Post Office: ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ 50 ರೂ. ಠೇವಣಿ ಮಾಡಿ 35 ಲಕ್ಷ ಪಡೆಯಿರಿ!

ಅಂಚೆ ಕಚೇರಿ ಯೋಜನೆ: ಅಂಚೆ ಕಚೇರಿಯ ‘ಗ್ರಾಮ ಸುರಕ್ಷಾ ಯೋಜನೆ’ಯಲ್ಲಿ ನೀವು ಪ್ರತಿದಿನ ಕೇವಲ 50 ರೂ. ಠೇವಣಿ ಮಾಡಿದರೆ, ಮುಂದಿನ ದಿನಗಳಲ್ಲಿ ನೀವು 35 ಲಕ್ಷ ರೂ.ಗಳವರೆಗೆ ಪ್ರಯೋಜನ ಪಡೆಯಬಹುದು. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Dec 5, 2022, 07:39 AM IST
  • ಅಂಚೆ ಕಚೇರಿಯ 'ಗ್ರಾಮ ಸುರಕ್ಷಾ ಯೋಜನೆ' ಒಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ
  • ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಕೇವಲ 1,500 ರೂ. ಠೇವಣಿ ಮಾಡಬೇಕಾಗುತ್ತದೆ
  • ಇದರಿಂದ ನೀವು 31ರಿಂದ 35 ಲಕ್ಷ ರೂ.ಗಳಷ್ಟು ಲಾಭ ಪಡೆಯಲು ಸಾಧ್ಯವಾಗುತ್ತದೆ
Post Office: ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ 50 ರೂ. ಠೇವಣಿ ಮಾಡಿ 35 ಲಕ್ಷ ಪಡೆಯಿರಿ!    title=
ಅಂಚೆ ಕಚೇರಿಯ 'ಗ್ರಾಮ ಸುರಕ್ಷಾ ಯೋಜನೆ'

ನವದೆಹಲಿ: ನೀವು ಸುರಕ್ಷಿತ ಹೂಡಿಕೆಯನ್ನು ಬಯಸಿದರೆ ಅಂಚೆ ಕಚೇರಿಯ ಹೂಡಿಕೆ ಯೋಜನೆಗಳು ಉತ್ತಮ. ಪೋಸ್ಟ್ ಆಫೀಸ್‌ನಲ್ಲಿ ಮಾಡುವ ಹೂಡಿಕೆಯನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇಲ್ಲಿ ನಿಮಗೆ ಯಾವುದೇ ಅಪಾಯವಿಲ್ಲ. ವಾಸ್ತವವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳಿವೆ. ಆದರೆ ಅದರಲ್ಲಿ ಸಾಕಷ್ಟು ರಿಸ್ಕ್ ಇದೆ. ಹೀಗಾಗಿ ನಿಮ್ಮ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಿ, ಯಾವುದೇ ಅಪಾಯವಿಲ್ಲದೆ ಉತ್ತಮ ಆದಾಯ ಪಡೆಯಬಹುದು.

35 ಲಕ್ಷದ ಬಂಪರ್ ರಿಟರ್ನ್ ಸಿಗಲಿದೆ!

ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳು ನಿಮಗೆ ಹೆಚ್ಚಿನ ಲಾಭವನ್ನು ನೀಡುತ್ತವೆ. ಇದರಲ್ಲಿ ಅಪಾಯದ ಅಂಶ ಕಡಿಮೆಯಾದರೂ, ಆದಾಯವೂ ಉತ್ತಮವಾಗಿರುತ್ತದೆ. ಇಂದು ಅಪಾಯ ಅತ್ಯಲ್ಪವಾಗಿರುವ ಮತ್ತು ಆದಾಯವು ಪ್ರಬಲವಾಗಿರುವ ಹೂಡಿಕೆ ಯೋಜನೆ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಅಂಚೆ ಕಚೇರಿಯ 'ಗ್ರಾಮ ಸುರಕ್ಷಾ ಯೋಜನೆ' ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಈ ಯೋಜನೆಯು ಭಾರತೀಯ ಅಂಚೆ ಇಲಾಖೆ ನೀಡುವ ಒಂದು ಆಯ್ಕೆಯಾಗಿದೆ. ಇದರಲ್ಲಿ ನೀವು ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಕೇವಲ 1,500 ರೂ. ಠೇವಣಿ ಮಾಡಬೇಕಾಗುತ್ತದೆ, ಇದರಿಂದ ನೀವು 31ರಿಂದ 35 ಲಕ್ಷ ರೂ.ಗಳಷ್ಟು ಲಾಭ ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: PM Kisan ಯೋಜನೆಯ ಕಂತು ಬಂದಿದ್ದರೆ ಎಚ್ಚರ! ಇವರು ಹಣ ಹಿಂದಿರುಗಿಸಬೇಕು

ಹೂಡಿಕೆಯ ನಿಯಮಗಳೇನು?

  • - ಈ ಯೋಜನೆಯಯಲ್ಲಿ 9ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
  • - ಈ ಯೋಜನೆಯಡಿ ಕನಿಷ್ಠ ವಿಮಾ ಮೊತ್ತವು 10,000 ರೂ.ಗಳಿಂದ 10 ಲಕ್ಷ ರೂ. ಆಗಿರುತ್ತದೆ.
  • - ಈ ಯೋಜನೆಯ ಪ್ರೀಮಿಯಂ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಮಾಡಬಹುದು.
  • - ಪ್ರೀಮಿಯಂ ಪಾವತಿಸಲು ನೀವು 30 ದಿನಗಳ ಗ್ರೇಸ್ ಅವಧಿಯನ್ನು ಪಡೆಯುತ್ತೀರಿ.
  • - ಈ ಯೋಜನೆಯಲ್ಲಿ ನೀವು ಸಾಲವನ್ನು ಸಹ ತೆಗೆದುಕೊಳ್ಳಬಹುದು.
  • - ಈ ಯೋಜನೆಯನ್ನು ತೆಗೆದುಕೊಂಡ 3 ವರ್ಷಗಳ ನಂತರ, ನೀವು ಅದನ್ನು Surrender ಸಹ ಮಾಡಬಹುದು. ಆದರೆ ಈ ಪರಿಸ್ಥಿತಿಯಲ್ಲಿ ನೀವು ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ.

ನಿಮಗೆ ಎಷ್ಟು ಪ್ರಯೋಜನ ಸಿಗುತ್ತದೆ?  

ಈಗ ಈ ಯೋಜನೆಯಲ್ಲಿ ನೀವು ಯಾವಾಗ ಮತ್ತು ಎಷ್ಟು ಪ್ರಯೋಜನ ಪಡೆಯುತ್ತೀರಿ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಇದನ್ನು ಒಂದು ಉದಾಹರಣೆಯಿಂದ ಅರ್ಥಮಾಡಿಕೊಳ್ಳೋಣ- ಒಬ್ಬ ವ್ಯಕ್ತಿಯು 19 ವರ್ಷ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 10 ಲಕ್ಷ ರೂ.ಗಳ ಪಾಲಿಸಿಯನ್ನು ಖರೀದಿಸಿದರೆ, ನಂತರ 55 ವರ್ಷಗಳವರೆಗೆ ಅವನ ಮಾಸಿಕ ಪ್ರೀಮಿಯಂ 1515 ರೂ, 58 ವರ್ಷಕ್ಕೆ 1,463 ರೂ. ಮತ್ತು 60 ವರ್ಷಕ್ಕೆ 1,411 ರೂ. ಆಗಿರುತ್ತದೆ. ಈ ಸಂದರ್ಭದಲ್ಲಿ ಪಾಲಿಸಿ ಖರೀದಿದಾರರು 55 ವರ್ಷಗಳಿಗೆ 31.60 ಲಕ್ಷ ರೂ., 58 ವರ್ಷಗಳಿಗೆ 33.40 ಲಕ್ಷ ರೂ. ಮತ್ತು 60 ವರ್ಷಗಳವರೆಗೆ 34.60 ಲಕ್ಷ ರೂ.ಗಳ ಮೆಚ್ಯೂರಿಟಿ ಲಾಭವನ್ನು ಪಡೆಯುತ್ತಾರೆ. ಅಂದರೆ ಇಲ್ಲಿ ನೀವು ಸಣ್ಣ ಮೊತ್ತದ ಹೂಡಿಕೆಯಿಂದ ದೊಡ್ಡ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ: Investment Tips: ನಿತ್ಯ ಕೇವಲ ಅಲ್ಪ ಪ್ರಮಾಣದ ಉಳಿತಾಯ ಮಾಡಿ ನೀವೂ ಕೂಡ ಕೋಟ್ಯಾಧಿಪತಿಯಾವ ಫಾರ್ಮುಲಾ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News