Indian Currency: ನಿಮ್ಮ ಬಳಿಯೂ ಈ ರೀತಿಯ 10 ರೂ. ನೋಟು ಇದ್ದರೆ, 25,000 ರೂ. ಗಳಿಸುವ ಅವಕಾಶ

Indian Currency: ನಿಮ್ಮ ಬಳಿ ಈ ರೀತಿಯ ಹಳೆಯ 10 ರೂಪಾಯಿ ನೋಟು ಇದ್ದರೆ ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ 25 ಸಾವಿರ ರೂಪಾಯಿಗಳನ್ನು ಗಳಿಸಬಹುದು.  

Written by - Yashaswini V | Last Updated : Jun 17, 2021, 02:20 PM IST
  • ವಿಶೇಷವಾದ 10 ರೂ. ಹಳೆಯ ನೋಟನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ 25,000 ರೂಪಾಯಿಗಳವರೆಗೆ ಗಳಿಸಬಹುದು
  • ಈ ಅನನ್ಯ ನೋಟನ್ನು 1943 ರಲ್ಲಿ ಮುದ್ರಿಸಲಾಗಿದೆ
  • ಇದಲ್ಲದೆ 10 ರೂಪಾಯಿ ನೋಟಿನಲ್ಲಿ ಕೆಲವು ವಿಶೇಷತೆ ಇರುವುದು ಬಹಳ ಮುಖ್ಯ
Indian Currency: ನಿಮ್ಮ ಬಳಿಯೂ ಈ ರೀತಿಯ 10 ರೂ. ನೋಟು ಇದ್ದರೆ, 25,000 ರೂ. ಗಳಿಸುವ ಅವಕಾಶ title=
ನಿಮ್ಮ ಬಳಿಯೂ ಹಳೆಯ 10 ರೂ. ನೋಟು ಇದ್ದರೆ 25,000 ರೂ. ಗಳಿಸಬಹುದು

Indian Currency: ಕರೋನಾ ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ, ನಿಮ್ಮ ಬಳಿ 10 ರೂಪಾಯಿಗಳ (10 Rupees Old Note)  ಈ ವಿಶೇಷ ನೋಟು ಇದ್ದರೆ, ನೀವು ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ 25,000 ರೂಪಾಯಿಗಳವರೆಗೆ ಗಳಿಸಬಹುದು. ಆದರೆ 10 ರೂಪಾಯಿ ನೋಟು ಕೆಲವು ವಿಶೇಷತೆ ಇರುವುದು ಬಹಳ ಮುಖ್ಯ.

ವಿಶೇಷವಾದ 10 ರೂ. ಹಳೆಯ ನೋಟನ್ನು (10 Rupees Old Note)  ಮಾರಾಟ ಮಾಡಲು ನೀವು ಕಾಯಿನ್ ಬಜಾರ್ ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ. ಇದು ಹಳೆಯ ನೋಟುಗಳನ್ನು ಹೊಂದಿರುವ ಜನರಿಗೆ ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಮತ್ತು ತ್ವರಿತ ಹಣವನ್ನು ಸಂಪಾದಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ- MSMEs: ಕೇವಲ ಪ್ಯಾನ್-ಆಧಾರ್‌ನಲ್ಲಿ ಹೊಸ ಕಂಪನಿ ರಿಜಿಸ್ಟರ್ ಮಾಡಬಹುದು

ಈ ವಿಶೇಷ 10 ರೂಪಾಯಿ ನೋಟು  (10 Rupees Note) ಒಂದು ಬದಿಯಲ್ಲಿ ಅಶೋಕ ಸ್ತಂಭ ಮತ್ತು ಇನ್ನೊಂದು ಬದಿಯಲ್ಲಿ ದೋಣಿ ಮುದ್ರೆಯನ್ನು ಹೊಂದಿರಬೇಕು. ಈ ಅನನ್ಯ ನೋಟನ್ನು 1943 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಮುದ್ರಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ನೋಟಿನ ಮೇಲೆ ಅಂದಿನ ಆರ್‌ಬಿಐ (RBI) ಗವರ್ನರ್ ಸಿಡಿ ದೇಶಮುಖ್ ಅವರ ಸಹಿಯನ್ನು ಹೊಂದಿರಬೇಕು ಮತ್ತು ನೋಟಿನ ಎರಡೂ ತುದಿಗಳ ಮೇಲ್ಭಾಗದಲ್ಲಿ 10 ರೂಪಾಯಿಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದಿರಬೇಕು.

Coinbazzar.com ನಲ್ಲಿ ಹಳೆಯ 10 ರೂ. ನೋಟುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಹೇಗೆ ಎಂದು ತಿಳಿಯಿರಿ-

ಹಂತ -1: coinbazzar.com ನಲ್ಲಿ ಲಾಗ್ ಇನ್ ಆಗಿ

ಇದನ್ನೂ ಓದಿ- LPG Cylinder Offer: ಜೂನ್ 30 ರ ಮೊದಲು ಬುಕಿಂಗ್ ಮಾಡಿ ಕೇವಲ 10 ರೂ.ಗೆ ಸಿಲಿಂಡರ್‌ ಖರೀದಿಸಿ

ಹಂತ -2: ಮುಖಪುಟದಲ್ಲಿ, ನೋಂದಣಿ ಕ್ಲಿಕ್ ಮಾಡಿ ಮತ್ತು ನಿಮ್ಮನ್ನು ಮಾರಾಟಗಾರರಾಗಿ ನೋಂದಾಯಿಸಿ.

ಹಂತ -3: ನಿಮ್ಮ ಬಳಿ ಇರುವ ಹಳೆಯ 10 ರೂ. ನೋಟಿನ ಸ್ಪಷ್ಟ ಮತ್ತು ಸೂಕ್ತವಾದ ಚಿತ್ರವನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಪ್ಲಾಟ್‌ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಿ. ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸಲು ವೆಬ್‌ಸೈಟ್ ಬಳಸುತ್ತಿರುವ ಜನರಿಗೆ ಕಾಯಿನ್ಬಜಾರ್ ವೆಬ್‌ಸೈಟ್ ನಿಮ್ಮ ಜಾಹೀರಾತನ್ನು ಸುಗಮಗೊಳಿಸುತ್ತದೆ.

ಹಂತ -4: ಹಳೆಯ 10 ರೂ. ನೋಟು ಖರೀದಿಸಲು ಸಿದ್ಧರಿರುವವರು ನಿಮ್ಮ ಜಾಹೀರಾತನ್ನು ನೋಡಿದ ನಂತರ ನಿಮ್ಮನ್ನು ಸಂಪರ್ಕಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News