RBI RDG Scheme: ಆರ್.ಬಿ. ಐನ ಈ ಸೂಪರ್ ಹಿಟ್ ಸ್ಕೀಮ್ ಮೂಲಕ ಖಾತೆ ತೆರೆಯಿರಿ, ಸುರಕ್ಷತೆಯ ಜೊತೆಗೆ ಬಂಪರ್ ರಿಟರ್ನ್ ನಿಮ್ಮದಾಗಿಸಿಕೊಳ್ಳಿ

Retail Direct Gilt Account - ಸರ್ಕಾರಿ ಸೆಕ್ಯೂರಿಟಿಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದವರಿಗೆ ಚಿಲ್ಲರೆ ನೇರ ಹೂಡಿಕೆ ಖಾತೆ ಒನ್ ಸ್ಟಾಪ್ ಸೊಲ್ಯೂಶನ್ ಆಗಿದೆ. ಸರ್ಕಾರಿ ಭದ್ರತೆಗಳಲ್ಲಿ ಜನಸಾಮಾನ್ಯರ ಹೂಡಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ವರ್ಷದ ಫೆಬ್ರುವರಿಯಲ್ಲಿ ಈ ಖಾತೆಯನ್ನು ಪರಿಚಯಿಸಲಾಗಿದೆ.  

Written by - Nitin Tabib | Last Updated : Apr 24, 2022, 08:08 PM IST
  • ಚಿಲ್ಲರೆ ಹೂಡಿಕೆದಾರರು ಈಗ ನೇರವಾಗಿ ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಬಹುದು.
  • ಚಿಲ್ಲರೆ ಹೂಡಿಕೆದಾರರು ಇದೀನ ಆರ್‌ಬಿಐನವಿಶೇಷ ಯೋಜನೆಯಡಿ ನೋಂದಾಯಿಸಿಕೊಳ್ಳುವ ಮೂಲಕ ನೇರ ಗಿಲ್ಟ್ ಖಾತೆಯನ್ನು ಹೊಂದಬಹುದಾಗಿದೆ.
  • ತನ್ಮೂಲಕ ಅವರು ನೇರವಾಗಿ ಗಿಲ್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.
RBI RDG Scheme: ಆರ್.ಬಿ. ಐನ ಈ ಸೂಪರ್ ಹಿಟ್ ಸ್ಕೀಮ್ ಮೂಲಕ ಖಾತೆ ತೆರೆಯಿರಿ, ಸುರಕ್ಷತೆಯ ಜೊತೆಗೆ ಬಂಪರ್ ರಿಟರ್ನ್ ನಿಮ್ಮದಾಗಿಸಿಕೊಳ್ಳಿ title=
RBI RDG Scheme

Retail Direct Gilt Account - ಚಿಲ್ಲರೆ ಹೂಡಿಕೆದಾರರು ಈಗ ನೇರವಾಗಿ ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಬಹುದು. ಚಿಲ್ಲರೆ ಹೂಡಿಕೆದಾರರು ಇದೀನ ಆರ್‌ಬಿಐನ ವಿಶೇಷ ಯೋಜನೆಯಡಿ ನೋಂದಾಯಿಸಿಕೊಳ್ಳುವ ಮೂಲಕ ನೇರ ರಿಟೇಲ್ ಗಿಲ್ಟ್ ಖಾತೆಯನ್ನು ಹೊಂದಬಹುದಾಗಿದೆ. ತನ್ಮೂಲಕ  ನೇರವಾಗಿ ಗಿಲ್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಭಾರತದಲ್ಲಿ ಉಳಿತಾಯ ಖಾತೆ (ರೂ. ಗಳಲ್ಲಿ), ಪ್ಯಾನ್, ಮಾನ್ಯತೆ ಹೊಂದಿರುವ ಇ-ಮೇಲ್, ಕೆವೈಸಿ ದಾಖಲೆಗಳು, ನೋಂದಾಯಿತ ಮೊಬೈಲ್ ಸಂಖ್ಯೆ ಇರುವ ಹೂಡಿಕೆದಾರರು ಈ ಖಾತೆಯನ್ನು ತೆರೆಯಬಹುದು.

RBI ನ RDG ಖಾತೆ ತೆರೆಯಬಹುದು
ಸರ್ಕಾರಿ ಸೆಕ್ಯೂರಿಟಿಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದವರಿಗೆ RBI ಚಿಲ್ಲರೆ ನೇರ ಹೂಡಿಕೆ ಖಾತೆ ಒನ್ ಸ್ಟಾಪ್ ಸೊಲ್ಯೂಶನ್ ಆಗಿದೆ. ಸರ್ಕಾರಿ ಭದ್ರತೆಗಳಲ್ಲಿ ಜನಸಾಮಾನ್ಯರ ಹೂಡಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ವರ್ಷದ ಫೆಬ್ರುವರಿಯಲ್ಲಿ ಈ ಖಾತೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯಡಿಯಲ್ಲಿ, ಚಿಲ್ಲರೆ ಹೂಡಿಕೆದಾರರು ಇದೀಗ ಆರ್‌ಬಿಐನ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಚಿಲ್ಲರೆ ನೇರ ಗಿಲ್ಟ್ ಅಕೌಂಟ್ ತೆರೆಯಬಹುದು ಮತ್ತು ನಿರ್ವಹಿಸಬಹುದು. ಇದಕ್ಕಾಗಿ ಡೆಡಿಕೇಟೆಡ್  ಆನ್‌ಲೈನ್ ಪೋರ್ಟಲ್ ಮೂಲಕ ಈ ಸೌಲಭ್ಯವು ಉಚಿತವಾಗಿ ಲಭ್ಯವಿರುತ್ತದೆ. ಆದರೆ, ಹೂಡಿಕೆದಾರರು ಪೇಮೆಂಟ್ ಗೇಟ್ ವೆ ಮೂಲಕ ಶುಲ್ಕ ಪಾವತಿಸಬೇಕಾಗಲಿದೆ.

ಇದನ್ನೂ ಓದಿ-Business Idea: ಕೇವಲ ಒಂದು ಲಕ್ಷ ರೂ.ಗಳಲ್ಲಿ ಈ ಸೂಪರ್ ಹಿಟ್ ಬಿಸಿನೆಸ್ ಆರಂಭಿಸಿ, ತಿಂಗಳಿಗೆ 8 ಲಕ್ಷ ರೂ ಗಳಿಕೆ ಮಾಡಿ

ಈ ಖಾತೆಯನ್ನು ಜಂಟಿಯಾಗಿ ಕೂಡ ತೆರೆಯಬಹುದು
ಈ ಕುರಿತು RBI ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ನೊಂದಾಯಿತ ಹೂಡಿಕೆದಾರರು ಪ್ರಾಥಮಿಕವಾಗಿ ಜಾರಿಯಾಗಿರುವ ಸರ್ಕಾರಿ ಸಿಕ್ಯೂರಿಟಿಗಳಿಗಾಗಿ ಆನ್ಲೈನ್ ಪೋರ್ಟಲ್ ಬಳಕೆ ಮಾಡಬಹುದು. ಇದಲ್ಲದೆ ಅವರು NDS-OM  ಬಳಕೆ ಕೂಡ ಮಾಡಬಹುದು. NDS-OM, RBI ಸ್ಕ್ರೀನ್ ಬೇಸ್ಡ್ ಹಾಗೂ ಗೌಪ್ಯ ಇಲೆಕ್ಟ್ರಾನಿಕ್ ಮ್ಯಾಚಿಂಗ್ ವ್ಯವಸ್ಥೆಯಾಗಿದೆ ಮತ್ತು ಇದು ಸೆಕೆಂಡರಿ ಮಾರ್ಕೆಟ್ ನಲ್ಲಿ ಸರ್ಕಾರಿ ಸೆಕ್ಯೋರೀಟಿಗಳ (Government Securities) ವ್ಯವಹಾರ ನಿರ್ವಹಿಸುತ್ತದೆ. RBI ಒದಗಿಸಿರುವ ಈ ಸೌಲಭ್ಯದಿಂದ ಚಿಲ್ಲರೆ ಹೂಡಿಕೆದಾರರ ಸರ್ಕಾರಿ ಭದ್ರತೆಗಳಲ್ಲಿ ಪಾಲುದಾರಿಕೆ ಹೆಚ್ಚಾಗಲಿದೆ.

ಇದನ್ನೂ ಓದಿ-Flipkart Back to College Sale: 20 ಸಾವಿರಕ್ಕೂ ಕಡಿಮೆ ಬೆಲೆಗೆ ಮಕ್ಕಳಿಗಾಗಿ ಖರೀದಿಸಿ ಈ HP ಲ್ಯಾಪ್ ಟಾಪ್

RDG ಖಾತೆಯನ್ನು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ತೆರೆಯಬಹುದಾಗಿದೆ ಎಂದು ಆರ್.ಬಿ.ಐ ಹೇಳಿದೆ. ಇತರೆ ಹೂಡಿಕೆದಾರರ ಜೊತೆಗೂ ಕೂಡ ಈ ಖಾತೆಯನ್ನು ತೆರೆಯಬಹುದು. ಆನ್ಲೈನ್ ಪೋರ್ಟಲ್ ನೊಂದಾಯಿತ ಬಳಕೆದಾರರ ಸರ್ಕಾರಿ ಭದ್ರತೆಗಳ ಪ್ರೈಮರಿ ಇಶ್ಯೂಯೆನ್ಸ್ ವರೆಗಿನ ತಲುಪು ಹಾಗೂ NDS-OM ತಲುಪು ಇದರಿಂದ ಸುನಿಶ್ಚಿತಗೊಳ್ಳಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News