IRCTC: ಇನ್ನು ಟಿಕೆಟ್ ಬುಕ್ಕಿಂಗ್ ಆಗಲಿದೆ ಬಲು ಸುಲಭ ; ಬಂದಿದೆ ಹೊಸ ವೆಬ್ ಸೈಟ್, ಮೊಬೈಲ್ ಆ್ಯಪ್

ರೈಲು ಟಿಕೆಟ್ ಕಾಯ್ದಿರಿಸಲು, ಪ್ರಯಾಣಿಕರು ಈಗ ಹೆಚ್ಚು ಪ್ರಯಾಸ ಪಡಬೇಕಾಗಿಲ್ಲ. ಐಆರ್‌ಸಿಟಿಸಿ ತನ್ನ ವೆಬ್‌ಸೈಟ್‌ಗೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ.   

Written by - Zee Kannada News Desk | Last Updated : Dec 31, 2020, 07:34 PM IST
  • ಟ್ರೇನ್ ಟಿಕೆಟ್ ಬುಕ್ಕಿಂಗ್ ಆಗಲಿದೆ ಇನ್ನು ಸುಲಭ
  • ಬುಕ್ಕಿಂಗ್ ಗಾಗಿ ತಂದಿದೆ ನೂತನ ವೆಬ್ ಸೈಟ್, ಮೊಬೈಲ್ ಆ್ಯಪ್
  • ಹಲವು ವೈಶಿಷ್ಟ್ಯಗಳಿಂದ ಕೂಡಿದೆ ಹೊಸ ವೆಬ್ ಸೈಟ್
IRCTC: ಇನ್ನು ಟಿಕೆಟ್ ಬುಕ್ಕಿಂಗ್ ಆಗಲಿದೆ  ಬಲು ಸುಲಭ ; ಬಂದಿದೆ  ಹೊಸ ವೆಬ್ ಸೈಟ್, ಮೊಬೈಲ್ ಆ್ಯಪ್ title=
IRCTC ಹೊರ ತಂದಿದೆ ಹೊಸ ವೆಬ್ ಸೈಟ್ ಮತ್ತು ಮೊಬೈಲ್ ಆ್ಯಪ್ (file photoe)

ನವದೆಹಲಿ:  ಇಂದಿನಿಂದ ರೈಲು ಟಿಕೆಟ್ ಬುಕಿಂಗ್ (Ticket Booking) ಶೈಲಿಯು ಬದಲಾಗಿದೆ.  ರೈಲ್ವೆ ಸಚಿವ ಪಿಯೂಷ್ ಗೋಯಲ್  ಐಆರ್‌ಸಿಟಿಸಿಯ (IRCTC) ಹೊಸ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಅನ್ನು ಉದ್ಘಾಟಿಸಿದರು. ಹೊಸ ವೆಬ್‌ಸೈಟ್‌ನಿಂದ  ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆ ಸುಲಭವಾಗಲಿದೆ  ಎಂದು ಐಆರ್‌ಸಿಟಿಸಿ ಹೇಳಿಕೊಂಡಿದೆ. ಇನ್ನು ಮುಂದೆ ಟಿಕೆಟ್ ಕಾಯ್ದಿರಿಸುವುದು ಮೊದಲಿಗಿಂತ ಸುಲಭ ಮತ್ತು ವೇಗವಾಗಿರಲಿದೆ.

ಐಆರ್‌ಸಿಟಿಸಿಯ (IRCTC) ವೆಬ್‌ಸೈಟ್ https://www.irctc.co.in/nget/train-search ನ ವಿನ್ಯಾಸವು  ಸಂಪೂರ್ಣವಾಗಿ ಬದಲಾಗಿದೆ. ಇದರಲ್ಲಿ ಐಆರ್ ಸಿಟಿಸಿ ಕೆಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ.  ಅವು ಯಾವುವು ಮತ್ತು ಪ್ರಯಾಣಿಕರು ಇದರಿಂದ ಹೇಗೆ ಪ್ರಯೋಜನ ಪಡೆಯಬಹುದು ಎಂಬುದನ್ನು ನೋಡೋಣ.

ALSO READ : ತನ್ನ ಯಾತ್ರಿಗಳಿಗೆ ವಿಶೇಷ ಅಲರ್ಟ್ ಜಾರಿಗೊಳಿಸಿದೆ IRCTC

ಹೊಸ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಹೊಸದೇನಿದೆ?
1. ಐಆರ್‌ಸಿಟಿಸಿಯ ಮುಖ ಪುಟದಲ್ಲಿ, ಎಲ್ಲಾ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಸರ್ಚ್ ಆಯ್ಕೆಯನ್ನು ನೀವು ಪಡೆಯುತ್ತೀರಿ. ಅಂದರೆ, ನೀವು ನಿಲ್ದಾಣಗಳ ಹೆಸರು, ಕ್ಲಾಸ್, ದಿನಾಂಕವನ್ನು ಮೊದಲ ಪುಟದಲ್ಲಿ ಭರ್ತಿ ಮಾಡಬೇಕು .
2. ಮುಂದಿನ ಪುಟವು ರೈಲುಗಳ ಮಾಹಿತಿಯನ್ನು ನೀಡುತ್ತದೆ.   ಈ ಮಾಹಿತಿ ನೀವು ಎರಡು ನಿಲ್ದಾಣಗಳ ನಡುವೆ ಭರ್ತಿ ಮಾಡಿದ ವಿವರಗಳನ್ನು ಆಧರಿಸಿರುತ್ತದೆ.
3- ಈ ಪುಟದಲ್ಲಿ ರೈಲುಗಳ ಹೆಸರುಗಳು, ಅವುಗಳ ಸಮಯ, ಲಭ್ಯವಿರುವ ಆಸನಗಳು, ಎಲ್ಲಾ ಕ್ಲಾಸಿನ ಶುಲ್ಕಗಳ (Ticket Fare) ವಿವರವನ್ನು  ಒಂದೇ ಸ್ಥಳದಲ್ಲಿ ಪಡೆಯುತ್ತೀರಿ. 
4. ನಿಮ್ಮ ಪ್ರವಾಸದ ದಿನಾಂಕವನ್ನು ಬದಲಾಯಿಸಲು ಮತ್ತು ಮುಂದಿನ  ದಿನಾಂಕಕ್ಕೆ ಟಿಕೆಟ್ ಇದೆಯಾ ಎಂದು ನೋಡಲು ನೀವು ಬಯಸಿದರೆ, 'ಬುಕ್ ನೌ' ಜೊತೆಗೆ  ದಿನಾಂಕಗಳ ಆಯ್ಕೆಯನ್ನು ನೀಡಲಾಗಿದೆ.  ಇದರಿಂದಾಗಿ ಮುಂದಿನ ದಿನಾಂಕಗಳಲ್ಲಿ  ಆಸನ ಲಭ್ಯವಿದೆಯೋ (Ticket Available) ಇಲ್ಲವೋ ಎಂಬುದರ ಬಗ್ಗೆಯೂ ತಿಳಿದುಕೊಳ್ಳಬಹುದು. 
5. ಯಾವ ದಿನಾಂಕದಂದು ವೈಟಿಂಗ್ ಲಿಸ್ಟ್ ನಲ್ಲಿದೆ, ಮತ್ತು ಆ ದಿನಾಂಕದಂದು ಟಿಕೆಟ್ ಬುಕ್ ಮಾಡಿದರೆ ಕನ್ಫರ್ಮ್ ಆಗುವ ಸಾಧ್ಯತೆ ಎಷ್ಟಿದೆ ಎನ್ನುವುದನ್ನು ಕೂಡಾ ತಿಳಿಸುತ್ತದೆ. ಇದರೊಂದಿಗೆ ಆ ದಿನಾಂಕಕ್ಕೆ ಟಿಕೆಟ್ ಕಾಯ್ದಿರಿಸಬೇಕೆ ಅಥವಾ ಬೇಡವೇ ಎಂಬುದನ್ನು  ನಿರ್ಧರಿಸಲು ಸಾಧ್ಯವಾಗುತ್ತದೆ. 
6.  ಈಗ ಬುಕ್ ನೌ ಬಟನ್ ಒತ್ತಿದ ಕೂಡಲೇ  ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯನ್ನು ಆರಂಭಿಸಬಹುದು.

ALSO READ : IRCTC-SBI ರೂಪೆ ಕಾರ್ಡ್ ಮೂಲಕ ಶಾಪಿಂಗ್ ಮಾಡಿ ಆಕರ್ಷಕ ಕೊಡುಗೆಗಳನ್ನು ಪಡೆಯಿರಿ

ಐಆರ್‌ಸಿಟಿಸಿ ಪ್ರಯಾಣಿಕರ ವಿವರಗಳನ್ನು ಸೇವ್ ಮಾಡಿಟ್ಟುಕೊಳ್ಳುತ್ತದೆ: 

1. ಹೊಸ ವೆಬ್‌ಸೈಟ್ ನಲ್ಲಿ ಹಿಂದಿನ ಪಾವತಿಯ ವಿವರಗಳೂ ಲಭ್ಯವಿರುತ್ತದೆ.  ನಿಮಗೆ ಬೇಕಾದಾಗ ನೀವು ಅದನ್ನು ನೋಡಬಹುದು
2. ಐಆರ್‌ಸಿಟಿಸಿಯಲ್ಲಿ  ಈಗ ನಿಮ್ಮ ಹಳೆಯ ಪ್ರಯಾಣದ ವಿವರಗಳನ್ನು ಸಹ ಪಡೆದುಕೊಳ್ಳಬಹುದು.  ಇದರಿಂದ ಮುಂದಿನ ಬಾರಿ  ಟಿಕೆಟ್ ಕಾಯ್ದಿರಿಸುವಾಗ, (Reservation) ಟೈಪಿಂಗ್ ಗಾಗಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿದಂತಾಗುತ್ತದೆ. 
3. ಹಣ ಪಾವತಿ ವಿವರಗಳನ್ನು ಭರ್ತಿ ಮಾಡಲು ಪ್ರತ್ಯೇಕ ವಿಂಡೋ ತೆರೆಯುತ್ತದೆ, ಇದರಿಂದಾಗಿ ಯಾವುದೇ ತಪ್ಪು ಕಂಡುಬಂದಲ್ಲಿ ಅದನ್ನು ಸರಿಪಡಿಸಬಹುದು.
4.  ಮರುಪಾವತಿ ಇದ್ದರೆ,  ಅದರ ಸ್ಥಿತಿಯನ್ನು ವೆಬ್‌ಸೈಟ್‌ನಲ್ಲಿಯೇ ನೋಡಬಹುದು.
5- ಟಿಕೆಟ್ ಬುಕಿಂಗ್ (Ticket Booking) ಜೊತೆಗೆ, ಆಹಾರ, ಹೋಟೆಲ್ ರೂಮ್ ಬುಕಿಂಗ್ ಎಲ್ಲವನ್ನೂ ಒಂದೇ ಕಡೆ ಮಾಡಬಹುದು.  
6. ನೆಚ್ಚಿನ ಪ್ರವಾಸಗಳನ್ನು ಇಲ್ಲಿಯೇ ಕಾಯ್ದಿರಿಸಬಹುದು.  ಆದರೆ ಇದಕ್ಕೆ ಸಂಬಂಧಿತ ಮಾಹಿತಿಯನ್ನು  ಭರ್ತಿ ಮಾಡಬೇಕಾಗುತ್ತದೆ.

ALSO READ : ಟ್ರೇನ್ ಟಿಕೆಟ್ ಬುಕ್ಕಿಂಗ್ ಕುರಿತು ಹೊಸ ನಿಯಮ ಜಾರಿಗೊಳಿಸಿದೆ IRCTC, ತಪ್ಪದೆ ತಿಳಿದುಕೊಳ್ಳಿ

ಈ ಸಂದರ್ಭದಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ (Piyush Goyal)  ಎಸ್‌ಬಿಐ-ಐಆರ್‌ಸಿಟಿಸಿ ಕ್ರೆಡಿಟ್ ಕಾರ್ಡ್ (Credit Card) ಬಗ್ಗೆ ಮಾಹಿತಿ ನೀಡಿದರು.  ಎಲ್ಲಾ ರೈಲ್ವೆ ಸಿಬ್ಬಂದಿಗಳು ಎಸ್‌ಬಿಐ-ಐಆರ್‌ಸಿಟಿಸಿ ಕ್ರೆಡಿಟ್ ಕಾರ್ಡ್ ಪಡೆದು ಈ ಕಾರ್ಡ್ ಮೂಲಕ, ಟಿಕೆಟ್ ಕಾಯ್ದಿರಿಸುವಂತೆ ಹೇಳಿದ್ದಾರೆ.  ಐಆರ್‌ಸಿಟಿಸಿಯಲ್ಲಿ ಪ್ರತಿದಿನ 8 ಲಕ್ಷ ಟಿಕೆಟ್‌ಗಳನ್ನು ಕಾಯ್ದಿರಿಸಲಾಗುವುದು ಎಂದವರು ಮಾಹಿತಿ ನೀಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News