Petrol-Diesel Prices : ಮೆಟ್ರೋಗಳಲ್ಲಿ ಗರಿಷ್ಠ ಬೆಲೆ ತಲುಪಿದಿದೆ ಪೆಟ್ರೋಲ್ : 3 ತಿಂಗಳಲ್ಲಿ ಮೊದಲ ಬಾರಿ ಇಳಿಕೆಯಾದ ಡೀಸೆಲ್

ಮೂರು ತಿಂಗಳಲ್ಲಿ ಮೊದಲ ಬಾರಿಗೆ ದೇಶದ ಎಲ್ಲಾ ಮಹಾನಗರಗಳಲ್ಲಿ ಡೀಸೆಲ್ ಬೆಲೆ ಕಡಿತಗೊಳಿಸಲಾಗಿದೆ.

Last Updated : Jul 13, 2021, 09:22 AM IST
  • ಇಂದು ಇಂಧನ ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ
  • 3 ತಿಂಗಳಲ್ಲಿ ಮೊದಲ ಬಾರಿಗೆ ದೇಶದ ಎಲ್ಲಾ ಮಹಾನಗರಗಳಲ್ಲಿ ಡೀಸೆಲ್ ಬೆಲೆ ಕಡಿತ
  • ದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ 28 ಪೈಸೆ ಏರಿಕೆ
Petrol-Diesel Prices : ಮೆಟ್ರೋಗಳಲ್ಲಿ ಗರಿಷ್ಠ ಬೆಲೆ ತಲುಪಿದಿದೆ ಪೆಟ್ರೋಲ್ : 3 ತಿಂಗಳಲ್ಲಿ ಮೊದಲ ಬಾರಿ ಇಳಿಕೆಯಾದ ಡೀಸೆಲ್ title=

ನವದೆಹಲಿ : ದೇಶೀಯ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡಿದ್ದು,  ಇಂದು ಇಂಧನ ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸೋಮವಾರ ಬೆಲೆ ಏರಿಕೆ ಆಗಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನವೂ ಪರಿಷ್ಕರಿಸಿ ಮತ್ತು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ, 15 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ನಗರಗಳು ಮತ್ತು ಪಟ್ಟಣಗಳಲ್ಲಿ ಪೆಟ್ರೋಲ್ 100ಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.

 ಮೂರು ತಿಂಗಳಲ್ಲಿ ಮೊದಲ ಬಾರಿಗೆ ದೇಶದ ಎಲ್ಲಾ ಮಹಾನಗರಗಳಲ್ಲಿ ಡೀಸೆಲ್ ಬೆಲೆ(Diesel Prices) ಕಡಿತಗೊಳಿಸಲಾಗಿದೆ. ದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ 28 ಪೈಸೆ ಏರಿಕೆಯಾಗಿ 101.19 ರೂ.ಗೆ ತಲುಪಿದೆ. ಮತ್ತೆ ಡೀಸೆಲ್ ಲೀಟರ್ 16 ಪೈಸೆ ಇಳಿದು 89.72 ರೂ. ತಲುಪಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 25-35 ಪೈಸೆಗಳಷ್ಟಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 15-20 ಪೈಸೆ ಕಡಿಮೆಯಾಗಿದೆ. ಸೋಮವಾರದ ಮೊದಲು, ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆ ಶನಿವಾರ ಲೀಟರ್‌ಗೆ 35 ಪೈಸೆ ಮತ್ತು 26 ಪೈಸೆ ಏರಿಕೆಯಾಗಿದ್ದು, ಅದು ಭಾನುವಾರ ಸ್ಥಿರವಾಗಿದೆ.

ಇದನ್ನೂ ಓದಿ : ಸಣ್ಣ ಉಳಿತಾಯದಿಂದಲೇ ಗಳಿಸಬಹುದು ದೊಡ್ದಲಾಭ , ನೀವೂ ಆಗಬಹುದು ಕೋಟ್ಯಾಧಿಪತಿ

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (IOCL ವೆಬ್‌ಸೈಟ್ ಪ್ರಕಾರ ದರಗಳು) : 

ದೆಹಲಿ - ಪೆಟ್ರೋಲ್(Petrol Prices): ಪ್ರತಿ 101.19 ರೂ. | ಡೀಸೆಲ್: 89.72 ರೂ.

ಮುಂಬೈ - ಪೆಟ್ರೋಲ್: ಪ್ರತಿ 107.20 ರೂ. | ಡೀಸೆಲ್: 97.29 ರೂ.

ಇದನ್ನೂ ಓದಿ : Just For First Time MF Investors: ನೂತನ ಮ್ಯೂಚವಲ್ ಫಂಡ್ ಹೂಡಿಕೆದಾರರಿಗೆ ಇಲ್ಲಿವೆ ಕೆಲ ಸಲಹೆಗಳು

ಕೋಲ್ಕತಾ - ಪೆಟ್ರೋಲ್: 101.35 ರೂ. | ಡೀಸೆಲ್: 92.81 ರೂ.

ಬೆಂಗಳೂರು(Bengaluru) - ಪೆಟ್ರೋಲ್ : 104.58 ರೂ. | ಡೀಸೆಲ್: 95.09 ರೂ.

ಚೆನ್ನೈ - ಪೆಟ್ರೋಲ್: 101.92 ರೂ. | ಡೀಸೆಲ್ ಬೆಲೆ: 94.24 ರೂ.

ಹೈದರಾಬಾದ್ - ಪೆಟ್ರೋಲ್: 105.15 ರೂ. | ಡೀಸೆಲ್: 97.78 ರೂ.

ಇದನ್ನೂ ಓದಿ : Big Relief: ಜೂನ್ ತಿಂಗಳಿನಲ್ಲಿ ಇಳಿಕೆಯಾದ ಹಣದುಬ್ಬರ, ಆರ್ಥಿಕತೆಯ ಕುರಿತೂ ಕೂಡ ಬಂತು ಗುಡ್ ನ್ಯೂಸ್

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ(Hindustan Petroleum) ಸೇರಿದಂತೆ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಿಸುತ್ತವೆ. ಹೊಸ ಬೆಲೆಗಳನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಜಾರಿಗೆ ತರಲಾಗುತ್ತದೆ. ಮೌಲ್ಯವರ್ಧಿತ ತೆರಿಗೆಗಳು, ಸ್ಥಳೀಯ ಮತ್ತು ಸರಕು ಸಾಗಣೆ ಶುಲ್ಕಗಳು ಸ್ಥಳವನ್ನು ಅವಲಂಬಿಸಿ ಬದಲಾಗುವುದರಿಂದ ರಾಜ್ಯಗಳು ಮತ್ತು ನಗರಗಳು ವಿಭಿನ್ನ ಇಂಧನ ಬೆಲೆಗಳನ್ನು ಹೊಂದಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News