ದೆಹಲಿ ಮತ್ತು ಎನ್ಸಿಆರ್ ರಾಜ್ಯಗಳು ಮಾಲಿನ್ಯವನ್ನು ಕಡಿಮೆ ಮಾಡಲು GRAP ಹಂತ 4 ರ ಅಡಿಯಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜನವರಿ 12 ರಂದು ಧಾರವಾಡ ಜಿಲ್ಲೆಯ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ತಾಲ್ಲೂಕಿನಾದಾದ್ಯಂತ 1 ರಿಂದ 8ನೇ ತರಗತಿವರೆಗಿನ ಶಾಲೆಗಳನ್ನು ದಿನಾಂಕ 13-01-2022 ರಿಂದ ಮುಂದಿನ ಆದೇಶವಾಗುವವರೆಗೆ ಶಾಲೆಗಳನ್ನು ತೆರೆಯದಂತೆ ಆದೇಶಿಸಿರುವದನ್ನು ಹಿಂಪಡೆಯಲಾಗಿದೆ. ಜನೆವರಿ 24 ರ ಸೋಮವಾರದಿಂದ ಶಾಲೆಗಳನ್ನು ಪುನರ್ ಆರಂಭಿಸಲು ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ.
ಸುಮಾರು ಶೇ 43 ರಷ್ಟು ಶಿಕ್ಷಕರು ಸಾಂಕ್ರಾಮಿಕ ಸಮಯದಲ್ಲಿ ಆನ್ಲೈನ್ ಬೋಧನೆಯಿಂದ ತೃಪ್ತರಾಗಿಲ್ಲ ಎಂದು ಹೇಳಿದ್ದಾರೆ ಮತ್ತು ಅವರಲ್ಲಿ ಶೇ 9 ರಷ್ಟು ಜನರು ಶಿಕ್ಷಣದ ವಿಧಾನದ ಬಗ್ಗೆ ಸಂಪೂರ್ಣ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಬಾಲಕಿಯ ವಿಡಿಯೋ ವೈರಲ್ ಆದ ನಂತರ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕಾರ್ಯಪ್ರವೃತರಾಗಿದ್ದಾರೆ. ಮಕ್ಕಳ ಹೋಂವರ್ಕ್ ಹೊರೆ ಕಡಿಮೆ ಮಾಡಲು 48 ಗಂಟೆಗಳ ಒಳಗೆ ನೀತಿ ರೂಪಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ
'ಬ್ಯಾಕ್ ಟು ಸ್ಕೂಲ್' ಅಭಿಯಾನದಡಿಯಲ್ಲಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶಾಲಾ ಗುರುತಿನ ಚೀಟಿಯನ್ನು ತೋರಿಸಿ ಕಡಿಮೆ ಬೆಲೆಗೆ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳನ್ನು ಖರೀದಿಸಬಹುದು.
ಶಾಲಾ-ಕಾಲೇಜುಗಳ ಆರಂಭ ಮತ್ತು SSLC ಪರೀಕ್ಷೆ ನಡೆಸುವುದು ಆಯಾ ರಾಜ್ಯಗಳಿಗೆ ಬಿಟ್ಟಿದ್ದು ಎಂದು ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು. ಜಿಜ್ಞಾಸೆಗೆ ಸಿಲುಕಿದ್ದ ರಾಜ್ಯ ಸರ್ಕಾರ ಪೋಷಕರ ತೀವ್ರ ವಿರೋಧದ ನಡುವೆಯೂ SSLC ಪರೀಕ್ಷೆ ನಡೆಸಿತ್ತು. ಈಗ ಮತ್ತೆ ಶಾಲಾ-ಕಾಲೇಜುಗಳ ಆರಂಭಿಸುವ ಬಗ್ಗೆ ಅದರಲ್ಲೂ SSLC ತರಗತಿಗಳನ್ನು ಆರಂಭಿಸುವ ಬಗ್ಗೆ 'ಏನು ಮಾಡಬೇಕೆಂದು' ತಿಳಿಯದೆ ಕಂಗಾಲಾಗಿದೆ.
ಹರಿಯಾಣ ಸರ್ಕಾರ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಟ್ಯಾಬ್ಲೆಟ್ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳು ಹರಿಯಾಣ ಸರ್ಕಾರ ಒದಗಿಸುವ ಉಚಿತ ಟ್ಯಾಬ್ಲೆಟ್ ಮೂಲಕ ತಮ್ಮ ಆನ್ಲೈನ್ ತರಗತಿಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಈ ವರ್ಷ ಶಾಲೆಗಳನ್ನ ಆರಂಭಿಸುವುದು ಬೇಡ. ಆನ್ಲೈನ್ ಕ್ಲಾಸ್ (Online Class) ಮಾಡಿ ಎಲ್ಲರನ್ನು ಪಾಸ್ ಮಾಡಲಿ. ಸಂಪೂರ್ಣ ಕೊರೊನಾ ಮುಕ್ತವಾದ ನಂತರ ಶಾಲೆಗಳನ್ನ ಆರಂಭಿಸಲಿ. ತರಾತುರಿಯಲ್ಲಿ ಶಾಲೆ ಆರಂಭಿಸೋದು ಬೇಡ ಎಂದು ಹೇಳಿದರು.
ಕೊರೊನಾ ಹಿನ್ನಲೆಯಲ್ಲಿ ಈಗ ಬಹುತೇಕ ಆನ್ ಲೈನ್ ಕ್ಲಾಸ್ ಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಬಡ ಮಕ್ಕಳಿಗೆ ಮೊಬೈಲ್ ಗೆಜೆಟ್ ಗಳಿಲ್ಲದೆ ಆನ್ ಲೈನ್ ಶಿಕ್ಷಣ ದುಬಾರಿಯಾಗಿದೆ. ಇದನ್ನು ಹೋಗಲಾಡಿಸಲು ದೆಹಲಿಯಲ್ಲಿ ಪೋಲಿಸ್ ಪೇದೆಯೊಬ್ಬ ಬಡಮಕ್ಕಳಿಗೆ ಪ್ರತ್ಯೇಕ ಕ್ಲಾಸ್ ಗಳನ್ನು ತೆಗೆದುಕೊಳ್ಳುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.