RBI Latest News: RBIನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ತಮ್ಮ ಒಂದು ಹೇಳಿಕೆಯಲ್ಲಿ ನೋಟು ಅಮಾನ್ಯೀಕರಣವನ್ನು ನೆನಪಿಸಿಕೊಟ್ಟಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ 5, 10, 100 ರೂ. ಮುಖಬೆಲೆಯ ಹಳೆ ನೋಟುಗಳನ್ನು ಹಿಂಪಡೆಯುವ ಯೋಜನೆ ರೂಪಿಸುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಎಲ್ಲವೂ ಅಂದುಕೊಂಡಂತೆ ನಡೆದರೆ, ಬರುವ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಿಂದ ಈ ಕುರಿತು ಘೋಷಣೆ ಹೊರಬೀಳುವ ಸಾಧ್ಯತೆ ಇದೆ.
ಸ್ಥಗಿತಗೊಳ್ಳಲಿವೆ 100 ರೂ. ಮುಖಬೆಲೆಯ ನೋಟುಗಳು
ಕಾಲ-ಕಾಲಕ್ಕಾಗುತ್ತಿರುವ ನಕಲಿ ನೋಟುಗಳ ಹಾವಳಿ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹಳೆ ಸಿರೀಜ್ ನೋಟುಗಳನ್ನು ಸ್ಥಗಿತಗೊಳಿಸುತ್ತದೆ. ಅಧಿಕೃತ ಘೋಷಣೆಯ ಬಳಿಕ ಸ್ಥಗಿತಗೊಳಿಸಲಾಗಿರುವ ಹಳೆ ನೋಟುಗಳನ್ನು ಬ್ಯಾಂಕ್ ನಲ್ಲಿ ಜಮಾ ಮಾಡಬೇಕು. ನೀವು ಜಮೆ ಮಾಡಿರುವ ಒಟ್ಟು ಮೊತ್ತದಷ್ಟು ಹಣವನ್ನು ಬ್ಯಾಂಕ್ ಗಳು ನಿಮ್ಮ ಖಾತೆಗೆ ಸೇರಿಸುತ್ತವೆ ಅಥವಾ ಅದರ ಬದಲಿಗೆ ಹೊಸ ನೋಟುಗಳನ್ನು ನಿಮಗೆ ನೀಡುತ್ತವೆ.
ಇದನ್ನು ಓದಿ-Refunding Failed Transactions: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಗೆ ಪತ್ರ ಬರೆದ CCPA
ಎರಡು ವರ್ಷಗಳ ಹಿಂದೆಯಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ (RBI) 100 ರೂ. ಮುಖಬೆಲೆಯ ನೂತನ ನೋಟುಗಳನ್ನು ಬಿಡುಗಡೆಗೊಳಿಸಿದೆ. ನೂತನವಾಗಿ ಬಿಡುಗಡೆಗೊಲಿಸಲಾಗಿರುವ ಬದನೆ ಬಣ್ಣದ 100 ರೂ. ನೋಟಿನ ಮೇಲೆ ರಾಣಿ ಕಿ ಬೌಡಿ ಚಿತ್ರವಿದೆ. ಇದು ಗುಜರಾತ್ ನ ಪಾಟನ್ ಜಿಲ್ಲೆಯಲ್ಲಿದೆ. 4 ವರ್ಷಗಳ ಹಿಂದೆ UNESCO ಈ ಬಾವಿಯನ್ನು ವಿಶ್ವದ ಪಾರಂಪರಿಕ ಸ್ಥಾನ ಎಂದು ಘೋಷಿಸಿದೆ. UNESCO ಸೈಟ್ ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ ರಾಣಿಕಿ ಬೌಡಿ (ರಾಣಿಯ ಬಾವಿ) ಸರಸ್ವತಿ ನದಿಯ ಜೊತೆಗೆ ನಿಕಟ ಸಂಬಂಧ ಹೊಂದಿದೆ ಎನ್ನಲಾಗಿದೆ. ಈ ಬಾವಿಗೆ UNESCO ಬಾವಿಗಳ ರಾಣಿ ಎಂಬ ಬಿರುದು ನೀಡಿದೆ. ಅಧಿಕೃತ ಆದೇಶ ಹೊರಬರುವವರೆಗೆ ಹೊಸ ನೋಟುಗಳ ಜೊತೆಗೆ ಹಳೆ ನೋಟುಗಳು ಕೂಡ ಚಾಲ್ತಿಯಲ್ಲಿರಲಿವೆ ಎಂದು ಬಿ. ಮಹೇಶ್ ಹೇಳಿದ್ದಾರೆ.
RBIಗೆ ತಲೆನೋವಾಗಿ ಪರಿಣಮಿಸಿರುವ 10 ರೂ. ನಾಣ್ಯಗಳು
10 ರೂ. ಮುಖಬೆಲೆಯ ನಾಣ್ಯಗಳು ಭಾರತೀಯ ರಿಸರ್ವ್ ಬ್ಯಾಂಕ್ ಗೆ ತಲೆನೋವಾಗಿ ಪರಿಣಮಿಸಿವೆ ಎನ್ನಲಾಗಿದೆ. ಈ ನಾಣ್ಯಗಳು 15 ವರ್ಷಗಳ ಹಿಂದೆ ಬಿಡುಗಡೆಯಾಗಿವೆ. ಆದರೆ, ವ್ಯಾಪಾರಿಗಳು ಹಾಗೂ ಕಾರ್ಮಿಕರು ಇಂದಿಗೂ ಕೂಡ ಈ ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಇವುಗಳ ಸಿಂಧುತ್ವದ ಕುರಿತು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಈ ನಾಣ್ಯಗಳನ್ನು ಸ್ಥಗಿತಗೊಳಿಸಲು ಆರ್.ಬಿ. ಐ ಯಾವುದೇ ಯೋಜನೆ ರೂಪಿಸುತ್ತಿಲ್ಲ ಎಂದು ಬಿ. ಮಹೇಶ್ ಹೇಳಿದ್ದಾರೆ. ಇದಲ್ಲದೆ ನಕಲಿ ನಾಣ್ಯಗಳಿಂದ ಇದುವರೆಗೆ ಯಾವುದೇ ಅಪಾಯ ಗಮನಿಸಲಾಗಿಲ್ಲ . ಹೀಗಾಗಿ ಎಂದಿನಂತ ಈ ನಾಣ್ಯಗಳನ್ನು ಮಾರುಕಟ್ಟೆಯಲ್ಲಿ ಮರುಸ್ಥಾಪಿಸಲು RBI ತನ್ನ ಎಲ್ಲಾ ಪ್ರಯತ್ನಗಳನ್ನು ಮುಂದುವರೆಸಲಿದೆ ಎಂದು ಬಿ. ಮಹೇಶ್ ಹೇಳುತ್ತಾರೆ.
ಇದನ್ನು ಓದಿ-20 ರೂಪಾಯಿಗಳ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದ ಆರ್‌ಬಿಐ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.