Gold Silver Price Today :ಸತತ ಎರಡನೇ ದಿನವೂ ಅಗ್ಗವಾದ ಚಿನ್ನ : ಬಂಗಾರದ ಖರೀದಿಗೆ ಇದುವೇ ಸರಿಯಾದ ಸಮಯ

Gold Silver Price Latest : ಸತತ ಎರಡನೇ ದಿನವೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬಂಗಾರ ಖರೀದಿಸುವ ಮುನ್ನ ಇಂದಿನ ಬೆಲೆಯನ್ನು ತಿಳಿದುಕೊಳ್ಳಿ.   

Written by - Ranjitha R K | Last Updated : Mar 5, 2024, 09:59 AM IST
  • ಅಗ್ಗವಾದ ಚಿನ್ನದ ಬೆಲೆ
  • ಬೆಳ್ಳಿ ದರದಲ್ಲಿಯೂ ಇಳಿಕೆ
  • ನಿಮ್ಮ ನಗರದಲ್ಲಿ ಎಷ್ಟಿದೆ ಬಂಗಾರದ ಬೆಲೆ ?
Gold Silver Price Today :ಸತತ ಎರಡನೇ ದಿನವೂ ಅಗ್ಗವಾದ ಚಿನ್ನ : ಬಂಗಾರದ ಖರೀದಿಗೆ ಇದುವೇ ಸರಿಯಾದ ಸಮಯ title=

Gold Silver Price Latest : ಸತತ ಎರಡನೇ ದಿನವೂ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 58,890 ರೂ. ಆಗಿದ್ದರೆ 24ಕ್ಯಾರೆಟ್ ಚಿನ್ನದ ಬೆಲೆ 64,240 ರೂ. ಆಗಿದೆ. ನಿನ್ನೆ ಮತ್ತು ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಮಟ್ಟದ ಇಳಿಕೆ ಕಂಡುಬಂದಿದೆ. ಇಂದು ಯಾವ ನಗರದಲ್ಲಿ ಚಿನ್ನ ಬೆಳ್ಳಿಯ ಬೆಲೆ ಎಷ್ಟಿದೆ ನೋಡೋಣ.

ದೆಹಲಿಯಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ- 58,890
24 ಕ್ಯಾರೆಟ್ ಚಿನ್ನದ ಬೆಲೆ-ಪ್ರತಿ 10 ಗ್ರಾಂ- 64,230

ಬೆಂಗಳೂರಿನಲ್ಲಿ ಚಿನ್ನದ ಬೆಲೆ 
58,740(22 ಕ್ಯಾರೆಟ್) 
64,080 (24 ಕ್ಯಾರೆಟ್)

ಮುಂಬೈನಲ್ಲಿ ಚಿನ್ನದ ಬೆಲೆ
58,740 (22 ಕ್ಯಾರೆಟ್)
64,080 (24 ಕ್ಯಾರೆಟ್)

ಚೆನೈಯಲ್ಲಿ ಚಿನ್ನದ ಬೆಲೆ
58,290 (22 ಕ್ಯಾರೆಟ್)
64,680 (24 ಕ್ಯಾರೆಟ್)

ಕೇರಳದಲ್ಲಿ ಚೆನೈಯಲ್ಲಿ ಚಿನ್ನದ ಬೆಲೆ
58,740  (22 ಕ್ಯಾರೆಟ್)
64,080  (24 ಕ್ಯಾರೆಟ್)

ಹೈದರಾಬಾದ್ ನಲ್ಲಿ ಚಿನ್ನದ ಬೆಲೆ 
58,740 (22 ಕ್ಯಾರೆಟ್)
64,080 (24 ಕ್ಯಾರೆಟ್)

ಇದನ್ನೂ ಓದಿ : Karnataka Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ

ಚಿನ್ನದ ಪರಿಶುದ್ಧತೆಯನ್ನು ತಿಳಿಯುವುದು ಹೇಗೆ:
ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ISO (Indian Standard Organization) ಹಾಲ್ ಮಾರ್ಕ್‌ಗಳನ್ನು ನೀಡುತ್ತದೆ. 24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 999, 23 ಕ್ಯಾರೆಟ್‌ನಲ್ಲಿ 958, 22 ಕ್ಯಾರೆಟ್‌ನಲ್ಲಿ 916, 21 ಕ್ಯಾರೆಟ್‌ನಲ್ಲಿ 875 ಮತ್ತು 18 ಕ್ಯಾರೆಟ್‌ನಲ್ಲಿ 750 ಎಂದು ಬರೆಯಲಾಗಿರುತ್ತದೆ. ಚಿನ್ನವನ್ನು 22 ಕ್ಯಾರೆಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಕೆಲವರು 18 ಕ್ಯಾರೆಟ್‌ಗಳನ್ನು ಸಹ ಬಳಸುತ್ತಾರೆ. 

22 ಮತ್ತು 24 ಕ್ಯಾರೆಟ್ ಚಿನ್ನದ ನಡುವಿನ ವ್ಯತ್ಯಾಸ? :
24 ಕ್ಯಾರೆಟ್ ಚಿನ್ನವು 99.9% ಶುದ್ಧವಾಗಿದೆ ಮತ್ತು 22 ಕ್ಯಾರೆಟ್ ಚಿನ್ನವು ಸರಿಸುಮಾರು 91% ಶುದ್ಧವಾಗಿದೆ. 22 ಕ್ಯಾರೆಟ್ ಚಿನ್ನದಲ್ಲಿ ತಾಮ್ರ, ಬೆಳ್ಳಿ, ಸತುವು ಮುಂತಾದ ವಿವಿಧ ಲೋಹಗಳ 9% ರಷ್ಟು ಮಿಶ್ರಣ ಮಾಡಿ ಆಭರಣವನ್ನು ತಯಾರಿಸಲಾಗುತ್ತದೆ. 24 ಕ್ಯಾರೆಟ್ ಚಿನ್ನದಲ್ಲಿ ಆಭರಣ ತಯಾರಿಸುವುದು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಹೆಚ್ಚಿನ ಅಂಗಡಿಯವರು 22 ಕ್ಯಾರೆಟ್‌ನಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಾರೆ.

ಇದನ್ನೂ ಓದಿ : Credit Card Rules: ಕ್ರೆಡಿಟ್ ಕಾರ್ಡ್‌ನ ಬದಲಾಗಿರುವ ಈ ನಿಯಮಗಳ ಬಗ್ಗೆ ತಿಳಿದಿದೆಯೇ?

ಹಾಲ್‌ಮಾರ್ಕ್ ಅನ್ನು ನೆನಪಿನಲ್ಲಿಡಿ:
ಚಿನ್ನವನ್ನು ಖರೀದಿಸುವ ಮೊದಲು, ಚಿನ್ನದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಲ್‌ಮಾರ್ಕ್ ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಬೇಕು. ಹಾಲ್‌ಮಾರ್ಕಿಂಗ್ ಯೋಜನೆಯು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಆಕ್ಟ್, ನಿಯಮಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಪ್ರಮುಖ ವಿಚಾರ : 
ಮೇಲೆ ತಿಳಿಸಲಾದ ಚಿನ್ನದ ದರಗಳಲ್ಲಿ GST, TCS ಮತ್ತು ಇತರ ಶುಲ್ಕಗಳನ್ನು ಒಳಗೊಂಡಿರುವುದಿಲ್ಲ. ನೀವು ಆಭಾನ ಖರೀದಿಸುವಾಗ ಈ ಎಲ್ಲಾ ಹೆಚ್ಚುವರಿ ದರಗಳು ಸೇರಿದಾಗ ಬೆಲೆಯಲ್ಲಿ ಹೆಚ್ಚಳ ಕಂಡು ಬರುತ್ತದೆ. ಈ ಸುದ್ದಿ ಪ್ರಕಟಿಸುವ ಹೊತ್ತಿನಲ್ಲಿ ಗುಡ್ ರಿಟರ್ನ್ ಮಾಹಿತಿಯನ್ನು ಆಧರಿಸಿ ಈ ಬೇಕೆಯನ್ನು ನೀಡಲಾಗಿದೆ. ಇನ್ನು ನಿಮ್ಮ ನಗರಕ್ಕೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

Trending News