LIC Aadhaar Shila : ಭಾರತೀಯ ಜೀವ ವಿಮಾ ನಿಗಮ (LIC) ಸಮಾಜದ ಪ್ರತಿಯೊಂದು ವರ್ಗಕ್ಕೂ ಪಾಲಿಸಿಗಳನ್ನು ಹೊಂದಿದೆ. ಇದು ವಿಮಾ ಕ್ಷೇತ್ರದಲ್ಲಿ ಮಾರುಕಟ್ಟೆಯ ಲೀಡರ್ ಆಗಲು ಮೂಲ ಕಾರಣವಾಗಿದೆ. ಇದು ಎಲ್ಲಾ ಆದಾಯ ಗುಂಪಿನ ಜನರಿಗೆ ಯೋಜನೆಗಳನ್ನು ನೀಡುತ್ತಿದೆ. ಎಲ್ಐಸಿ ಆಧಾರ್ ಶಿಲಾ ಪಾಲಿಸಿಯು ಕಡಿಮೆ ಮತ್ತು ಮಧ್ಯಮ ಆದಾಯದ ಜನರಿಗೆ ಕನಿಷ್ಠ ವಿಮಾ ಮೊತ್ತ 75000 ರೂ. ಮತ್ತು ಗರಿಷ್ಠ ರೂ 3 ಲಕ್ಷಗಳು.
ಎಲ್ಐಸಿ ಆಧಾರ್ ಶಿಲಾ ಯೋಜನೆಯಲ್ಲಿ ಲಾಭ ಪಡೆಯಬಹುದು. ಇದರಲ್ಲಿ ಹೂಡಿಕೆ ಮಾಡಲು ನೀವು ದಿನಕ್ಕೆ ಅಲ್ಪ ಮೊತ್ತವನ್ನು ಮೀಸಲಿಟ್ಟರೆ ಸಾಕು. ಹೆಚ್ಚಿನ ಎಲ್ಐಸಿ ಪಾಲಿಸಿಗಳಂತೆ ಇದು ದೀರ್ಘಾವಧಿಯ ಹೂಡಿಕೆಯಾಗಿದೆ. ಇದು ವೈಯಕ್ತಿಕ ಸಾವಿನ ರಕ್ಷಣೆಯನ್ನು ಸಹ ನೀಡುತ್ತದೆ. ಇದರಲ್ಲಿ ನೀವು ಪ್ರತಿದಿನ 58 ರೂ.ಗಳನ್ನು ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ಸಮಯದಲ್ಲಿ ನಿಮಗೆ ಲಕ್ಷ ಲಕ್ಷ ಹಣ ಪಡೆಯಬಹುದು. ಹೇಗೆ? ಈ ಪಾಲಿಸಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಇದನ್ನೂ ಓದಿ : Gold Price Record High : ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ!
ಎಲ್ಐಸಿ ಯ ಆಧಾರ್ ಶಿಲಾ ಒಂದು ಲಿಂಕ್ ಮಾಡದ, ಭಾಗವಹಿಸುವ, ವೈಯಕ್ತಿಕ, ಜೀವ ವಿಮೆ ಯೋಜನೆಯಾಗಿದೆ. ಇದು ರಕ್ಷಣೆಯ ಜೊತೆಗೆ ಉಳಿತಾಯವನ್ನೂ ನೀಡುತ್ತದೆ. ಪಾಲಿಸಿದಾರರ ದುರದೃಷ್ಟಕರ ಮರಣದ ಸಂದರ್ಭದಲ್ಲಿ ಇದು ಕುಟುಂಬಕ್ಕೆ ಹಣಕಾಸಿನ ನೆರವು ನೀಡುತ್ತದೆ ಮತ್ತು ಮೆಚ್ಯೂರಿಟಿ ಸಮಯದಲ್ಲಿ ಒಂದು ದೊಡ್ಡ ಮೊತ್ತವನ್ನು ನೀಡುತ್ತದೆ. ಸಾಲ ಸೌಲಭ್ಯವೂ ಇದೆ.
ಸಾವಿನ ಮೇಲೆ ವಿಮಾ ಮೊತ್ತವು ವಾರ್ಷಿಕ ಪ್ರೀಮಿಯಂಗಳ ಏಳು ಪಟ್ಟು ಮತ್ತು ಮೂಲ ವಿಮಾ ಮೊತ್ತದ ಶೇ.110 ರಷ್ಟು ಸಿಗಲಿದೆ.
ಕನಿಷ್ಠ ಮೂಲ ವಿಮಾ ಮೊತ್ತ 75000 ರೂ. ಮತ್ತು ಗರಿಷ್ಠ 3 ಲಕ್ಷ ರೂ.
ಪ್ರವೇಶದ ಕನಿಷ್ಠ ವಯಸ್ಸು 8 ವರ್ಷಗಳು ಮತ್ತು ಪ್ರವೇಶದ ಗರಿಷ್ಠ ವಯಸ್ಸು 55 ವರ್ಷಗಳು. ಪಾಲಿಸಿ ಅವಧಿಯು 10 ರಿಂದ 20 ವರ್ಷಗಳು.
ಈ ಯೋಜನೆಯು ಮಹಿಳೆಯರಿಗೆ ಮಾತ್ರ. ಕನಿಷ್ಠ ಯೋಜನಾ ಅವಧಿಯು 10 ಮತ್ತು 20 ವರ್ಷಗಳ ನಡುವೆ ಇರುತ್ತದೆ. ಮುಕ್ತಾಯಕ್ಕೆ ಗರಿಷ್ಠ ವಯಸ್ಸು 70 ವರ್ಷಗಳು. ಇದು ಲಾಯಲ್ಟಿ ಸೇರ್ಪಡೆ ವೈಶಿಷ್ಟ್ಯವನ್ನು ಸಹ ಹೊಂದಿದೆ.
ಪ್ರೀಮಿಯಂಗಳನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ವಿಧಾನದಲ್ಲಿ ಪಾವತಿಸಬೇಕಾಗುತ್ತದೆ.
ನಿಮ್ಮ ವಯಸ್ಸು 20 ವರ್ಷಗಳು ಮತ್ತು ನೀವು ಪ್ರತಿದಿನ 58 ರೂ.ದರದಲ್ಲಿ ಹೂಡಿಕೆ ಮಾಡಿದರೆ, ನೀವು ವರ್ಷಕ್ಕೆ 21918 ರೂ. ಹೂಡಿಕೆ ಮಾಡುತ್ತೀರಿ. 20 ವರ್ಷಗಳ ನಂತರ, ನಿಮ್ಮ ಹೂಡಿಕೆಯ ಮೊತ್ತವು 429392 ರೂ. ಆಗಿರುತ್ತದೆ. ಮುಕ್ತಾಯದ ಸಮಯದಲ್ಲಿ, ನೀವು 794000 ರೂ. ಪಡೆಯುತ್ತೀರಿ.
ಇದನ್ನೂ ಓದಿ : PM Kisan ನಿಯಮದಲ್ಲಿ ಬದಲಾವಣೆ! ಯಾವ ರೈತರಿಗೆ 13ನೇ ಕಂತು ಸಿಗಲ್ಲ ಹೇಳಿದ ಕೃಷಿ ಸಚಿವ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.