ರೈತರಿಗೆ ಸಿಹಿಸುದ್ದಿ: ಅರ್ಧ ಬೆಲೆಗೆ ರಸಗೊಬ್ಬರ, ಬೀಜಗಳು & ಟ್ರ್ಯಾಕ್ಟರ್‌ ಖರೀದಿಸಿ, ಹೇಗೆಂದು ತಿಳಿಯಿರಿ

ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಅನುಕ್ರಮದಲ್ಲಿ ಸರ್ಕಾರವು ರೈತರಿಗೆ ಟ್ರ್ಯಾಕ್ಟರ್, ರಸಗೊಬ್ಬರ, ಬೀಜಗಳನ್ನು ಖರೀದಿಸಲು ಸಹಾಯಧನ ನೀಡುತ್ತಿದೆ. ಈ ಯೋಜನೆಗಳ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Dec 5, 2021, 01:01 PM IST
  • ಕೇಂದ್ರ ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ
  • ಕೇಂದ್ರವು ರೈತರಿಗೆ ಕಡಿಮೆ ಬಡ್ಡಿಗೆ ಸಾಲ ನೀಡುವ ಯೋಜನೆ ರೂಪಿಸಿದೆ
  • ರಸಗೊಬ್ಬರ, ಬೀಜ, ಟ್ರ್ಯಾಕ್ಟರ್ ಖರೀದಿಗೆ ಸರ್ಕಾರವು ಸಬ್ಸಿಡಿ ನೀಡುತ್ತಿದೆ
ರೈತರಿಗೆ ಸಿಹಿಸುದ್ದಿ: ಅರ್ಧ ಬೆಲೆಗೆ ರಸಗೊಬ್ಬರ, ಬೀಜಗಳು & ಟ್ರ್ಯಾಕ್ಟರ್‌ ಖರೀದಿಸಿ, ಹೇಗೆಂದು ತಿಳಿಯಿರಿ

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಯೋಜನೆ(PM Kisan Yojna)ಯಡಿ 10ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ ಬಿಡುಗಡೆಯಾಗಲಿದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಡಿಸೆಂಬರ್ 15ರೊಳಗೆ 10ನೇ ಕಂತು ಬರಬಹುದು ಎಂದು ಹೇಳಲಾಗಿದೆ. ಆದರೆ ಇದನ್ನು ಕೇಂದ್ರ ಸರ್ಕಾರ ಇನ್ನೂ ಬಹಿರಂಗಪಡಿಸಿಲ್ಲ. ಇದೇ ವೇಳೆ 10ನೇ ಕಂತಿನ ಬಿಡುಗಡೆ ಸಂದರ್ಭದಲ್ಲಿ ಸರ್ಕಾರ ರೈತರಿಗೆ ನೀಡುವ ನೆರವನ್ನು ದುಪ್ಪಟ್ಟು ಮಾಡುವ ಸಾಧ್ಯತೆಯೂ ಇದೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹೊರತಾಗಿ ಸರ್ಕಾರವು ಇಂತಹ ಅನೇಕ ಯೋಜನೆಗಳನ್ನು ರೈತರಿಗಾಗಿಯೇ ರೂಪಿಸಿದೆ. ಇದರಲ್ಲಿ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಯೋಜನೆಗಳ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ

ಈ ಯೋಜನೆ(Pradhan Mantri Kisan Samman Nidhi)ಯಡಿ ಸರ್ಕಾರವು ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಲ್ಲಿ 2000 ರೂ.ಗಳ 3 ಕಂತುಗಳು ಅಂದರೆ 6000 ರೂ. ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯ 9 ಕಂತುಗಳನ್ನು ರೈತರ ಖಾತೆಗೆ ಕಳುಹಿಸಲಾಗಿದೆ. ನೀವು ಸಹ ಈ ಯೋಜನೆಯ ಲಾಭ ಪಡೆಯಲು ಬಯಸಿದರೆ, ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯುವ ಮೂಲಕ CSC ನಲ್ಲಿ ನೋಂದಾಯಿಸಿಕೊಳ್ಳಬಹುದು. ಇದಲ್ಲದೆ ಪಿಎಂ ಕಿಸಾನ್ GOI ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: ರೈತರಿಗೆ ಸಿಹಿಸುದ್ದಿ! ಸರ್ಕಾರದ ಹೊಸ ಯೋಜನೆಯಿಂದ ಸಿಗುತ್ತಿದೆ 3 ಲಕ್ಷ ರೂ . ಗಳ ಲಾಭ

ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ

ಚಂಡಮಾರುತ, ಅನಾವೃಷ್ಟಿ, ಮಳೆ, ಭೂಕಂಪ, ಆಲಿಕಲ್ಲು ಮಳೆಯಂತಹ ಪ್ರಕೃತಿ ವಿಕೋಪಗಳಿಂದ ಉಂಟಾಗಿರುವ ಆರ್ಥಿಕ ನಷ್ಟದಿಂದ ದೇಶದ ರೈತರನ್ನು ಪಾರು ಮಾಡಲು ಕೇಂದ್ರ ಸರ್ಕಾರ ಈ ಯೋಜನೆ(Fasal Bima Plan) ಆರಂಭಿಸಿದೆ. ಈ ಯೋಜನೆಯಡಿ ರೈತರು ಬೆಳೆ ನಷ್ಟ ಅನುಭವಿಸಿದ್ದು, ಅವರ ವಿಮೆ ಈ ಯೋಜನೆಯಲ್ಲಿದ್ದರೆ ಅವರಿಗೆ ಸರ್ಕಾರದಿಂದ 40,700 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ. ಪೂರ್ಣ ಸುಗ್ಗಿಯ ಸಮಯಕ್ಕೆ ಈ ಯೋಜನೆ ಬರುತ್ತದೆ.

ಕಿಸಾನ್ ಕ್ರೆಡಿಟ್ ಯೋಜನೆ

ರೈತರಿಗೆ ಬೀಜ, ರಸಗೊಬ್ಬರ ಮತ್ತು ಯೂರಿಯಾದಂತಹ ವಸ್ತುಗಳನ್ನು ಖರೀದಿಸಲು ಸುಲಭವಾದ ಸಾಲಕ್ಕಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ರೈತರಿಗೆ ಶೇ.4ರ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ಸಿಗುತ್ತದೆ.

ಇದನ್ನೂ ಓದಿ: Arecanut Price: ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ರಾಶಿ ಅಡಿಕೆ ದರ ಎಷ್ಟಿದೆ?

ಕಿಸಾನ್ ಟ್ರ್ಯಾಕ್ಟರ್ ಯೋಜನೆ

ಈ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ ಟ್ರ್ಯಾಕ್ಟರ್ ಖರೀದಿ(Tractor Yojana)ಯಲ್ಲಿ ಅರ್ಧದಷ್ಟು ಸಬ್ಸಿಡಿ ನೀಡುತ್ತಿದೆ. ಈ ಯೋಜನೆಯ ಫಲಾನುಭವಿ ರೈತರು ಟ್ರ್ಯಾಕ್ಟರ್‌ನ ಅರ್ಧ ಬೆಲೆಯನ್ನು ಮಾತ್ರ ಪಾವತಿಸಬೇಕಾಗುತ್ತದೆ, ಸರ್ಕಾರವು ಉಳಿದ ಅರ್ಧ ಹಣವನ್ನು ಪಾವತಿಸುತ್ತದೆ. ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ಇದಕ್ಕಾಗಿ ನೀವು ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಬ್ಯಾಂಕ್ ವಿವರಗಳು, ಜಮೀನು ದಾಖಲಾತಿಗಳನ್ನು ಹೊಂದಿರಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News