Doorstep Diesel Delivery : ಡಿಸೇಲ್ ಗಾಗಿ ಪೆಟ್ರೋಲ್ ಪಂಪ್ ಗೆ ಹೋಗಬೇಕಾಗಿಲ್ಲ, ಗ್ರಾಹಕರ ಮನೆ ತಲುಪಲಿದೆ ಡೆಲಿವೆರಿ

ಡೋರ್ ಸ್ಟೆಪ್  ಡೀಸೆಲ್ ಡೆಲಿವರಿ  ಸೌಲಭ್ಯವನ್ನು ಜೆರಿಕನ್‌ನಲ್ಲಿ ಒದಗಿಸಲಾಗುತ್ತಿದ್ದು, ಇದಕ್ಕೆ ಸಫರ್ 20 ಎಂದು ಹೆಸರಿಸಲಾಗಿದೆ. 20 ಲೀಟರ್ ಗಿಂತ ಕಡಿಮೆ ಡೀಸೆಲ್ ಬೇಡಿಕೆಯಿರುವ ಗ್ರಾಹಕರಿಗೆ ಡೋಸ್ಟೆಪ್ ವಿತರಣೆಯ ಸೌಲಭ್ಯ ಸಿಗಲಿದೆ.

Written by - Ranjitha R K | Last Updated : Jul 21, 2021, 05:45 PM IST
  • ಮನೆ ಬಾಗಿಲಿಗೆ ಡೀಸೆಲ್ ವಿತರಣೆ
  • ಬಿಪಿಸಿಎಲ್‌ನ 20 ಲೀಟರ್ ಜೆರಿಕನ್‌ನಲ್ಲಿ ಡೀಸೆಲ್ ವಿತರಣೆ
  • ಇತರ ರಾಜ್ಯಗಳಿಗೂ ಯೋಜನೆ ವಿಸ್ತರಣೆಯ ಚಿಂತನೆ
Doorstep Diesel Delivery : ಡಿಸೇಲ್ ಗಾಗಿ ಪೆಟ್ರೋಲ್ ಪಂಪ್ ಗೆ ಹೋಗಬೇಕಾಗಿಲ್ಲ, ಗ್ರಾಹಕರ ಮನೆ ತಲುಪಲಿದೆ ಡೆಲಿವೆರಿ  title=
ಬಿಪಿಸಿಎಲ್‌ನ 20 ಲೀಟರ್ ಜೆರಿಕನ್‌ನಲ್ಲಿ ಡೀಸೆಲ್ ವಿತರಣೆ (photo zee news)

ನವದೆಹಲಿ : ಡೀಸೆಲ್ ವಾಹನಗಳ ಗ್ರಾಹಕರಿಗೊಂದು ಒಳ್ಳೆಯ ಸುದ್ದಿ ಇದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (BPCL) ಮನೆ ಬಾಗಿಲಿಗೆ ಡಿಸೇಲ್ ವಿತರಣೆಯಾಗಲಿದೆ. BPCL  ಹಮ್ಸಾಫರ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡು ಈ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ನೀವಿದ್ದಲ್ಲಿಗೆ  20 ಲೀಟರ್ ಜೆರಿಕನ್  ಡೀಸೆಲ್ ಡೆಲಿವೆರಿ ಪಡೆಯಬಹುದು. 

ಮನೆ ಬಾಗಿಲಿಗೆ ಡೆಲಿವೆರಿ ಸೌಲಭ್ಯ :
ಡೋರ್ ಸ್ಟೆಪ್  ಡೀಸೆಲ್ ಡೆಲಿವರಿ (Doorstep Diesel Delivery Benefits)  ಸೌಲಭ್ಯವನ್ನು ಜೆರಿಕನ್‌ನಲ್ಲಿ ಒದಗಿಸಲಾಗುತ್ತಿದ್ದು, ಇದಕ್ಕೆ ಸಫರ್ 20 (Safar20) ಎಂದು ಹೆಸರಿಸಲಾಗಿದೆ. 20 ಲೀಟರ್ ಗಿಂತ ಕಡಿಮೆ ಡೀಸೆಲ್ ಬೇಡಿಕೆಯಿರುವ ಗ್ರಾಹಕರಿಗೆ ಡೋಸ್ಟೆಪ್ ವಿತರಣೆಯ ಸೌಲಭ್ಯ ಸಿಗಲಿದೆ. ಇದು ಸಣ್ಣ ಕೈಗಾರಿಕೆಗಳು, ಮಾಲ್‌ಗಳು, ಆಸ್ಪತ್ರೆಗಳು, ಬ್ಯಾಂಕುಗಳು, ರೈತರು, ಮೊಬೈಲ್ ಟವರ್‌ಗಳು, ಶಿಕ್ಷಣ ಸಂಸ್ಥೆಗಳಿಗೆ ಪ್ರಯೋಜನವಾಗಲಿದೆ. ಮನೆ ಬಾಗಿಲಿಗೆ ಡೀಸೆಲ್‌ (Diesel home delivery) ಪೂರೈಕೆ ಸ್ವಲ್ಪ ಸಮಯದ ಹಿಂದೆಯೇ ಪ್ರಾರಂಭವಾಗಿದೆ. 

ಇದನ್ನೂ ಓದಿ : ಆನ್‌ಲೈನ್‌ನಲ್ಲಿ EPFO ಬ್ಯಾಂಕ್ ಖಾತೆ ಸಂಖ್ಯೆ ಬದಲಾಯಿಸುವುದು, ನವೀಕರಿಸುವುದು ಹೇಗೆ..?

ಈ ಸೌಲಭ್ಯವನ್ನು ಈ ರಾಜ್ಯಗಳಲ್ಲಿಯೂ ಪ್ರಾರಂಭಿಸಲಾಗುವುದು :
ಇದೀಗ ಈ ಯೋಜನೆ ದೆಹಲಿಯಲ್ಲಿ (Dehli) ಲಭ್ಯವಿದೆ. ಮುಂದೆ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಈ 20 ಲೀಟರ್ ಜೆರಿಕನ್ ಸೇವೆಯನ್ನು ಪ್ರಾರಂಭಿಸಲು ಬಿಪಿಸಿಎಲ್ (BPCL) ಯೋಜಿಸಿದೆ. ಈ ರಾಜ್ಯಗಳಲ್ಲಿನ ಹೆಚ್ಚಿನ ರೆಸಾರ್ಟ್‌ಗಳು, ಹೋಟೆಲ್‌ಗಳು, ಕೈಗಾರಿಕೆಗಳು ಮತ್ತು ಸಾಕಣೆ ಕೇಂದ್ರಗಳು ಬೆಟ್ಟ ಪ್ರದೇಶಗಳಲ್ಲಿವೆ. ಹಾಗಾಗಿ ಈ ಪ್ರದೇಶಗಳಲ್ಲಿ ಪಂಪ್‌ಗಳ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಮೋಟಾರ್ ಸೈಕಲ್ ನಲ್ಲಿ  ಒದಗಿಸಲಾಗುವ ಈ ಸೇವೆಯು ಈ ರಾಜ್ಯಗಳ ಪ್ರವಾಸಿಗರಿಗೆ ಸಹಕಾರಿಯಾಗಲಿದೆ.  

ಹೂಡಿಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ BPCL :
ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ಖಾಸಗೀಕರಣ ಮತ್ತು ಹೂಡಿಕೆಯ ಗುರಿಯನ್ನು 1.75 ಲಕ್ಷ ಕೋಟಿ ರೂ ಎಂದು ನಿಗದಿ ಮಾಡಲಾಗಿತ್ತು. ಈ ವರ್ಷದ ಹೂಡಿಕೆಯ ಪಟ್ಟಿಯಲ್ಲಿ ಬಿಪಿಸಿಎಲ್ ಹೆಸರು ಅಗ್ರಸ್ಥಾನದಲ್ಲಿದೆ. ಇದು ದೇಶದ ಎರಡನೇ ಅತಿದೊಡ್ಡ ತೈಲ ಸಂಸ್ಕರಣಾಗಾರ ಕಂಪನಿಯಾಗಿದೆ. ಇದರಲ್ಲಿ  52.98 ಶೇಕಡಾದಷ್ಟು ಸರ್ಕಾರ ಪಾಲು ಹೊಂದಿದ್ದು, ಸರ್ಕಾರವು ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಹೊರಟಿದೆ. 

ಇದನ್ನೂ ಓದಿ Relief To Tax Payers: ಫಾರ್ಮ್ 15CA/15CB ಹಸ್ತಚಾಲಿತ ಭರ್ತಿ ಗಡವು ವಿಸ್ತರಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News