Customer Centric Initiatives Of RBI: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಭಾರತೀಯ ರಿಸರ್ವ್ ಬ್ಯಾಂಕ್ ನ (RBI) ಎರಡು ನಾವಿನ್ಯ ಗ್ರಾಹಕ-ಕೇಂದ್ರಿತ ಉಪಕ್ರಮಗಳಾದ ಭಾರತೀಯ ರಿಸರ್ವ್ ಬ್ಯಾಂಕ್‌ನ ಚಿಲ್ಲರೆ ನೇರ ಯೋಜನೆ ಮತ್ತು ರಿಸರ್ವ್ ಬ್ಯಾಂಕ್-ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಪ್ರಾರಂಭಿಸಲಾದ ಎರಡು ಯೋಜನೆಗಳು ದೇಶದಲ್ಲಿ ಹೂಡಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತವೆ ಮತ್ತು ಹೂಡಿಕೆದಾರರಿಗೆ ಬಂಡವಾಳ ಮಾರುಕಟ್ಟೆಯನ್ನು ಪ್ರವೇಶಿಸಲು ಸುಲಭದ ದಾರಿ ಮಾಡಿ ಕೊಡುತ್ತೇವೆ ಮತ್ತು ಸುರಕ್ಷಿತ ಹೂಡಿಕೆಯ ಅನುಭವವನ್ನು ಹೆಚ್ಚುಸುತ್ತವೆ ಎಂದು ಹೇಳಿದ್ದಾರೆ.
With the RBI Retail Direct Scheme, small investors in the country have got a safe medium of investment in government securities. With Reserve Bank- Integrated Ombudsman Scheme, 'One Nation, One Ombudsman System' has taken shape in the banking sector today: PM Modi pic.twitter.com/QFFjsH4TOc
— ANI (@ANI) November 12, 2021
ದೇಶದಲ್ಲಿ ಸುರಕ್ಷಿತ ಹೂಡಿಕೆಗೆ ಉತ್ತಮ ಆಯ್ಕೆಗಳು ಸಿಗುತ್ತಿವೆ - ಪ್ರಧಾನಿ ಮೋದಿ
ಕರೋನವೈರಸ್‌ನ ಈ ಸವಾಲುಗಳ ಅವಧಿಯಲ್ಲಿ, ಹಣಕಾಸು ಸಚಿವಾಲಯ, ಆರ್‌ಬಿಐ ಮತ್ತು ಇತರ ಹಣಕಾಸು ಸಂಸ್ಥೆಗಳು ಶ್ಲಾಘನೀಯ ಕೆಲಸ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಲ್ಲಿಯವರೆಗೆ, ನಮ್ಮ ಮಧ್ಯಮ ವರ್ಗ, ಉದ್ಯೋಗಿಗಳು, ಸಣ್ಣ ವ್ಯಾಪಾರಿಗಳು, ಹಿರಿಯ ನಾಗರಿಕರು ಸರ್ಕಾರಿ ಭದ್ರತಾ ಮಾರುಕಟ್ಟೆಯಲ್ಲಿ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಲು ಬ್ಯಾಂಕ್ ವಿಮೆ ಅಥವಾ ಮ್ಯೂಚುವಲ್ ಫಂಡ್‌ಗಳಂತಹ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಾಗಿತ್ತು. ಆದರೆ ಇದೀಗ ಅವರು ಸುರಕ್ಷಿತ ಹೂಡಿಕೆಯ ಮತ್ತೊಂದು ಉತ್ತಮ ಆಯ್ಕೆಯನ್ನು ಪಡೆಯಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
The two schemes- the RBI Retail Direct Scheme and the Reserve Bank- Integrated Ombudsman Scheme- launched today will expand the scope of investment in the country and make access to capital markets easier and more secure for investors: Prime Minister Narendra Modi pic.twitter.com/ajXfnYDFHV
— ANI (@ANI) November 12, 2021
ವ್ಯವಸ್ಥೆಯ ಮೇಲೆ ಹೂಡಿಕೆದಾರರ ನಂಬಿಕೆ ರಂತರ ಹೆಚ್ಚಾಗುತ್ತಿದೆ - ಪ್ರಧಾನಿ ಮೋದಿ (PM Narendra Modi)
“ಕಳೆದ ಏಳು ವರ್ಷಗಳಲ್ಲಿ, NPAಗಳನ್ನು ಪಾರದರ್ಶಕ ರೂಪದಲ್ಲಿ ಗುರುತಿಸಲಾಗಿದೆ, ರೆಸಲ್ಯೂಶನ್ ಮತ್ತು ರಿಕವರಿಯ ಮೇಲೆ ಗಮನ ಕೇಂದ್ರೀಕರಿಸಲಾಗಿದೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮರುಬಂಡವಾಳೀಕರಣಗೊಂಡಿವೆ, ಹಣಕಾಸು ವ್ಯವಸ್ಥೆ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಒಂದರ ಮೇಲೊಂದರಂತೆ ಸುಧಾರಣೆಗೊಂಡಿವೆ. ಬ್ಯಾಂಕಿಂಗ್ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಸಹಕಾರಿ ಬ್ಯಾಂಕ್‌ಗಳನ್ನೂ ಆರ್‌ಬಿಐ (Reserve Bank Of India) ವ್ಯಾಪ್ತಿಗೆ ತರಲಾಯಿತು. ಇದರಿಂದಾಗಿ ಈ ಬ್ಯಾಂಕ್‌ಗಳ ಆಡಳಿತವೂ ಸುಧಾರಿಸುತ್ತಿದೆ ಮತ್ತು ಲಕ್ಷಗಟ್ಟಲೆ ಠೇವಣಿದಾರರಲ್ಲಿ ಈ ವ್ಯವಸ್ಥೆಯ ಮೇಲಿನ ನಂಬಿಕೆ ಬಲಗೊಳ್ಳುತ್ತಿದೆ" ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಚಿಲ್ಲರೆ ನೇರ ಯೋಜನೆ
RBIನ ರಿಟೇಲ್ ಡೈರೆಕ್ಟ್ ಸ್ಕೀಮ್ (RBI Retail Direct Scheme) ಸರ್ಕಾರಿ ಸೆಕ್ಯುರಿಟೀಸ್ ಮಾರುಕಟ್ಟೆಗೆ ಚಿಲ್ಲರೆ ಹೂಡಿಕೆದಾರರ ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ತನ್ಮೂಲಕ ಚಿಲ್ಲರೆ ಹೂಡಿಕೆದಾರರಿಗೆ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡುವ ಭದ್ರತೆಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ದಾರಿ ತೆರೆದಂತಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಉಲ್ಲೇಖಿಸಿದ ಆನ್‌ಲೈನ್ ಸರ್ಕಾರಿ ಭದ್ರತೆ ಖಾತೆಗಳನ್ನು ಹೂಡಿಕೆದಾರರು ಸುಲಭವಾಗಿ ತೆರೆಯಬಹುದು ಮತ್ತು ಆ ಭದ್ರತೆಗಳನ್ನು ನಿರ್ವಹಿಸಬಹುದು. ಈ ಸೇವೆ ಉಚಿತವಾಗಿರಲಿದೆ.
ಏಕೀಕೃತ ಲೋಕಪಾಲ ಯೋಜನೆ
ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಸ್ಕೀಮ್‌ನ (RBI Integrated Ombudsman Scheme) ಉದ್ದೇಶವು ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವುದಾಗಿದೆ, ಇದರಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸಂಸ್ಥೆಗಳ ವಿರುದ್ಧ ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ನಿಯಮಗಳನ್ನು ಮಾಡಬಹುದು. ಈ ಯೋಜನೆಯ ಕೇಂದ್ರ ವಿಷಯವು 'ಒಂದು ರಾಷ್ಟ್ರ-ಒಂದು ಲೋಕಪಾಲ್' ಪರಿಕಲ್ಪನೆಯನ್ನು ಆಧರಿಸಿದೆ. ಇದರ ಅಡಿಯಲ್ಲಿ ಗ್ರಾಹಕರು ತಮ್ಮ ದೂರುಗಳನ್ನು ಸಲ್ಲಿಸಲು ಪೋರ್ಟಲ್, ಇ-ಮೇಲ್ ಮತ್ತು ವಿಳಾಸ ಇರುತ್ತದೆ. ಗ್ರಾಹಕರು ತಮ್ಮ ದೂರುಗಳನ್ನು ಸಲ್ಲಿಸಬಹುದು, ದಾಖಲೆಗಳನ್ನು ಸಲ್ಲಿಸಬಹುದು, ತಮ್ಮ ದೂರುಗಳು/ದಾಖಲೆಗಳ ಸ್ಥಿತಿಯನ್ನು ಪರಿಶೀಲಿಸಬಹುದು ಮತ್ತು ಒಂದೇ ಸ್ಥಳದಲ್ಲಿ ಪ್ರತಿಕ್ರಿಯೆಯನ್ನು ಪಡೆಯಬಹುದು ಅಥವಾ ನೀಡಬಹುದು. ಬಹುಭಾಷಾ ಟೋಲ್-ಫ್ರೀ ಸಂಖ್ಯೆಯನ್ನು ಸಹ ಒದಗಿಸಲಾಗುವುದು, ಇದು ದೂರುಗಳ ಪರಿಹಾರ ಮತ್ತು ದೂರುಗಳನ್ನು ಸಲ್ಲಿಸುವ ಬಗ್ಗೆ ಎಲ್ಲಾ ಅಗತ್ಯ ಮಾಹಿತಿಯನ್ನು ಒದಗಿಸಲಿದೆ.
ಇದನ್ನೂ ಓದಿ-Airbag in Two Wheelers: ಈಗ ದ್ವಿಚಕ್ರ ವಾಹನಗಳಲ್ಲೂ ಏರ್‌ಬ್ಯಾಗ್‌ನ ವೈಶಿಷ್ಟ್ಯ ಲಭ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ