SBI Alert: QR ಕೋಡ್ ಸ್ಕ್ಯಾನ್ ಮಾಡುವುದರಿಂದ ಖಾತೆ ಖಾಲಿಯಾದೀತು ಎಚ್ಚರ!

SBI Alert: ನೀವು ಯಾವುದೇ ವ್ಯಕ್ತಿಯಿಂದ ಯಾವುದೇ ಕ್ಯೂಆರ್ ಕೋಡ್ ಪಡೆದರೆ, ಅದನ್ನು ಅಪ್ಪಿ ತಪ್ಪಿಯೂ ಸಹ ಸ್ಕ್ಯಾನ್ ಮಾಡಬೇಡಿ ಎಂದು ಬ್ಯಾಂಕ್ ಹೇಳಿದೆ. ಹಾಗೆ ಮಾಡುವುದರಿಂದ ನಿಮ್ಮ ಖಾತೆಯಿಂದ ಹಣ ಕಣ್ಮರೆಯಾಗಬಹುದು. ಎಸ್‌ಬಿಐ ತನ್ನ ಗ್ರಾಹಕರನ್ನು ಎಚ್ಚರಿಸುವ ಸಂದರ್ಭದಲ್ಲಿ ಕೆಲವು ಸುರಕ್ಷತಾ ಸಲಹೆಗಳನ್ನು ನೀಡಿದೆ.

Written by - Yashaswini V | Last Updated : Feb 21, 2022, 12:15 PM IST
  • ಕೋಟ್ಯಂತರ ಗ್ರಾಹಕರಿಗೆ ಎಸ್‌ಬಿಐ ಹೈ ಅಲರ್ಟ್ ನೀಡಿದೆ
  • ಹಣವನ್ನು ಸ್ವೀಕರಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ
  • ಕ್ಷಣಾರ್ಧದಲ್ಲಿ ನೀವು ಬಡವರಾಗುತ್ತೀರಿ
SBI Alert: QR ಕೋಡ್ ಸ್ಕ್ಯಾನ್ ಮಾಡುವುದರಿಂದ ಖಾತೆ ಖಾಲಿಯಾದೀತು ಎಚ್ಚರ!  title=
SBI Alert on QR Code Fraud

SBI Alert:  ದೇಶದಲ್ಲಿ ಡಿಜಿಟಲೀಕರಣದೊಂದಿಗೆ, ಆನ್‌ಲೈನ್ ವಂಚನೆ ಮತ್ತು ಸೈಬರ್ ಅಪರಾಧ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ನಮಗೆಈ ಅನುಕ್ರಮದಲ್ಲಿ ಕೆಲವೇ ವರ್ಷಗಳಲ್ಲಿ ಮೊಬೈಲ್ ನ ಕ್ಯೂಆರ್ ಕೋಡ್ ನಿಂದ ವಂಚನೆ ಪ್ರಕರಣಗಳೂ ಬೆಳಕಿಗೆ ಬಂದಿವೆ. ಹೆಚ್ಚುತ್ತಿರುವ QR ಕೋಡ್ ವಂಚನೆಯ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು, ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ 44 ಕೋಟಿ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ನೀವು ಯಾವುದೇ ವ್ಯಕ್ತಿಯಿಂದ ಯಾವುದೇ ಕ್ಯೂಆರ್ ಕೋಡ್ ಪಡೆದರೆ, ಅದನ್ನು ಮರೆತೂ ಸಹ ಸ್ಕ್ಯಾನ್ ಮಾಡಬೇಡಿ ಎಂದು ಬ್ಯಾಂಕ್ ಹೇಳಿದೆ. ಹೀಗೆ ಮಾಡುವುದರಿಂದ ನೀವು ಒಂದು ಹಂತದಲ್ಲಿ ಬಡವರಾಗಬಹುದು ಮತ್ತು ನಿಮ್ಮ ಖಾತೆಯಿಂದ ಹಣ ಪೂರ್ತಿಯಾಗಿ ಖಾಲಿ ಆಗಬಹುದು ಎಂದು ಬ್ಯಾಂಕ್ ಎಚ್ಚರಿಸಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಎಸ್‌ಬಿಐ (SBI) ತನ್ನ ಕೋಟ್ಯಂತರ ಗ್ರಾಹಕರನ್ನು ಟ್ವೀಟ್ ಮೂಲಕ ಎಚ್ಚರಿಸಿದೆ. ಬ್ಯಾಂಕ್ ತನ್ನ ಟ್ವೀಟ್‌ನಲ್ಲಿ, 'ಹಣವನ್ನು ಸ್ವೀಕರಿಸಲು ನೀವು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಅಗತ್ಯವಿಲ್ಲ. ನೀವು ಪ್ರತಿ ಬಾರಿ UPI ಪಾವತಿಗಳನ್ನು ಮಾಡುವಾಗ ಸುರಕ್ಷತಾ ಸಲಹೆಗಳನ್ನು ನೆನಪಿಡಿ' ಎಂದು ಸಲಹೆ ನೀಡಿದೆ.

ಇದನ್ನೂ ಓದಿ- PM Kisan ಯೋಜನೆಯ ₹4000 ಬಂದಿಲ್ಲವೆ? ಹಾಗಿದ್ರೆ, ಈ ಕೆಲಸ ಮಾಡಿ, ಖಂಡಿತಾ ಹಣ ಬರುತ್ತೆ!

QR ಕೋಡ್ ವಂಚನೆ ಹೇಗೆ?
ಕ್ಯೂಆರ್ ಕೋಡ್ (QR Code) ಅನ್ನು ಯಾವಾಗಲೂ ಪಾವತಿ ಮಾಡಲು ಬಳಸಲಾಗುತ್ತದೆ, ಪಾವತಿಗಳನ್ನು ತೆಗೆದುಕೊಳ್ಳಲು ಅಲ್ಲ ಎಂದು ಎಸ್‌ಬಿಐ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಪಾವತಿಯನ್ನು ಸ್ವೀಕರಿಸುವ ಹೆಸರಿನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ನಿಮಗೆ ಸಂದೇಶ ಅಥವಾ ಮೇಲ್ ಬಂದರೆ, ಆಪ್ಪಿತಪ್ಪಿಯೂ ಸ್ಕ್ಯಾನ್ ಮಾಡಬೇಡಿ. ಇದು ನಿಮ್ಮ ಖಾತೆಯನ್ನು ಖಾಲಿ ಮಾಡಬಹುದು. ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ನಿಮಗೆ ಹಣ ಸಿಗುವುದಿಲ್ಲ ಎಂದು ಬ್ಯಾಂಕ್ ಹೇಳಿದೆ, ಆದರೆ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆದಿರುವ ಸಂದೇಶ ಬರುತ್ತದೆ.

ಇದನ್ನೂ ಓದಿ- Affordable Bikes: ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಈ 4 ಬೈಕ್‌ಗಳು ನೀಡುತ್ತೆ ಅಧಿಕ ಮೈಲೇಜ್!

ಈ ಸುರಕ್ಷತಾ ಸಲಹೆಗಳನ್ನು ಅನುಸರಿಸಿ :
>> ಆನ್ಲೈನ್ ಪಾವತಿ ವೇಳೆ ನೀವು ಅರ್ಥಮಾಡಿಕೊಳ್ಳಬೇಕಾದ ಕೆಲವು ಸುರಕ್ಷತಾ ಸಲಹೆಗಳ ಬಗ್ಗೆಯೂ ಬ್ಯಾಂಕ್ ಮಾಹಿತಿ ನೀಡಿದೆ. ಈ ಬಗ್ಗೆ ನಿರ್ಲಕ್ಷ ವಹಿಸಿದರೆ ನಿಮ್ಮ ಖಾತೆ ಖಾಲಿಯಾಗಬಹುದು.
>> ಯಾವುದೇ ಪಾವತಿ ಮಾಡುವ ಮೊದಲು UPI ಐಡಿಯನ್ನು ಪರಿಶೀಲಿಸಿ. 
>> UPI ಪಾವತಿಗಳನ್ನು ಮಾಡುವಾಗ ಕೆಲವು ಭದ್ರತಾ ನಿಯಮಗಳನ್ನು ಅನುಸರಿಸಬೇಕು.
>> UPI ಪಿನ್ ಹಣ ವರ್ಗಾವಣೆಗೆ ಮಾತ್ರ ಅಗತ್ಯವಿದೆಯೇ ಹೊರತು ಹಣವನ್ನು ಸ್ವೀಕರಿಸಲು ಅಲ್ಲ.
>> ಹಣವನ್ನು ಕಳುಹಿಸುವ ಮೊದಲು ಯಾವಾಗಲೂ ಮೊಬೈಲ್ ಸಂಖ್ಯೆ, ಹೆಸರು ಮತ್ತು UPI ಐಡಿಯನ್ನು ಪರಿಶೀಲಿಸಿ.
>> UPI ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
>> ಹಣ ವರ್ಗಾವಣೆಗಾಗಿ ಸ್ಕ್ಯಾನರ್ ಅನ್ನು ಸರಿಯಾಗಿ ಬಳಸಿ.
>> ಯಾವುದೇ ಸಂದರ್ಭದಲ್ಲಿ, ಅಧಿಕೃತ ಮೂಲಗಳನ್ನು ಹೊರತುಪಡಿಸಿ ಪರಿಹಾರಗಳನ್ನು ಹುಡುಕಬೇಡಿ.
>> ಯಾವುದೇ ಪಾವತಿ ಅಥವಾ ತಾಂತ್ರಿಕ ಸಮಸ್ಯೆಗಳಿಗೆ ಅಪ್ಲಿಕೇಶನ್‌ನ ಸಹಾಯ ವಿಭಾಗವನ್ನು ಬಳಸಿ.
>> ವಹಿವಾಟಿನ ಕುರಿತಂತೆ ಯಾವುದೇ ವ್ಯತ್ಯಾಸಗಳಿದ್ದಲ್ಲಿ, ಬ್ಯಾಂಕಿನ ಕುಂದುಕೊರತೆ ಪರಿಹಾರ ಪೋರ್ಟಲ್ https://crcf.sbi.co.in/ccf/ ಮೂಲಕ ಪರಿಹಾರವನ್ನು ಪಡೆದುಕೊಳ್ಳಿ . 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News