ಬೆಂಕಿಪೊಟ್ಟಣ ದರವೂ ದುಬಾರಿ!: 14 ವರ್ಷಗಳ ನಂತರ ಬೆಂಕಿಪೊಟ್ಟಣ ದರ 2 ರೂ.ಗೆ ಏರಿಕೆ

ಡಿ.1 ರಿಂದ ಜಾರಿಗೆ ಬರುವಂತೆ ಒಂದು ಬೆಂಕಿ ಪೊಟ್ಟಣದ ದರ 2 ರೂ.ಗೆ ಏರಿಕೆಯಾಗಲಿದೆ. ತಮಿಳುನಾಡಿನ ಶಿವಕಾಶಿಯಲ್ಲಿರುವ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ​

Written by - Puttaraj K Alur | Last Updated : Oct 24, 2021, 07:58 AM IST
  • ಬರೋಬ್ಬರಿ 14 ವರ್ಷಗಳ ಬಳಿಕ ಬೆಂಕಿಪೊಟ್ಟಣದ ಬೆಲೆಯನ್ನು ಏರಿಸಲು ನಿರ್ಧಾರ
  • ಕಚ್ಚಾ ವಸ್ತುಗಳ ಬೆಲೆ ಏರಿಕೆ ಪರಿಣಾಮ ಡಿ.1 ರಿಂದ ಬೆಂಕಿಪೆಟ್ಟಿಗೆ ದರ 2 ರೂ. ಆಗಲಿದೆ
  • 50 ಪೈಸೆ ಇದ್ದ ಬೆಂಕಿಪೊಟ್ಟಣದ ಬೆಲೆಯನ್ನು 2007ರಲ್ಲಿ 1 ರೂ.ಗೆ ಏರಿಕೆ ಮಾಡಲಾಗಿತ್ತು
ಬೆಂಕಿಪೊಟ್ಟಣ ದರವೂ ದುಬಾರಿ!: 14 ವರ್ಷಗಳ ನಂತರ ಬೆಂಕಿಪೊಟ್ಟಣ ದರ 2 ರೂ.ಗೆ ಏರಿಕೆ title=
ಬೆಂಕಿಪೊಟ್ಟಣದ ಬೆಲೆ ಏರಿಸಲು ನಿರ್ಧಾರ

ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರದ ಪರಿಣಾಮ ಕಚ್ಚಾ ವಸ್ತುಗಳ ಬೆಲೆಯಲ್ಲಿ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಸೇರಿ ಅಗತ್ಯ ವಸ್ತುಗಳು ಗಗನಮುಖಿಯಾಗಿವೆ. ಈ ಮಧ್ಯೆ ಬರೋಬ್ಬರಿ 14 ವರ್ಷಗಳ ನಂತರ ಬೆಂಕಿಪೊಟ್ಟಣದ ದರ(Matchbox Prices)ವನ್ನು ಕೂಡ ಹೆಚ್ಚಳ ಮಾಡಲಾಗುತ್ತಿದೆ.

ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ಒಂದು ಬೆಂಕಿ ಪೊಟ್ಟಣ(Matchbox)ದ ದರ 2 ರೂ.ಗೆ ಏರಿಕೆಯಾಗಲಿದೆ. ಪ್ರಸ್ತುತ 1 ರೂ. ಇರುವ ಮ್ಯಾಚ್‌ಬಾಕ್ಸ್ ಗಳ ಚಿಲ್ಲರೆ ಬೆಲೆಯನ್ನು ದ್ವಿಗುಣಗೊಳಿಸಲು ಅಂದರೆ 2 ರೂ.ಗೆ ಏರಿಕೆ ಮಾಡಲಾಗುತ್ತಿದೆ. ಬರೋಬ್ಬರಿ 14 ವರ್ಷದ ನಂತರ ಬೆಂಕಿಪೊಟ್ಟಣ ದರವನ್ನು ಏರಿಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಒಂದು ವೇಳೆ ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಸಕ್ಕರೆ ಪುಡಿಯಾಗುತ್ತದೆ: ಮಹಾರಾಷ್ಟ್ರ ಸಚಿವ

2007ರಲ್ಲಿ ಬೆಂಕಿ ಪೊಟ್ಟಣದ ದರವನ್ನು 50 ಪೈಸೆಗಳಿಂದ 1 ರೂ.ಗೆ ಕೊನೆಯದಾಗಿ ಹೆಚ್ಚಿಸಲಾಗಿತ್ತು. ಇದೀಗ 2 ರೂ.ಗೆ ಹೆಚ್ಚಿಸಲು ಮ್ಯಾಚ್‌ಬಾಕ್ಸ್ ತಯಾರಿಕಾ ಕಂಪನಿಗಳು ಒಟ್ಟಾಗಿ ನಿರ್ಣಯಿಸಿವೆ. ಬೆಲೆ ಏರಿಕೆಯ ಹೊಡೆತವೇ ಇದಕ್ಕೆ ಕಾರಣ. ತೈಲ ದರ ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ಕಚ್ಚಾವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಹೀಗಾಗಿ ನಾವು ಅನಿರ್ವಾಯವಾಗಿ ಬೆಂಕಿಪೊಟ್ಟಣದ ಬೆಲೆಯನ್ನು ಏರಿಸಬೇಕಾಗಿದೆ ಎಂದು ಮ್ಯಾಚ್‌ಬಾಕ್ಸ್ ತಯಾರಿಕಾ ಕಂಪನಿಗಳ ಮಾಲೀಕರು ತಿಳಿಸಿದ್ದಾರೆ.   

ತಮಿಳುನಾಡಿನ ಶಿವಕಾಶಿಯಲ್ಲಿರುವ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್(All India Chamber of Matches) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ‘50 ಪೈಸೆ ಇದ್ದ ಬೆಂಕಿಪೊಟ್ಟಣದ ಬೆಲೆಯನ್ನು 2007 ರಲ್ಲಿ 1 ರೂ.ಗೆ ಏರಿಕೆ ಮಾಡಲಾಗಿತ್ತು. ಬರೋಬ್ಬರಿ 14 ವರ್ಷಗಳ ಬಳಿಕ ನಾವು ಬೆಂಕಿಪೊಟ್ಟಣದ ಬೆಲೆಯನ್ನು 2 ರೂ.ಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ತೀವ್ರಗತಿಯಲ್ಲಿ ಏರುತ್ತಿರುವ ಹಣದುಬ್ಬರವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಸಮಿತಿಯ ಸದಸ್ಯರು ಹೇಳಿದ್ದಾರೆ.  

ಬೆಂಕಿಪೆಟ್ಟಿಗೆ ತಯಾರಕರ ಪ್ರಕಾರ, ಮ್ಯಾಚ್‌ಬಾಕ್ಸ್(Matchstick) ತಯಾರಿಸಲು 14 ವಿವಿಧ ರೀತಿಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಕಳೆದ 14 ವರ್ಷಗಳಲ್ಲಿ ಇಂತಹ ಅನೇಕ ವಸ್ತುಗಳ ಬೆಲೆಗಳು ದ್ವಿಗುಣಗೊಂಡಿವೆ. ಇದು ಮ್ಯಾಚ್‌ಬಾಕ್ಸ್ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಲೆಹೆಂಗಾಗಳಲ್ಲಿ ಅಡಗಿಸಿದ್ದ 3 ಕಿಲೋ ಸಿಂಥೆಟಿಕ್ ಔಷಧಿ ಎನ್ಸಿಬಿ ವಶಕ್ಕೆ , 6 ಜನರ ಬಂಧನ

ಉದಾಹರಣೆಗೆ ರೆಡ್ ಫಾಸ್ಪರಸ್ ಬೆಲೆ 425 ರಿಂದ 810 ರೂ.ಗೆ, ಮೇಣದ ದರಗಳು 58 ರಿಂದ 80 ರೂ.ಗೆ ಏರಿಕೆಯಾಗಿದೆ. ಹೊರ ಬಾಕ್ಸ್ ಬೋರ್ಡ್(Outer Box Board)ಬೆಲೆ 36 ರಿಂದ 55 ರೂ.ಗೆ ಹಾಗೂ ಒಳ ಬಾಕ್ಸ್ ಬೋರ್ಡ್(Inner Box Board) 32 ರಿಂದ 58 ರೂ.ಗೆ ಏರಿಕೆಯಾಗಿದೆ. ಕಾಗದ, ಸ್ಪ್ಲಿಂಟ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಗಂಧಕದಂತಹ ಇತರ ವಸ್ತುಗಳ ಬೆಲೆಯು ಬೆಂಕಿ ಪೊಟ್ಟಣ ತಯಾರಿಸಲು ಅಗತ್ಯವಾಗಿದೆ. ಇವುಗಳ ಬೆಲೆಗಳು ಕೂಡ 2021ರ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಾಗಿವೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News