EPFO ಖಾತೆದಾರರೇ ಗಮನಿಸಿ : ನಾಳೆಯಿಂದ ಬದಲಾಗಲಿದೆ ಈ ನಿಯಮ!

ಲಿಂಕ್ ಹೊಂದಿಲ್ಲದಿದ್ದರೆ, ಅವರು ಇಪಿಎಫ್‌ಒ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

Last Updated : May 31, 2021, 11:14 AM IST
  • ಸಾಮಾಜಿಕ ಭದ್ರತಾ ಸಂಹಿತೆ 2020 ರ ಸೆಕ್ಷನ್ 142 ರ ಅಡಿಯಲ್ಲಿ EPFO ಹೊಸ ನಿರ್ಧಾರ
  • ಜೂನ್ 1 ರ ನಂತರ, ಯಾವುದೇ ಖಾತೆಯನ್ನು ಆಧಾರ್ ಅಥವಾ UAN ಲಿಂಕ್
  • ಲಿಂಕ್ ಹೊಂದಿಲ್ಲದಿದ್ದರೆ, ಅವರು ಇಪಿಎಫ್‌ಒ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.
EPFO ಖಾತೆದಾರರೇ ಗಮನಿಸಿ : ನಾಳೆಯಿಂದ ಬದಲಾಗಲಿದೆ ಈ ನಿಯಮ! title=

ನವದೆಹಲಿ : ಸಾಮಾಜಿಕ ಭದ್ರತಾ ಸಂಹಿತೆ 2020 ರ ಸೆಕ್ಷನ್ 142 ರ ಅಡಿಯಲ್ಲಿ EPFO ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ಜೂನ್ 1 ರ ನಂತರ, ಯಾವುದೇ ಖಾತೆಯನ್ನು ಆಧಾರ್ ಅಥವಾ UAN ಲಿಂಕ್  ಹೊಂದಿಲ್ಲದಿದ್ದರೆ ಇಲ್ಲವೇ ಆಧಾರ್ ಪರಿಶೀಲಿಸದಿದ್ದರೆ, ಅದರ ಇಸಿಆರ್-ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ತುಂಬಬಾರದು. PF ಖಾತೆದಾರರಿಗೆ ಉದ್ಯೋಗದಾತರ ಕೊಡುಗೆಯನ್ನು ಸಹ ಬಂದ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಎಲ್ಲಾ ಉದ್ಯೋಗದಾತರಿಗೆ EPFO(Employees' Provident Fund Organisation) ಅಧಿಸೂಚನೆ ಹೊರಡಿಸಿದ್ದು, 2021 ರ ಜೂನ್ 1 ರಿಂದ ಸದಸ್ಯರ ಖಾತೆ ಜೊತೆ ಆಧಾರ್‌ ಕಾರ್ಡ್ ಲಿಂಕ್ ಆಗಿಲ್ಲದಿದ್ದರೆ, ECR ಸಲ್ಲಿಸಲು ಬರುವುದಿಲ್ಲ. ಅಲ್ಲದೆ, ಪಿಎಫ್ ಖಾತೆದಾರರ ಖಾತೆ ಜೊತೆ ಆಧಾರ್‌ ಕಾರ್ಡ್ ಲಿಂಕ್ ಹೊಂದಿಲ್ಲದಿದ್ದರೆ, ಅವರು ಇಪಿಎಫ್‌ಒ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ : Petrol-Diesel Price : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ : ಇಲ್ಲಿದೆ ಇಂದಿನ ಬೆಲೆ!

PF ಖಾತೆಗೆ ಆಧಾರ್‌ ಲಿಂಕ್ ಮಾಡುವುದು ಹೇಗೆ :

ಹಂತ 1  : www.epfindia.gov.in ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಧಿಕೃತ EPFO  ವೆಬ್‌ಸೈಟ್‌(Website)ಗೆ ಹೋಗಿ ಮತ್ತು ಲಾಗ್ ಇನ್ ಮಾಡಿ.

ಇದನ್ನೂ ಓದಿ : Savings Bank Account And Tax: ಬ್ಯಾಂಕ್ ನ Savings Account ನಲ್ಲಿರುವ ಎಷ್ಟು ಠೇವಣಿ Tax Free ಆಗಿರುತ್ತದೆ?

ಹಂತ 2 : ಆನ್‌ಲೈನ್ ಸೇವೆಗಳ ಮೇಲೆ - ಇ-ಕೆವೈಸಿ ಪೋರ್ಟಲ್ - ಲಿಂಕ್ UAN, ಆಧಾರ್(Aadhar Card).

ಹಂತ 3 : UAN ಖಾತೆಯಲ್ಲಿ ನೋಂದಾಯಿಸಲಾದ ನಿಮ್ಮ UAN ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ(Mobile Number)ಯನ್ನು ಅಪ್‌ಲೋಡ್ ಮಾಡಿ.

ಇದನ್ನೂ ಓದಿ : Emergency Credit Line Guarantee ಯೋಜನೆಯ ವ್ಯಾಪ್ತಿ ವಿಸ್ತರಿಸಿದ ಕೇಂದ್ರ ಸರ್ಕಾರ

ಹಂತ 4 : ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ನೀವು OTP ಸಂಖ್ಯೆಯನ್ನು ಪಡೆಯುತ್ತೀರಿ. ಒಟಿಪಿ ಬಾಕ್ಸ್ ನಲ್ಲಿ ಒಟಿಪಿ ಸಂಖ್ಯೆಯನ್ನು ನಮೂದಿಸಿ, ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ(Aadhar Card)ಯನ್ನು ನಮೂದಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ. ನಂತರ ಪ್ರಪೋಸ್ಡ್ ಟು ಒಟಿಪಿ ಪರಿಶೀಲನೆ ಆಯ್ಕೆಯ ಮೇಲೆ.

ಇದನ್ನೂ ಓದಿ : Petrol-Diesel Price : ವಾಹನ ಸವಾರರೇ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ 

ಹಂತ 5 : ನಿಮ್ಮ ಆಧಾರ್ ವಿವರಗಳನ್ನು ಪರಿಶೀಲಿಸಲು ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೇಲ್‌ನಲ್ಲಿ ಒಟಿಪಿ(OTP) ರಚಿಸಿ. ಪರಿಶೀಲನೆಯ ನಂತರ, ನಿಮ್ಮ ಆಧಾರ್ ಅನ್ನು ನಿಮ್ಮ ಪಿಎಫ್ ಖಾತೆಗೆ ಲಿಂಕ್ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News