Digital Payments ಅನ್ನು ಮತ್ತಷ್ಟ್ರು ಸುಲಭವಾಗಿಸಲು SBIನ ಮತ್ತೊಂದು ಮಹತ್ವದ ಹೆಜ್ಜೆ

SBI Payments: ಈ ಕುರಿತು ಪ್ರಕಟಿಸಿರುವ ಬ್ಯಾಂಕ್ ಇದು ಈಶಾನ್ಯ ನಗರಗಳು ಸೇರಿದಂತೆ ಟಿಯರ್ 3 ಮತ್ತು ಟಿಯರ್ 4 ನಗರಗಳಲ್ಲಿನ ಡಿಜಿಟಲ್ ಪಾವತಿಗಳ ಮೂಲ ಸೌಕರ್ಯವನ್ನು ವಿಸ್ತರಿಸಲು ಇದು ಅನುವು ಮಾಡಿಕೊಡಲಿದೆ ಎಂದಿದೆ.

Written by - Nitin Tabib | Last Updated : Feb 21, 2021, 12:31 PM IST
  • ಡಿಜಿಟಲ್ ಹಣ ಪಾವತಿ ವ್ಯವಸ್ಥೆಯನ್ನು ಬಲಪಡಿಸಲು SBI ಮತ್ತೊಂದು ಹೆಜ್ಜೆ
  • SBI Paymentsನಿಂದ Yono Merchant App ಪರಿಚಯ.
  • ಈಶಾನ್ಯ ನಗರಗಳು ಸೇರಿದಂತೆ ಟಿಯರ್ 3 ಮತ್ತು ಟಿಯರ್ 4 ನಗರಗಳಲ್ಲಿ ಮೂಲಸೌಕರ್ಯ ವಿಸ್ತರಣೆಗೆ ಇದರಿಂದ ಅನುವು.
Digital Payments ಅನ್ನು ಮತ್ತಷ್ಟ್ರು ಸುಲಭವಾಗಿಸಲು SBIನ ಮತ್ತೊಂದು ಮಹತ್ವದ ಹೆಜ್ಜೆ  title=
SBI Payments (File Photo)

ನವದೆಹಲಿ: SBI Payments - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಂಗಸಂಸ್ಥೆ SBI (State Bank Of India) Payments ವ್ಯಾಪಾರಿಗಳಿಗೆ ಕಡಿಮೆ ವೆಚ್ಚದ ಡಿಜಿಟಲ್ ಪಾವತಿ ಮೂಲಸೌಕರ್ಯ ಒದಗಿಸಲು ಯೋನೊ ಮರ್ಚೆಂಟ್ ಆ್ಯಪ್ ಅನ್ನು ಪರಿಚಯಿಸಲಿದೆ. ಬ್ಯಾಂಕ್  ಶನಿವಾರ ಈ ಕುರಿತು ಮಾಹಿತಿ ನೀಡಿದೆ. PTI ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ, ಯೊನೊ ಮರ್ಚೆಂಟ್ ಆ್ಯಪ್ ದೇಶದ ವ್ಯಾಪಾರಿಗಳ ಡಿಜಿಟಲೀಕರಣವನ್ನು ಉತ್ತೇಜಿಸುತ್ತದೆ ಎಂದು ಎಸ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ದೇಶದ ಲಕ್ಷಾಂತರ ವ್ಯಾಪಾರಿಗಳು ಮೊಬೈಲ್ ಆಧಾರಿತ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಅರ್ಹರನ್ನಾಗಿ ಮಾಡಲು ಕಡಿಮೆ ವೆಚ್ಚದ  ಸಂರಚನೆಯನ್ನು ಪುನಃಸ್ಥಾಪಿಸುವುದು ಎಸ್‌ಬಿಐನ ಯೋಜನೆಯಾಗಿದೆ ಎಂದು ಬ್ಯಾಂಕ್ ಹೇಳಿದೆ. ಇದರ ಅಡಿಯಲ್ಲಿ, ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ ಎರಡು ಕೋಟಿ ಸಂಭಾವ್ಯ ಗ್ರಾಹಕರನ್ನು ಚಿಲ್ಲರೆ ವ್ಯಾಪಾರಕ್ಕೆ ಜೋಡಿಸುವುದಾಗಿದೆ ಎಂದು ಬ್ಯಾಂಕ್ ಹೇಳಿದೆ.

ಈ ನಗರಗಳಲ್ಲಿ ಡಿಜಿಟಲ್ ಹಣ ಪಾವತಿ ಸುಲಭವಾಗಲಿದೆ (Digital payment will be easier in such cities)
ವರದಿಗಳ ಪ್ರಕಾರ ಈಶಾನ್ಯ ನಗರಗಳು ಸೇರಿದಂತೆ ಟಿಯರ್ 3 ಮತ್ತು 4 ನಗರಗಳಲ್ಲಿ ಡಿಜಿಟಲ್ ಹಣ ಪಾವತಿಯ ಮೂಲಸೌಕರ್ಯವನ್ನು ವಿಸ್ತರಿಸಲು ಇದು ಅನುವು ಮಾಡಿಕೊಡಲಿದೆ ಎಂದು ಬ್ಯಾಂಕ್ ಹೇಳಿದೆ. ಈಗಾಗಲೇ ದೇಶದ ಡಿಜಿಟಲ್ ಹಣ ಪಾವತಿ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ರಕ್ಷಿಸಲು Reserve Bank Of India (RBI) ಅಧಿಸೂಚನೆ ಹೊರಡಿಸಿದೆ. ದೇಶಾದ್ಯಂತ ಇರುವ ವಿವಿಧ ಬ್ಯಾಂಕ್ ಗಳು ಹಾಗೂ ಕಾರ್ಡ್ ನೀಡುವ ಕಂಪನಿಗಳಿಗೆ ಈ ಅಧಿಸೂಚನೆ ಜಾರಿಮಾಡಿದೆ.

ಇದನ್ನೂ ಓದಿ-SBI Alert : ಇದು ಭಾರೀ `ಮೋಸದ ಜಾಲ', ಬಿಟ್ಟು ಬಿಡಿ ದುರಾಸೆಯ ಫಟಾಫಟ್ ಸಾಲ..!

ಈ ಸೇವೆಯ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದ RBI  (RBI issued instructions regarding service)
RBI ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಪೇಮೆಂಟ್, ಕಾರ್ಡ್ ಪೇಮೆಂಟ್, ಗ್ರಾಹಕರ ರಕ್ಷಣೆ ಹಾಗೂ ದೂರುಗಳ ಇತ್ಯರ್ಥಗೊಳಿಸುವ ನಿರ್ದೇಶನಗಳು ಶಾಮೀಲಾಗಿವೆ. ಈ ಮಾರ್ಗಸೂಚಿಗಳು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಗಳು, ಸಣ್ಣ ಫೈನಾನ್ಸ್ ಬ್ಯಾಂಕ್ ಗಳು, ಪೇಮೆಂಟ್ ಬ್ಯಾಂಕ್ ಹಾಗೂ ಕ್ರೆಡಿಟ್ ಕಾರ್ಡ್ ಜಾರಿಗೊಳಿಸುವ NBFC ಕಂಪನಿಗಳಿಗೆ ಅನ್ವಯಿಸಲಿವೆ.

ಇದನ್ನೂ ಓದಿ- Bank privatization : 4 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣ : ಶೀಘ್ರವೇ ಫೋಷಣೆ ಸಾಧ್ಯತೆ

ಆರು ತಿಂಗಳ ಅವಧಿ (Six months is the time)
ಇನ್ಮುಂದೆ ಡಿಜಿಟಲ್ ವ್ಯವಹಾರಕ್ಕಾಗಿ ಥರ್ಡ್ ಪಾರ್ಟಿ ಆಪ್ ಗಳ ಬಳಕೆ ಮಾಡುವ ಬ್ಯಾಂಕ್ ಗಳ ಎಸ್ಕ್ರೋನಲ್ಲಿ ಸೋರ್ಸ್ ಕೋಡ್ ಅಳವಡಿಕೆ ಕೂಡ ಅನಿವಾರ್ಯವಾಗಲಿದೆ. ಆಪ್ ವ್ಯವಹಾರಕ್ಕಾಗಿ ಸೇಫ್ ಆಗಿರಲಿದೆ ಎಂಬುದು ಇದರ ಹಿಂದಿನ ತರ್ಕವಾಗಿದೆ. ಈ ಎಲ್ಲಾ ನಿಯಮಗಳನ್ನು ಜಾರಿಗೆ ತರಲು RBI 6 ತಿಂಗಳ ಕಾಲಾವಕಾಶ ನೀಡಿದೆ.

ಇದನ್ನೂ ಓದಿ-Good Return : ಎಸ್ ಬಿಐ ಅನ್ವುಟಿ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ, ಪಡೆಯಿರಿ ಅಧಿಕ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News