮಯದಲ್ಲಿ ಪಾಸ್ ಪೋರ್ಟ್ ಮತ್ತು ಆಧಾರ್ ಕಾರ್ಡ್ ವಿವರ ಕಡ್ಡಾಯ

Last Updated : Jun 26, 2021, 11:02 AM IST
  • ಅಕ್ರಮ ಟಿಕೆಟ್ ಬುಕಿಂಗ್ ಏಜೆಂಟರನ್ನು ತಡೆಯುವ ಪ್ರಯತ್ನದ ಸಲುವಾಗಿ
  • ರೈಲ್ವೆ ಆನ್ ಲೈನ್ ಕೆಟ್ ಬುಕಿಂಗ್ ಸಮಯದಲ್ಲಿ ಪಾಸ್ ಪೋರ್ಟ್ ಮತ್ತು ಆಧಾರ್ ಕಾರ್ಡ್ ವಿವರ ಕಡ್ಡಾಯ
  • ಲಾಗ್ ಇನ್ ಮಾಡಲು ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ನಂತಹ ದಾಖಲೆಗಳನ್ನು ಕಡ್ಡಾಯ
Indian Railways : ರೈಲು ಟಿಕೆಟ್ ಬುಕ್ ಮಾಡಲು ಆಧಾರ್ ಕಾರ್ಡ್, ಪಾಸ್ ಪೋರ್ಟ್ ಕಡ್ಡಾಯ! title=

ನವದೆಹಲಿ : ಅಕ್ರಮ ಟಿಕೆಟ್ ಬುಕಿಂಗ್ ಏಜೆಂಟರನ್ನು ತಡೆಯುವ ಪ್ರಯತ್ನದ ಸಲುವಾಗಿ, ಭಾರತೀಯ ರೈಲ್ವೆ ಆನ್ ಲೈನ್ ಬುಕಿಂಗ್ ಸಮಯದಲ್ಲಿ ಪಾಸ್ ಪೋರ್ಟ್ ಮತ್ತು ಆಧಾರ್ ಕಾರ್ಡ್ ವಿವರಗಳನ್ನು ಕಡ್ಡಾಯಗೊಳಿಸಲು ಮುಂದಾಗಿದೆ.

ಬಳಕೆದಾರ ಹೆಸರು ಮತ್ತು ಪಾಸ್ ವರ್ಡ್(Password) ನೊಂದಿಗೆ ಲಾಗಿನ್ ಆಗುವ ಬದಲು, ಒಬ್ಬ ವ್ಯಕ್ತಿಯು ವೆಬ್ ಸೈಟ್ ಗೆ ಲಾಗ್ ಇನ್ ಆಗುವ ಮೊದಲು ಮಾನ್ಯ ಗುರುತಿನ ದಾಖಲೆಯಾಗಿರುವ ಈ ಸರ್ಕಾರಿ ದಾಖಲೆಗಳಲ್ಲಿ ಯಾವುದಾದರೂ ಒಂದು ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ : Delta Plus Variant: ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ 8 ರಾಜ್ಯಗಳಿಗೆ ಪತ್ರ ಬರೆದು ಎಚ್ಚರಿಕೆ ನೀಡಿದ ಕೇಂದ್ರ ಹೇಳಿದ್ದೇನು?

ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ರೈಲು ಟಿಕೆಟ್ ಗಳನ್ನು ಕಾಯ್ದಿರಿಸಲು ತನ್ನ ವೆಬ್ ಸೈಟ್ ಅನ್ನು ದುರುಪಯೋಗಪಡಿಸಿಕೊಳ್ಳುವುದರಿಂದ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಲು ಆಧಾರ್ ಕಾರ್ಡ್, ಪಾಸ್ ಪೋರ್ಟ್ ಕಡ್ಡಾಯಗೊಳಿಸಲು ಮುಂದಾಗಿ, ಶೀಘ್ರವೇ ಈ ನಿಯಮ ಜಾರಿಗೆ ಬರಲಿದೆ ಎನ್ನಲಾಗಿದೆ.

ಇದನ್ನೂ ಓದಿ : ಪಿನಾಕಾ ಮತ್ತು 122 ಎಂಎಂ ಕ್ಯಾಲಿಬರ್ ರಾಕೆಟ್‌ಗಳ ಉಡಾವಣೆ

ಲಾಗ್ ಇನ್ ಮಾಡಲು ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್(PAN Card and Passport) ನಂತಹ ದಾಖಲೆಗಳನ್ನು ಕಡ್ಡಾಯಗೊಳಿಸಲು ನಾವು ಐಆರ್ ಸಿಟಿಸಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಆಧಾರ್ ಕಾರ್ಡ್ ಸೇರಿಸುವ ಕೆಲಸ ಅಂತಿಮ ಹಂತದಲ್ಲಿದೆ' ಎಂದು ರೈಲ್ವೆ ರಕ್ಷಣಾ ಪಡೆಯ ಡಿಜಿ ಅರುಣ್ ಕುಮಾರ್ ಹೇಳಿದರು.

ಇದನ್ನೂ ಓದಿ : Finance Ministry Big Announcement: Corona ಪೀಡಿತರಿಗೆ ಭಾರಿ ನೆಮ್ಮದಿ ನೀಡಿದ ಕೇಂದ್ರ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News