ನವದೆಹಲಿ: ಕೇಂದ್ರ ನೌಕರರಿಗೆ ಮತ್ತೊಂದು ಭರ್ಜರಿ ಖುಷಿ ಸುದ್ದಿ ಸಿಕ್ಕಿದೆ. ಈಗಾಗಲೇ ಜುಲೈ 1ರಿಂದ ಕೇಂದ್ರ ಉದ್ಯೋಗಿಗಳು ಶೇ.28ರಷ್ಟು ತುಟ್ಟಿಭತ್ಯೆ (DA) ಮತ್ತು ಪಿಂಚಣಿದಾರರು ಶೇ.28ರಷ್ಟು ತುಟ್ಟಿಭತ್ಯೆ ಪರಿಹಾರ (DR)ವನ್ನು ಪಡೆಯುತ್ತಿದ್ದಾರೆ. ಇದೀಗ ಉದ್ಯೋಗಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿರುವ ಕೇಂದ್ರ ಸರ್ಕಾರ DA ಯನ್ನು ಶೇ.28ರಿಂದ ಶೇ.31ಕ್ಕೆ ಹೆಚ್ಚಿಸಿದೆ. ಶೇ.31ರಷ್ಟು DA ಹೆಚ್ಚಳದಿಂದ ನಿಮ್ಮ ಸಂಬಳ ಎಷ್ಟು ಹೆಚ್ಚಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.
ವೇತನ ಶ್ರೇಣಿಗೆ ಅನುಗುಣವಾಗಿ ಹೆಚ್ಚಳ
ಕೇಂದ್ರ ಸರ್ಕಾರ DA ಯನ್ನು ಮತ್ತೆ ಶೇ.3ರಷ್ಟು ಹೆಚ್ಚಿಸಿದ್ದು, ಇದೀಗ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ.31ರ ದರದಲ್ಲಿ DA ಮತ್ತು DR ನೀಡಲಾಗುವುದು. ಕೇಂದ್ರ ನೌಕರರು(7th Pay Commission) ಮತ್ತು ಪಿಂಚಣಿದಾರರು ತಮ್ಮ ಮೂಲ ವೇತನ ಮತ್ತು ಶ್ರೇಣಿಗೆ ಅನುಗುಣವಾಗಿ ವೇತನದ ಹೆಚ್ಚಳವನ್ನು ಪಡೆಯಬಹುದು.
ಕೇಂದ್ರ ಸರ್ಕಾರ ಶೇ.31 DA ಘೋಷಿಸಿತ್ತು
ಕೇಂದ್ರ ಸರ್ಕಾರ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು. ಅಂದರೆ ಕೇಂದ್ರ ನೌಕರರು ಈಗ ಶೇ.31ರಷ್ಟು DA ಯೊಂದಿಗೆ ಸಂಬಳ ಪಡೆಯುತ್ತಾರೆ. 1 ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಇದರ ಲಾಭ ಪಡೆಯಲಿದ್ದಾರೆ.
ಇದನ್ನೂ ಓದಿ: Aadhaar Card New Rule: ಆಧಾರ್ ಕಾರ್ಡ್ ಮಾಡಿಸುವ ಮುನ್ನ ಬದಲಾಗಿರುವ UIDAI ನಿಯಮಗಳನ್ನು ತಿಳಿಯಿರಿ
ಜುಲೈ 1 ರಿಂದ ಜಾರಿಗೆ ಬರಲಿದೆ
ಕೇಂದ್ರ ಸರ್ಕಾರದ ಪ್ರಕಟಣೆಯ ಪ್ರಕಾರ ತುಟ್ಟಿಭತ್ಯೆಯಲ್ಲಿ ಹೊಸ ಹೆಚ್ಚಳವನ್ನು ಈ ವರ್ಷ ಜುಲೈ 1 ರಿಂದ ಜಾರಿಗೆ ತರಲಾಗಿದೆ. ಈ ಹಿಂದೆ ಜುಲೈನಲ್ಲಿ ಸರ್ಕಾರ ತುಟ್ಟಿಭತ್ಯೆಯನ್ನು (DA ಹೆಚ್ಚಳ) ಶೇ.11ರಿಂದ ಶೇ.28ಕ್ಕೆ ಹೆಚ್ಚಿಸಿತ್ತು. ಆ ಬಳಿಕ ಈಗ ಶೇ.3ರಷ್ಟು ಏರಿಕೆಯಾಗಿದೆ. ಇದರಿಂದ ಈಗ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ.31ರಷ್ಟು DA ಸಿಗಲಿದೆ.
ಶೇ.31ರಷ್ಟು DA ಮೇಲೆ ಲೆಕ್ಕಾಚಾರ
ಈಗ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳದೊಂದಿಗೆ ಒಟ್ಟು DA ಶೇ,31ರಷ್ಟು ಆಗಲಿದೆ. 7ನೇ ವೇತನ ಆಯೋಗದ ಮ್ಯಾಟ್ರಿಕ್ಸ್ ಪ್ರಕಾರ ಕೇಂದ್ರ ನೌಕರರ ಲೆವೆಲ್-1ರ ವೇತನ ಶ್ರೇಣಿ 18,000 ರೂ.ನಿಂದ 56,900 ರೂ. ಇದೆ. ಈಗ 18,000 ರೂ. ಮೂಲ ವೇತನದಲ್ಲಿ ಒಟ್ಟು ವಾರ್ಷಿಕ ತುಟ್ಟಿ ಭತ್ಯೆ 66,960 ರೂ. ಆಗಲಿದೆ. ವೇತನದಲ್ಲಿ ಒಟ್ಟು 30,240 ರೂ. ವಾರ್ಷಿಕ ಹೆಚ್ಚಳವಾಗಲಿದೆ.
ಕನಿಷ್ಠ ಮೂಲ ವೇತನದ ಲೆಕ್ಕಾಚಾರ
1. ನೌಕರನ ಮೂಲ ವೇತನ 18,000 ರೂ.
2. ಹೊಸ ತುಟ್ಟಿ ಭತ್ಯೆ (ಶೇ.31ರಷ್ಟು) 5,580 ರೂ./ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (ಶೇ.17ರಷ್ಟು) 3,060 ರೂ./ತಿಂಗಳು
4. ತುಟ್ಟಿ ಭತ್ಯೆ ಎಷ್ಟು ಹೆಚ್ಚಾಗಲಿದೆ? 5,580-3,060 = 2,520 ರೂ./ ತಿಂಗಳು
5. ವಾರ್ಷಿಕ ವೇತನ ಹೆಚ್ಚಳ 2,520X12 = 30,240 ರೂ.
ಗರಿಷ್ಠ ಮೂಲ ವೇತನದ ಲೆಕ್ಕಾಚಾರ
1. ಉದ್ಯೋಗಿಯ ಮೂಲ ವೇತನ 56,900 ರೂ.
2. ಹೊಸ ತುಟ್ಟಿ ಭತ್ಯೆ (ಶೇ.31ರಷ್ಟು) 17,639 ರೂ./ ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (ಶೇ.17ರಷ್ಟು) 9,673 ರೂ. / ತಿಂಗಳು
4. ತುಟ್ಟಿ ಭತ್ಯೆ ಎಷ್ಟು ಹೆಚ್ಚಾಗಿದೆ? 17,639-9,673 = 7,966 ರೂ./ ತಿಂಗಳು
5. ವಾರ್ಷಿಕ ವೇತನ ಹೆಚ್ಚಳ 7,966X12 = 95,592 ರೂ.
ಇದನ್ನೂ ಓದಿ: ಟ್ರಾಫಿಕ್ ಪೋಲಿಸ್ ವಾಹನದ ಕೀಯನ್ನು ತೆಗೆಯುವಂತಿಲ್ಲ, ನಿಮಗೂ ತಿಳಿದಿರಲಿ ಈ ನಿಯಮ
ಶೇ.31ರಷ್ಟು ತುಟ್ಟಿಭತ್ಯೆಯ ಪ್ರಕಾರ 56,900 ರೂ. ಮೂಲ ವೇತನದಲ್ಲಿ ಒಟ್ಟು ವಾರ್ಷಿಕ ತುಟ್ಟಿ ಭತ್ಯೆ 2,11,668 ರೂ. ಆಗಲಿದೆ. ಅಂದರೆ ವೇತನದಲ್ಲಿ 95,592 ರೂ. ವಾರ್ಷಿಕ ಹೆಚ್ಚಳವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.