ನವದೆಹಲಿ: ಕಳೆದೊಂದು ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol, Diesel Prices Today)ಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸೋಮವಾರವೂ ಭಾರತೀಯ ತೈಲ ಕಂಪನಿಗಳು ಇಂಧನ ದರ ಪರಿಷ್ಕರಿಸಿಲ್ಲ. ಇತ್ತೀಚೆಗಷ್ಟೇ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (VAT)ಯನ್ನು ಕಡಿಮೆ ಮಾಡಲು ನಿರ್ಧರಿಸಿತ್ತು. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಇಂಧನದ ಬೆಲೆಯನ್ನು ಲೀಟರ್‌ಗೆ ಸುಮಾರು 8 ರೂ. ಕಡಿತಗೊಳಿಸಲಾಗಿದೆ.
ಕೇಜ್ರಿವಾಲ್(Arvind Kejriwal) ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಪ್ರಸ್ತುತ ಶೇ.30ರಿಂದ ಶೇ.19.4ಕ್ಕೆ ಇಳಿಸಲು ನಿರ್ಧರಿಸಲಾಯಿತು. ಇದರಿಂದ ಪ್ರತಿ ಲೀಟರ್‌ಗೆ ಸುಮಾರು 8 ರೂ. ಕಡಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ವ್ಯಾಟ್ ಕಡಿತದ ನಂತರ ಪೆಟ್ರೋಲ್ ಬೆಲೆ ಪ್ರಸ್ತುತ ಲೀಟರ್‌ಗೆ 103 ರೂ.ನಿಂದ 95 ರೂ.ಗೆ ಇಳಿದಿದೆ. ಈ ಹಿಂದೆ ಉತ್ತರ ಪ್ರದೇಶ ಮತ್ತು ಹರಿಯಾಣದ NCR ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಹೆಚ್ಚಾಗಿತ್ತು. ಕೇಂದ್ರವು ಇಂಧನ ಬೆಲೆಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ ನಂತರ ರಾಜ್ಯ ಸರ್ಕಾರಗಳು ಕೂಡ ವ್ಯಾಟ್ ಕಡಿತವನ್ನು ಘೋಷಿಸಿದ್ದವು.
ದೀಪಾವಳಿ ಹಬ್ಬದ ಮುನ್ನಾದಿನದಂದು ಕೇಂದ್ರವು ಇಂಧನ( Fule Price In India)ಗಳ ಮೇಲಿನ ಅಬಕಾರಿ ಸುಂಕ ಕಡಿತವನ್ನು ಘೋಷಿಸಿತು. ಇದರ ಪರಿಣಾಮ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರವು ಪೆಟ್ರೋಲ್ ಬೆಲೆಯನ್ನು 5 ರೂ. ಮತ್ತು ಡೀಸೆಲ್ ಬೆಲೆಯನ್ನು 10 ರೂ. ಕಡಿತಗೊಳಿಸಿತ್ತು. ಈ ನಿರ್ಧಾರದ ನಂತರ ಹಲವು ರಾಜ್ಯಗಳು, ಹೆಚ್ಚಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ಮಿತ್ರಪಕ್ಷಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿತಗೊಳಿಸಿವೆ.
ಪ್ರತಿಪಕ್ಷಗಳ ಆಡಳಿತವಿರುವ ಪಂಜಾಬ್ ಮತ್ತು ರಾಜಸ್ಥಾನ ಕೂಡ ಇಂಧನ ದರವನ್ನು ಇಳಿಕೆ ಮಾಡಿವೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಹಂಚಿಕೊಂಡಿರುವ ಬೆಲೆ ಪಟ್ಟಿಗಳ ಪ್ರಕಾರ, ಅಬಕಾರಿ ಸುಂಕ ಮತ್ತು ವ್ಯಾಟ್ ಕಡಿತದ ಪರಿಣಾಮ ಪಂಜಾಬ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 16.02 ರೂ. ಮತ್ತು ಡೀಸೆಲ್ ಲೀಟರ್‌ಗೆ 19.61 ರೂ.ನಷ್ಟು ಕಡಿಮೆಯಾಗಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 95.41 ರೂ. ಇದ್ದರೆ, ಡೀಸೆಲ್ ದರ 86.67 ರೂ. ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 109.98 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 94.14 ರೂ. ಇದೆ. ಅದೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 100.58 ರೂ. ಇದ್ದರೆ, ಡೀಸೆಲ್ 85.01 ರೂ.ನಲ್ಲಿ ಮಾರಾಟವಾಗುತ್ತಿದೆ.
ಇದನ್ನೂ ಓದಿ: ರೈತರಿಗೆ ಸಿಹಿಸುದ್ದಿ: ಅರ್ಧ ಬೆಲೆಗೆ ರಸಗೊಬ್ಬರ, ಬೀಜಗಳು & ಟ್ರ್ಯಾಕ್ಟರ್ ಖರೀದಿಸಿ, ಹೇಗೆಂದು ತಿಳಿಯಿರಿ
ವಿವಿಧ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ
1. ಮುಂಬೈ
ಪೆಟ್ರೋಲ್ - ಲೀಟರ್‌ಗೆ 109.98 ರೂ.
ರೂ ಡೀಸೆಲ್ - ಲೀಟರ್‌ಗೆ 94.14 ರೂ.
2. ದೆಹಲಿ
ಪೆಟ್ರೋಲ್ - ಲೀಟರ್‌ಗೆ 95.41 ರೂ.
ಡೀಸೆಲ್ - ಲೀಟರ್‌ಗೆ 86.67 ರೂ.
3. ಚೆನ್ನೈ
ಪೆಟ್ರೋಲ್ - ಲೀಟರ್‌ಗೆ 101.40 ರೂ.
ಡೀಸೆಲ್ - ಲೀಟರ್‌ಗೆ 91.43 ರೂ.
4. ಕೋಲ್ಕತ್ತಾ
ಪೆಟ್ರೋಲ್ - ಲೀಟರ್‌ಗೆ 104.67 ರೂ.
ಡೀಸೆಲ್ - ಲೀಟರ್‌ಗೆ 89.79 ರೂ.
5. ಭೋಪಾಲ್
ಪೆಟ್ರೋಲ್ - ಲೀಟರ್‌ಗೆ 107.23 ರೂ.
ಡೀಸೆಲ್ - ಲೀಟರ್‌ಗೆ 90.87 ರೂ.
6. ಹೈದರಾಬಾದ್
ಪೆಟ್ರೋಲ್ - ಲೀಟರ್‌ಗೆ 108.20 ರೂ.
ಡೀಸೆಲ್ - ಲೀಟರ್‌ಗೆ 94.62 ರೂ.
7. ಬೆಂಗಳೂರು
ಪೆಟ್ರೋಲ್ - ಲೀಟರ್‌ಗೆ 100.58 ರೂ.
ಡೀಸೆಲ್ - ಲೀಟರ್‌ಗೆ 85.01 ರೂ.
9. ಲಕ್ನೋ
ಪೆಟ್ರೋಲ್ - ಲೀಟರ್‌ಗೆ 95.28 ರೂ.
ಡೀಸೆಲ್ - ಲೀಟರ್‌ಗೆ 86.80 ರೂ.
==========================================================================================================
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.