Gold Price Today : ದಿನೇ ದಿನೇ ದುಬಾರಿಯಾಗುತ್ತಿದೆ ಚಿನ್ನ ! ಬೆಳ್ಳಿ ಬೆಲೆಯಲ್ಲೂ ಕೊಂಚ ಏರಿಕೆ

Gold Price Today:ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಗುಡ್ ರಿಟರ್ನ್ ಮಾಹಿತಿ ಪ್ರಕಾರ ಚಿನ್ನದ ಬೆಲೆಯಲ್ಲಿ ಇಂದು 270  ರೂ. ಗಳ ಏರಿಕೆ ಕಂಡು ಬಂದಿದೆ.  

Written by - Ranjitha R K | Last Updated : Jun 10, 2022, 08:00 AM IST
  • ಚಿನ್ನದ ಬೆಲೆಯಲ್ಲಿ ಏರಿಕೆ
  • ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಳ
  • ಇಂದಿನ ದರ ಎಷ್ಟು ತಿಳಿಯಿರಿ
Gold Price Today : ದಿನೇ ದಿನೇ ದುಬಾರಿಯಾಗುತ್ತಿದೆ ಚಿನ್ನ ! ಬೆಳ್ಳಿ ಬೆಲೆಯಲ್ಲೂ ಕೊಂಚ ಏರಿಕೆ   title=
Gold Price Today (file photo)

ಬೆಂಗಳೂರು : Gold Price Today : ಇಂದು ಕೂಡಾ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.  ನಿನ್ನೆ 110 ರೂ.ಗಳಷ್ಟು ಏರಿಕೆ ಕಂಡಿದ್ದ ಚಿನ್ನ  ಇಂದು ಮತ್ತೆ 270 ರೂ. ಗಳಷ್ಟು ದುಬಾರಿಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದಿನ ಏರಿಕೆಯ ನಂತರ 10 ಗ್ರಾಂ ಚಿನ್ನದ ಬೆಲೆ  52,310 ರೂ. ಆಗಿದೆ.  ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47,950  ರೂ. ಆಗಿದೆ.  

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ   22 ಕ್ಯಾರೆಟ್ ಚಿನ್ನದ ಬೆಲೆ    24 ಕ್ಯಾರೆಟ್ ಚಿನ್ನದ ಬೆಲೆ 
 ಚೆನ್ನೈ 48,060 52,430
ದೆಹಲಿ 47,950 52,310
ಮುಂಬಯಿ 47,950 52,310
ಕೋಲ್ಕತ್ತಾ  47,950 52,310
ಬೆಂಗಳೂರು  47,950 52,310
ಹೈದರಾಬಾದ್  47,950 52,310
ಕೇರಳ  47,950 52,310

ಇದನ್ನೂ ಓದಿ : ಕರ್ನಾಟಕದ ಮತ್ತೊಂದು ಬ್ಯಾಂಕ್‌ನ ಲೈಸೆನ್ಸ್ ರದ್ದುಗೊಳಿಸಿದ RBI, ಠೇವಣಿದಾರರಿಗೆ ಸಮಸ್ಯೆ!

ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆಯಲ್ಲಿ ಕೂಡಾ ಕೊಂಚ ಏರಿಕೆ ಕಂಡು ಬಂದಿದೆ. ನಿನ್ನೆ ಬೆಳ್ಳಿ ಬೆಲೆಯಲ್ಲಿ 200  ರೂ.ಯಷ್ಟು ಏರಿಕೆಯಾಗಿತ್ತು.  ಇಂದು ಮತ್ತೆ 100  ರೂ. ಗಳ ಏರಿಕೆ ಕಂಡು ಬಂದಿದೆ. ಈ ಲೇಖನ ಬರೆಯುವ ಹೊತ್ತಿಗೆ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ. 

ನಗರ  ಇಂದಿನ ಬೆಳ್ಳಿ ಬೆಲೆ  
 ಚೆನ್ನೈ 68,000
ದೆಹಲಿ 62,200
ಮುಂಬಯಿ 62,200
ಕೋಲ್ಕತ್ತಾ  62,200
ಬೆಂಗಳೂರು  68,000
ಹೈದರಾಬಾದ್  68,000
ಕೇರಳ  68,000

ಇದನ್ನೂ ಓದಿ : ಜಿಯೋ ಗ್ರಾಹಕರಿಗೆ ಶಾಕ್: ಪ್ಲಾನ್ ಬೆಲೆಯಲ್ಲಿ 150 ರೂ. ಹೆಚ್ಚಳ!

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News