ರೈಲು ಪ್ರಯಾಣಿಕರಿಗಾಗಿ ಹೊಸ ಸೌಲಭ್ಯ ಪರಿಚಯಿಸಿದ IRCTC

Indian Railways Food Facility: ಐಆರ್ಸಿಟಿಸಿಯ ಹೊಸ  ಹೊಸ ಸೌಲಭ್ಯದ ಅಡಿಯಲ್ಲಿ, ನೀವು ಪ್ರಯಾಣದ ಸಮಯದಲ್ಲಿ ವಾಟ್ಸಾಪ್ನಲ್ಲಿ ಫುಡ್ ಆರ್ಡರ್ ಮಾಡಬಹುದು. ಇದಕ್ಕಾಗಿ ಐಆರ್ಸಿಟಿಸಿಯ ಆಹಾರ ವಿತರಣಾ ಸೇವೆ ಝೂಪ್ ಮತ್ತು ಜಿಯೋ ಹ್ಯಾಪ್ಟಿಕ್ ಒಪ್ಪಂದ ಮಾಡಿಕೊಂಡಿವೆ. 

Written by - Yashaswini V | Last Updated : Aug 30, 2022, 12:44 PM IST
  • ಕಳೆದ ಕೆಲವು ತಿಂಗಳುಗಳಲ್ಲಿ, ಭಾರತೀಯ ರೈಲ್ವೆ ಮತ್ತು ಐಆರ್ಸಿಟಿಸಿ ಹಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ.
  • ಇವು ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಲು ಸಹಕಾರಿ ಆಗಿವೆ.
  • ಇದೀಗ ಐಆರ್ಸಿಟಿಸಿ ಮತ್ತೊಮ್ಮೆ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ.
ರೈಲು ಪ್ರಯಾಣಿಕರಿಗಾಗಿ ಹೊಸ ಸೌಲಭ್ಯ ಪರಿಚಯಿಸಿದ IRCTC title=
IRCTC Food Delivery

IRCTC ಆಹಾರ ವಿತರಣಾ ಸೌಲಭ್ಯ: ಭಾರತೀಯ ರೈಲ್ವೆ ಮತ್ತು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ (IRCTC) ನಿರಂತರವಾಗಿ ಪ್ರಯಾಣಿಕರ ಅನುಕೂಲಕ್ಕೆ ಸಹಾಯಕವಾಗುವಂತಹ ಸೌಲಭ್ಯಗಳನ್ನೂ ಪರಿಚಯಿಸುತ್ತಲೇ ಇರುತ್ತವೆ. ಕಳೆದ ಕೆಲವು ತಿಂಗಳುಗಳಲ್ಲಿ, ಭಾರತೀಯ ರೈಲ್ವೆ ಮತ್ತು ಐಆರ್ಸಿಟಿಸಿ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ಹಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ.  ಇದೀಗ ಐಆರ್ಸಿಟಿಸಿ ಮತ್ತೊಮ್ಮೆ  ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ.  ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಈ ಸೇವೆಯ ಪ್ರಯೋಜನ ಲಭ್ಯವಾಗಲಿದೆ.

ರೈಲು ಪ್ರಯಾಣದ ವೇಳೆ ವಾಟ್ಸಾಪ್ ಮೂಲಕ ಫುಡ್ ಆರ್ಡರ್ ಮಾಡಬಹುದು:
ಹೌದು, ಹೊಸ ಸೌಲಭ್ಯದ ಅಡಿಯಲ್ಲಿ ನೀವು ರೈಲಿನಲ್ಲಿ ಪ್ರಯಾಣಿಸುವಾಗ ವಾಟ್ಸಾಪ್ ನಿಂದ ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತದೆ. ಐಆರ್ಸಿಟಿಸಿಯ ಆಹಾರ ವಿತರಣಾ ಸೇವೆ ಜೂಪ್ ಮತ್ತು ಜಿಯೋ ಹ್ಯಾಪ್ಟಿಕ್  ಒಟ್ಟಿಗೆ ಈ ಸೇವೆಯನ್ನು ಪ್ರಾರಂಭಿಸಿವೆ. ಇದೀಗ ದೇಶಾದ್ಯಂತ 100ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಆರಂಭಿಸಲಾಗಿದೆ. ಪ್ರಯಾಣಿಕರಿಂದ ಬರುವ ಪ್ರತಿಕ್ರಿಯೆ ಆಧರಿಸಿ, ಈ ಸೌಲಭ್ಯವನ್ನು ಇತರ ನಿಲ್ದಾಣಗಳಲ್ಲಿಯೂ ಪ್ರಾರಂಭಿಸಲಾಗುವುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ- 8 ಬ್ಯಾಂಕುಗಳ ಮೇಲೆ ಲಕ್ಷ ಲಕ್ಷ ದಂಡ ವಿಧಿಸಿದ RBI: ನಿಮ್ಮ ಖಾತೆಯೂ ಇಲ್ಲಿದೆಯೇ?

ರಿಯಲ್ ಟೈಮ್ ಟ್ರ್ಯಾಕಿಂಗ್ ಸೌಲಭ್ಯದೊಂದಿಗೆ ರೈಲಿನಲ್ಲಿ ಪ್ರಯಾಣಿಸುವಾಗ ವಾಟ್ಸಾಪ್ ಚಾಟ್‌ಬಾಟ್‌ನಿಂದ ಸಂದೇಶ ಕಳುಹಿಸುವ ಮೂಲಕ ನೀವು ಆಹಾರವನ್ನು ಆರ್ಡರ್ ಮಾಡಬಹುದು. ಆಹಾರವನ್ನು ಆರ್ಡರ್ ಮಾಡಲು, ಪ್ರಯಾಣಿಕರಿಗೆ ಪಿಎನ್ಆರ್ ಅಗತ್ಯವಿರುತ್ತದೆ.  ಪಿಎನ್ಆರ್  ನೊಂದಿಗೆ ಆರ್ಡರ್ ಮಾಡಿದಾಗ, ನಿಮ್ಮ ಆಹಾರವನ್ನು ನೇರವಾಗಿ  ನೀವು ಕುಳಿತಿರುವ ಜಾಗಕ್ಕೆ ತಲುಪಿಸಲಾಗುತ್ತದೆ. ಇಷ್ಟೇ ಅಲ್ಲ, ಆಹಾರವನ್ನು ಆರ್ಡರ್ ಮಾಡಿದ ನಂತರ, ನೀವು ಅದನ್ನು ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಬಹುದು. ಇದಲ್ಲದೆ, ಯಾವುದೇ ಸಮಸ್ಯೆ ಇದ್ದರೆ, ನೀವು ಬೆಂಬಲ ತಂಡದ ಸಹಾಯವನ್ನು ತೆಗೆದುಕೊಳ್ಳಬಹುದು.

ಈ ಸೇವೆಯು ಈ ನಿಲ್ದಾಣಗಳಲ್ಲಿ ಲಭ್ಯವಿರುತ್ತದೆ. ಇದೀಗ 100 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ವಾಟ್ಸಾಪ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇವುಗಳಲ್ಲಿ ವಿಜಯವಾಡ, ವಡೋದರಾ, ಮೊರಾದಾಬಾದ್, ವಾರಂಗಲ್ ಜೊತೆಗೆ ದೀನ್ ದಯಾಳ್ ಉಪಾಧ್ಯಾಯ, ಕಾನ್ಪುರ್, ಆಗ್ರಾ ಕ್ಯಾಂಟ್, ತುಂಡ್ಲಾ ಜಂಕ್ಷನ್, ಬಲ್ಹರ್ಷಾ ಜಂಕ್ಷನ್ ಇತ್ಯಾದಿ ಸೇರಿವೆ.

ಇದನ್ನೂ ಓದಿ- ದೇಶದ ರೈತರಿಗೊಂದು ಸಂತಸದ ಸುದ್ದಿ, ಕೇಂದ್ರ ಸರ್ಕಾರದಿಂದ ರೈತರಿಗೆ 3 ಲಕ್ಷ ಧನಸಹಾಯ

ಈ ಸಂಖ್ಯೆಗೆ ಚಾಟ್ ಮಾಡುವ ಮೂಲಕ ಫುಡ್ ಆರ್ಡರ್ ಮಾಡಬಹುದು:
ಆಹಾರವನ್ನು ಆರ್ಡರ್ ಮಾಡಲು ನೀವು ವಾಟ್ಸಾಪ್ ಮೊಬೈಲ್ ಸಂಖ್ಯೆ +91-7042062070 ನಲ್ಲಿ ಜೂಪ್‌ನೊಂದಿಗೆ ಚಾಟ್ ಮಾಡಬಹುದು. 

ರೈಲು ಪ್ರಯಾಣದ ವೇಳೆ ವಾಟ್ಸಾಪ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
* ಮೊದಲನೆಯದಾಗಿ, ಝೂಪ್ ವಾಟ್ಸಾಪ್‌ ಚಾಟ್‌ಬಾಟ್ ಸಂಖ್ಯೆ +91-7042062070 ಅನ್ನು ನಿಮ್ಮ ಮೊಬೈಲ್‌ನಲ್ಲಿ ಉಳಿಸಿ.
* ಈಗ ನೀವು ವಾಟ್ಸಾಪ್‌ಗೆ ಹೋಗಿ ಝೂಪ್ ಚಾಟ್‌ಬಾಟ್ ಅನ್ನು ತೆರೆಯಬೇಕು.
*  ಇಲ್ಲಿ ನೀವು ನಿಮ್ಮ 10 ಅಂಕಿಯ ಪಿಎನ್ಆರ್ ಸಂಖ್ಯೆಯನ್ನು ಟೈಪ್ ಮಾಡಬೇಕು.
* ಇದರ ನಂತರ ನಿಮ್ಮ ವಿವರಗಳನ್ನು ಝೂಪ್ ಮೂಲಕ ಪರಿಶೀಲಿಸಲಾಗುತ್ತದೆ. ಇದರ ನಂತರ ನೀವು ಮುಂಬರುವ ನಿಲ್ದಾಣವನ್ನು ಆಯ್ಕೆ ಮಾಡಬೇಕು.
* ಇಲ್ಲಿ ಝೂಪ್ ಚಾಟ್‌ಬಾಟ್‌ನಲ್ಲಿ ನೀವು ಕೆಲವು ರೆಸ್ಟೋರೆಂಟ್‌ಗಳ ಆಯ್ಕೆಯನ್ನು ಪಡೆಯುತ್ತೀರಿ, ಇದರಿಂದ ನೀವು ನಿಮ್ಮ ಆಹಾರವನ್ನು ಆರ್ಡರ್ ಮಾಡಬಹುದು. ಇಲ್ಲಿ ನೀವು ಪಾವತಿ ಮೋಡ್ ಅನ್ನು ಪಡೆಯುತ್ತೀರಿ.
* ಆಹಾರವನ್ನು ಆರ್ಡರ್ ಮಾಡಿದ ನಂತರ ಮತ್ತು ವಹಿವಾಟು ಪೂರ್ಣಗೊಳಿಸಿದ ನಂತರ, ನೀವು ಚಾಟ್‌ಬಾಟ್ ಮೂಲಕ ನಿಮ್ಮ ಆರ್ಡರ್ ಅನ್ನು ಟ್ರ್ಯಾಕ್ ಮಾಡಬಹುದು. ನಂತರ, ರೈಲು ಆಯ್ದ ನಿಲ್ದಾಣವನ್ನು ತಲುಪಿದ ತಕ್ಷಣ ಝೂಪ್ ಆಹಾರವನ್ನು ತಲುಪಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News