Sovereign Gold Bond scheme: ಅಗ್ಗದ ದರದಲ್ಲಿ ಚಿನ್ನ ಖರೀದಿಗೆ ಮತ್ತೊಂದು ಅವಕಾಶ, ಇಲ್ಲಿದೆ ಮಾಹಿತಿ

ಭಾರತೀಯ ರಿಸರ್ವ್ ಬ್ಯಾಂಕ್ ಸಾವೆರಿನ್ ಗೋಲ್ಡ್ ಬಾಂಡ್ ಸ್ಕೀಮ್(Sovereign Gold Bond Scheme)ನ 7ನೇ ಕಂತನ್ನು ಅಕ್ಟೋಬರ್ 25 ರಿಂದ ಆರಂಭಿಸಲು ಸಜ್ಜಾಗಿದೆ.

Written by - Puttaraj K Alur | Last Updated : Oct 24, 2021, 08:40 AM IST
  • ಅಗ್ಗದ ದರದಲ್ಲಿ ಚಿನ್ನದಲ್ಲಿ ಹೂಡಿಕೆಗೆ ಜನಸಾಮಾನ್ಯರಿಗೆ ಮತ್ತೊಂದು ಅವಕಾಶ ಬಂದಿದೆ
  • ಅ.27ರಿಂದ ಸಾವೆರಿನ್ ಗೋಲ್ಡ್ ಬಾಂಡ್ ಸ್ಕೀಮ್ 7ನೇ ಕಂತು ಆರಂಭಿಸಲು ಆರ್‌ಬಿಐ ನಿರ್ಧಾರ
  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಗೋಲ್ಡ್ ಬಾಂಡ್ ವಿತರಣೆಯ ಬೆಲೆಯಲ್ಲಿ 50 ರೂ. ರಿಯಾಯತಿ
Sovereign Gold Bond scheme: ಅಗ್ಗದ ದರದಲ್ಲಿ ಚಿನ್ನ ಖರೀದಿಗೆ ಮತ್ತೊಂದು ಅವಕಾಶ, ಇಲ್ಲಿದೆ ಮಾಹಿತಿ title=
ಸಾವೆರಿನ್ ಗೋಲ್ಡ್ ಬಾಂಡ್ ಸ್ಕೀಮ್ 7ನೇ ಕಂತು

ನವದೆಹಲಿ: ಅಗ್ಗದ ದರದ ಚಿನ್ನದಲ್ಲಿ ಹೂಡಿಕೆ ಮಾಡಲು ಜನಸಾಮಾನ್ಯರಿಗೆ ಮತ್ತೊಂದು ಸುವರ್ಣಾವಕಾಶ ಲಭಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸಾವೆರಿನ್ ಗೋಲ್ಡ್ ಬಾಂಡ್ ಸ್ಕೀಮ್(Sovereign Gold Bond Scheme)ನ 7ನೇ ಕಂತನ್ನು ಅಕ್ಟೋಬರ್ 25 ರಿಂದ ಆರಂಭಿಸಲು ಸಜ್ಜಾಗಿದೆ. ಈ ಮಾರಾಟ ಪ್ರಕ್ರಿಯೆಯು ಅ.29 ರವರೆಗೆ ಇರಲಿದ್ದು, ಸೆಟಲ್ಮೆಂಟ್ ದಿನಾಂಕವನ್ನು ನ.2ಕ್ಕೆ ನಿಗದಿಪಡಿಸಲಾಗಿದೆ.

ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ 2021-22ನೇ ಸಾಲಿನ 7ನೇ ಸಾವೆರಿನ್ ಗೋಲ್ಡ್ ಬಾಂಡ್ ಸ್ಕೀಮ್ ನಲ್ಲಿ ಆರ್‌ಬಿಐ( Reserve Bank of India) ಪ್ರತಿ ಗ್ರಾಂ ಚಿನ್ನಕ್ಕೆ 4,765 ರೂ. ನಿಗದಿಪಡಿಸಿದೆ. ‘ಭಾರತೀಯ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್‌ನೊಂದಿಗೆ ಸಮಾಲೋಚಿಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ವಿತರಿಸುವ ಬೆಲೆಯಲ್ಲಿ ಪ್ರತಿ ಗ್ರಾಂಗೆ 50 ರೂ.ಗಳ ರಿಯಾಯಿತಿಯನ್ನು ನೀಡಲು ನಿರ್ಧರಿಸಿದೆ ಮತ್ತು ಪಾವತಿಯನ್ನು ಡಿಜಿಟಲ್ ಮೋಡ್ ಮೂಲಕ ಮಾಡಲಾಗುತ್ತದೆ’ ಎಂದು ಸಚಿವಾಲಯವು ಮಾಹಿತಿ ನೀಡಿದೆ.

ಇದನ್ನೂ ಓದಿ: ಬೆಂಕಿಪೊಟ್ಟಣ ದರವೂ ದುಬಾರಿ!: 14 ವರ್ಷಗಳ ನಂತರ ಬೆಂಕಿಪೊಟ್ಟಣ ದರ 2 ರೂ.ಗೆ ಏರಿಕೆ

ಈ ಬಾಂಡ್ ಗಾಗಿ ಒಂದು ವೇಳೆ ಯಾರಾದರೂ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ ಅಂತಹ ಹೂಡಿಕೆದಾರರಿಗೆ ಗೋಲ್ಡ್ ಬಾಂಡ್( Gold Bonds) ವಿತರಣೆಯ ಬೆಲೆಯಲ್ಲಿ 50 ರೂ. ಡಿಸ್ಕೌಂಟ್ ಸಿಗಲಿದ್ದು, ಪ್ರತಿ ಗ್ರಾಂ ಚಿನ್ನಕ್ಕೆ 4,715 ರೂ. ಪಾವತಿಸಬೇಕಾಗುತ್ತದೆ ಎಂದು ಸಚಿವಾಲಯವು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಸಾವೆರಿನ್ ಗೋಲ್ಡ್ ಬಾಂಡ್‌ಗಳು(Sovereign Gold Bonds) ಅಥವಾ ಎಸ್‌ಜಿಬಿಗಳು ಸರ್ಕಾರಿ ಭದ್ರತೆಗಳಾಗಿವೆ. ಅನೇಕ ಹೂಡಿಕೆದಾರರು ಭೌತಿಕ ಚಿನ್ನವನ್ನು ಖರೀದಿಸುವ ಬದಲು ಈ ರೀತಿ ಬಾಂಡ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದರಿಂದ ಅವರು ತೆರಿಗೆ ಪ್ರಯೋಜನಗಳಂತಹ ಇನ್ನೂ ಅನೇಕ ಪ್ರಯೋಜನಗಳ ಲಾಭವನ್ನು ಪಡೆದುಕೊಳ್ಳುತ್ತಾರೆ. ಇದಲ್ಲದೆ ಸಾವರಿನ್ ಗೋಲ್ಡ್ ಬಾಂಡ್‌ಗಳಲ್ಲಿನ ಹೂಡಿಕೆಗಳು ಸುರಕ್ಷಿತವಾಗಿರುತ್ತವೆ ಏಕೆಂದರೆ ಅವು ಭಾರತೀಯ ಸರ್ಕಾರದಿಂದ ಬೆಂಬಲಿತವಾಗಿದೆ

ಇದನ್ನೂ ಓದಿ: Arecanut Price: ಕರ್ನಾಟಕದ ಮಾರುಕಟ್ಟೆಯಲ್ಲಿ ಅಡಿಕೆಗೆ ಸಿಗುತ್ತಿದೆ ಬಂಪರ್ ಬೆಲೆ

ಈ ಯೋಜನೆಯಡಿಯಲ್ಲಿ ಹೂಡಿಕೆದಾರರು ಇಶ್ಯೂ ಬೆಲೆಯನ್ನು ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ ಮತ್ತು ಬಾಂಡ್‌ಗಳನ್ನು ಮೆಚ್ಯೂರಿಟಿಯಲ್ಲಿ ನಗದು ರೂಪದಲ್ಲಿ ರಿಡೀಮ್ ಮಾಡಲಾಗುತ್ತದೆ. ಬಾಂಡ್ ಅನ್ನು ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ನೀಡಿದೆ. ಈ ಯೋಜನೆಯಡಿ ಒಬ್ಬ ವ್ಯಕ್ತಿಯು ಗರಿಷ್ಠ 4 ಕೆಜಿ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು. ಇದೇ ವೇಳೆ ಕನಿಷ್ಠ 1 ಗ್ರಾಂ ಹೂಡಿಕೆ ಮಾಡುವುದು ಅನಿವಾರ್ಯವಾಗಿದೆ. ಉದಾಹರಣೆಗೆ ಬಾಂಡ್ 5 ಗ್ರಾಂ ಚಿನ್ನವಾಗಿದ್ದರೆ, 5 ಗ್ರಾಂ ಚಿನ್ನದ (Sovereign Gold) ಬೆಲೆಯೇ ಬಾಂಡ್ ಗೆ ಇರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News