Paytm Diwali Gift: ಈಗ 1 ಕೋಟಿ ರೂ. ಡಿಜಿಟಲ್ Gold ಖರೀದಿಸಿ. ಬಂದಿದೆ ಹೊಸ ವೈಶಿಷ್ಟ್ಯ

ಪೇಟಿಎಂ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಇದುವರೆಗೆ 50% ಹೊಸ ಬಳಕೆದಾರರನ್ನು ಸೇರಿಸಲಾಗಿದೆ ಮತ್ತು ಡಿಜಿಟಲ್ ಗೋಲ್ಡ್ನ ಸರಾಸರಿ ಆರ್ಡರ್ ಮೌಲ್ಯವು 60% ಹೆಚ್ಚಾಗಿದೆ.

Last Updated : Nov 13, 2020, 01:00 PM IST
  • Paytm ಕಂಪನಿಯು ತನ್ನ ಬಳಕೆದಾರರಿಗೆ ದೀಪಾವಳಿ ಉಡುಗೊರೆಯನ್ನು ನೀಡಿದೆ.
  • Paytm Money ಆಪ್ ನಲ್ಲಿ ಚಿನ್ನ ಮಾರಾಟ ಮತ್ತು ಖರೀದಿಗೆ ಅವಕಾಶ.
  • 1 ಕೋಟಿ ರೂ. ಮೊತ್ತದ ಚಿನ್ನವನ್ನು ಸಹ ಇದೀಗ ನೀವು ಖರೀದಿಸಬಹುದು.
Paytm Diwali Gift: ಈಗ 1 ಕೋಟಿ ರೂ. ಡಿಜಿಟಲ್ Gold ಖರೀದಿಸಿ. ಬಂದಿದೆ ಹೊಸ ವೈಶಿಷ್ಟ್ಯ title=

ನವದೆಹಲಿ: ಆನ್‌ಲೈನ್ ಹಣ ಪಾವತಿ ಗೇಟ್‌ವೇಯಾದ ಪೇಟಿಎಂ (Paytm) ಕಳೆದ ಆರು ತಿಂಗಳಲ್ಲಿ ಡಿಜಿಟಲ್ ಚಿನ್ನದ ವಹಿವಾಟಿನಲ್ಲಿ 2 ಪಟ್ಟು ಏರಿಕೆ ದಾಖಲಿಸಿದೆ. ಇದೀಗ  ಕಂಪನಿಯು ತನ್ನ ಬಳಕೆದಾರರಿಗೆ ದೀಪಾವಳಿ ಉಡುಗೊರೆಯನ್ನು ನೀಡಿದೆ. ಕಂಪನಿಯು ತನ್ನ ಹೆಚ್ಚಿನ ಮೌಲ್ಯದ ವಹಿವಾಟು ಉತ್ಪನ್ನ (High Value Transaction Product)ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಬಳಕೆದಾರರು ಪೇಟಿಎಂ ಆ್ಯಪ್‌ನಲ್ಲಿ 1 ಕೋಟಿ ರೂ.ವರೆಗೆ ಪೇಟಿಎಂ ಚಿನ್ನವನ್ನು ಖರೀದಿಸಬಹುದಾಗಿದೆ. ಇಲ್ಲಿಯವರೆಗೆ, ಬಳಕೆದಾರರು ಒಂದೇ ವಹಿವಾಟಿನಲ್ಲಿ ಮಾತ್ರ 2 ಲಕ್ಷ ರೂಪಾಯಿಗಳವರೆಗೆ ಚಿನ್ನವನ್ನು ಖರೀದಿಸಬಹುದಾಗಿತ್ತು.

ಇದನ್ನು ಓದಿ- ಯಾವುದೇ ರೀತಿಯ ಗ್ಯಾರಂಟಿ ಇಲ್ಲದೆ 5 ಲಕ್ಷ ರೂ. ಸಾಲ ನೀಡಲಿದೆ Paytm, MSMEಗೆ 1000 ಕೋಟಿ ರೂ. ಯೋಜನೆ

5 ಸಾವಿರ ಕಿಲೋ ಚಿನ್ನದ ವಹಿವಾಟು
ಪೇಟಿಎಂ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಇದುವರೆಗೆ 50% ಹೊಸ ಬಳಕೆದಾರರನ್ನು ಸೇರಿಸಲಾಗಿದೆ ಮತ್ತು ಡಿಜಿಟಲ್ ಗೋಲ್ಡ್ನ ಸರಾಸರಿ ಆರ್ಡರ್ ಮೌಲ್ಯವು 60% ಹೆಚ್ಚಾಗಿದೆ.  ತನ್ನ ಪ್ಲಾಟ್‌ಫಾರ್ಮ್‌ನಲ್ಲಿನ ಡಿಜಿಟಲ್ ಚಿನ್ನದ ಒಟ್ಟು ವಹಿವಾಟು ಪ್ರಮಾಣವು 5000 ಕೆಜಿ ಮೈಲಿಗಲ್ಲನ್ನು ದಾಟಿದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯು ಈಗ ಪೇಟಿಎಂ ಮನಿ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಈಗ ಬಳಕೆದಾರರು Paytm ಅಪ್ಲಿಕೇಶನ್ ಅಥವಾ Paytm Money ಅಪ್ಲಿಕೇಶನ್‌ನಲ್ಲಿ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ಡಿಜಿಟಲ್ ಚಿನ್ನವನ್ನು ಖರೀದಿಸಬಹುದು ಮತ್ತು ಮಾರಾಟ ಸಹ ಮಾಡಬಹುದು.

ಇದನ್ನು ಓದಿ- ನೀವೂ ಹಣ ಪಾವತಿಗೆ Paytm, Phonepe ಬಳಸುತ್ತೀರಾ? ಹಾಗಿದ್ದರೆ ಈ ಸುದ್ದಿ ತಪ್ಪದೆ ಓದಿ

7.3 ಕೋಟಿ ಜನರು Paytm Gold ಖರೀದಿಸಿದ್ದಾರಂತೆ
Paytm ನಿಂದ ಇದುವರೆಗೆ ಸುಮಾರು 7.3 ಕೋಟಿಗೂ ಅಧಿಕ ಜನರು ಡಿಜಿಟಲ್ ಚಿನ್ನವನ್ನು ಖರೀದಿಸಿದ್ದಾರೆ. ಇವರಲ್ಲಿ ಶೇ.40 ರಷ್ಟು ಚಿನ್ನ ಖರೀದಿದಾರರು ಸಣ್ಣ ಪಟ್ಟಣ ಅಥವಾ ಹೋಬಳಿಗೆ ಸೇರಿದವರಾಗಿದ್ದಾರೆ. ಇದರಿಂದ ದೇಶಾದ್ಯಂತ ಜನರು ಹಣ ಹೂಡಿಕೆಗಾಗಿ ಚಿನ್ನವನ್ನು ಒಂದು ಉತ್ತಮ ಆಯ್ಕೆಯಾಗಿ ಪರಿಗಣಿಸುತ್ತಾರೆ ಎಂಬುದು ಸಾಬೀತಾಗುತ್ತದೆ ಎಂದು ಕಂಪನಿ ಹೇಳಿದೆ. ಈ ಬಾರಿಯ ಅಕ್ಷಯ ತೃತಿಯಾ ಅವಸರದಂದು ಕಳೆದ ವರ್ಷಕ್ಕಿಂತ ಶೇ.2.5ರಷ್ಟು ಹೆಚ್ಚು ಚಿನ್ನದ ವಹಿವಾಟು ನಡೆದಿದೆ.

ಇದನ್ನು ಓದಿ- Paytm SBI ಕ್ರೆಡಿಟ್ ಕಾರ್ಡ್‌ನಲ್ಲಿ ಕ್ಯಾಶ್‌ಬ್ಯಾಕ್‌ನೊಂದಿಗೆ ಪಡೆಯಿರಿ ಅತ್ಯುತ್ತಮ ಆಫರ್ಸ್

ಮಹಾಮಾರಿಯ ಹೊರತಾಗಿಯೂ ಟ್ರೆಂಡ್ ನಲ್ಲಿರಲಿದೆ ಡಿಜಿಟಲ್ ಗೋಲ್ಡ್
ಪೇಟಿಎಂ ಮನಿ ಸಿಇಒ ವರುಣ್ ಶ್ರೀಧರ್ ಅವರ ಪ್ರಕಾರ, ಸಾಂಕ್ರಾಮಿಕ ಸಮಯದಲ್ಲಿ, ಡಿಜಿಟಲ್ ಚಿನ್ನವು ಹೂಡಿಕೆ ಉದ್ದೇಶಗಳಿಗಾಗಿ ಅಥವಾ ವೈಯಕ್ತಿಕ ಬಳಕೆ ಮತ್ತು ಉಡುಗೊರೆಗಾಗಿ ಚಿನ್ನವನ್ನು ಖರೀದಿಸಲು ಬಯಸುವ ಭಾರತೀಯರಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. ಆದರು, ಒಬ್ಬರು ಚಿನ್ನವನ್ನು ಖರೀದಿಸಲು ಹೊರಗೆ ಹೋಗಲು ಸಾಧ್ಯವಿಲ್ಲ. ಶ್ರೀಧರ್ ಅವರ ಪ್ರಕಾರ, ಸಾಂಕ್ರಾಮಿಕ ರೋಗದ ನಂತರವೂ ಈ ಪ್ರವೃತ್ತಿ ಮುಂದುವರಿಯುತ್ತದೆ. ಏಕೆಂದರೆ, ಡಿಜಿಟಲ್ ಚಿನ್ನವನ್ನು ಖರೀದಿಸುವ ಅಥವಾ ಉಡುಗೊರೆಯಾಗಿ ನೀಡುವ ಸುಲಭ ಮತ್ತು ಅದರ ಮೌಲ್ಯವನ್ನು ಅವಿಭಾಜ್ಯ ಸರಕು ಎಂದು ಕರೆಯಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ- BSNLನ ಅದ್ಭುತ ಯೋಜನೆ, ಈಗ ಮೊಬೈಲ್ ರೀಚಾರ್ಜ್ ಆಗಲಿದೆ Free!

ಅತ್ಯಂತ ಕಡಿಮೆ ಮೊತ್ತದಲ್ಲಿಯೂ ಕೂಡ ಚಿನ್ನ ಖರೀದಿಸಬಹುದು
Paytm Money ಇದೀಗ ತನ್ನ ಬಳಕೆದಾರರಿಗೆ ಚಿನ್ನವನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸಹ ಅನುಮತಿಸುತ್ತದೆ, ಇದರಿಂದಾಗಿ ಅವರು ತಮ್ಮ ಹೂಡಿಕೆ ಯೋಜನೆಯನ್ನು ಮತ್ತಷ್ಟು ನಿಯಂತ್ರಿಸಲು ಸಾಧ್ಯವಾಗುತ್ತದೆ. ಡಿಜಿಟಲ್ ಚಿನ್ನವು ನಾಗರಿಕರಿಗೆ ತಮ್ಮ ಆಯ್ಕೆಯ ಮೊತ್ತದಲ್ಲಿ ಮತ್ತು ಅತ್ಯಂದ ಕಡಿಮೆ ಮೊತ್ತದಲ್ಲಿ ಚಿನ್ನವನ್ನು  ಹಕ್ಕನ್ನು ನೀಡುತ್ತದೆ. ಈ ಉತ್ಪನ್ನಕ್ಕಾಗಿ ನಾವು ದೊಡ್ಡ ಯೋಜನೆಗಳನ್ನು ಹೊಂದಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಡಿಜಿಟಲ್ ಚಿನ್ನಕ್ಕಾಗಿ ಪ್ರಚಾರ ಮಾಡಲಿದ್ದೇವೆ ಎಂದು ಕಂಪನಿ ಹೇಳಿದೆ.

Trending News