SBI New Timing: ಎಸ್‌ಬಿಐ ಬ್ಯಾಂಕ್ Open/Close ಸಮಯ ಬದಲಾವಣೆ, ಬ್ಯಾಂಕ್‌ಗೆ ತೆರಳುವ ಮುನ್ನ ಪರಿಶೀಲಿಸಿ

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘವು ನೀಡಿದ ಹೇಳಿಕೆಯಲ್ಲಿ, ಬ್ಯಾಂಕ್ ಗ್ರಾಹಕರು ಬಹಳ ಮುಖ್ಯವಾದ ಕೆಲಸಗಳಿಗಾಗಿ ಮಾತ್ರ ಶಾಖೆಗೆ ಭೇಟಿ ನೀಡಬೇಕು ಎಂದು ಮನವಿ ಮಾಡಲಾಗಿದೆ. 

Written by - Yashaswini V | Last Updated : May 19, 2021, 07:41 AM IST
  • ಬ್ಯಾಂಕ್ ತೆರೆಯುವ ಸಮಯ ಬದಲಾಗಿದೆ
  • ಅಗತ್ಯವಿದ್ದರಷ್ಟೇ ಬ್ಯಾಂಕ್‌ಗೆ ಹೋಗಿ
  • ಎಸ್‌ಬಿಐ ನೀಡಿರುವ ಮಾಹಿತಿಯ ಪ್ರಕಾರ ಪ್ರಸ್ತುತ ಸನ್ನಿವೇಶದಲ್ಲಿ ಬ್ಯಾಂಕಿನಲ್ಲಿ ಕೇವಲ 4 ಕೆಲಸಗಳು ಮಾತ್ರ ನಡೆಯಲಿದೆ
SBI New Timing: ಎಸ್‌ಬಿಐ ಬ್ಯಾಂಕ್ Open/Close ಸಮಯ ಬದಲಾವಣೆ, ಬ್ಯಾಂಕ್‌ಗೆ ತೆರಳುವ ಮುನ್ನ ಪರಿಶೀಲಿಸಿ title=
State Bank Of India New Timing

ನವದೆಹಲಿ: SBI new timing- ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಗ್ರಾಹಕರು ಮತ್ತು ಉದ್ಯೋಗಿಗಳನ್ನು ಕರೋನಾವೈರಸ್ ಸೋಂಕಿನಿಂದ ರಕ್ಷಿಸಲು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಕರೋನಾ ಸನ್ನಿವೇಶದ ಹಿನ್ನಲೆಯಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆಯುವ ಮತ್ತು ಮುಚ್ಚುವ ಸಮಯವನ್ನೂ ಬ್ಯಾಂಕ್ ಬದಲಾಯಿಸಿದೆ. ಇದಲ್ಲದೆ,  ಈಗ ಕೆಲವು ಪ್ರಮುಖವಾದ ಕೆಲಸಗಳಿಗಷ್ಟೇ ಬ್ಯಾಂಕ್‌ಗೆ ಭೇಟೆ ನೀಡಬಹುದಾಗಿದೆ.

ಅಗತ್ಯವಿದ್ದರಷ್ಟೇ ಬ್ಯಾಂಕ್‌ಗೆ ಹೋಗಿ  (Go only when necessary work):
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘವು ನೀಡಿದ ಹೇಳಿಕೆಯಲ್ಲಿ, ಬ್ಯಾಂಕ್ ಗ್ರಾಹಕರು ಬಹಳ ಮುಖ್ಯವಾದ ಕೆಲಸಗಳಿಗಾಗಿ ಮಾತ್ರ ಶಾಖೆಗೆ ಭೇಟಿ ನೀಡಬೇಕು ಎಂದು ಹೇಳಲಾಗಿದೆ. ಬಹಳ ಮುಖ್ಯವಾಗಿ ಮೇ 31ರವರೆಗೆ ಬ್ಯಾಂಕ್ ಕೆಲಸದ ಅವಧಿಯಲ್ಲಿ (Bank Working Hours) ಬದಲಾವಣೆ ಮಾಡಲಾಗಿದ್ದು ಬೆಳಿಗ್ಗೆ 10 ರಿಂದ ಬೆಳಿಗ್ಗೆ 1 ರವರೆಗೆ ಮಾತ್ರ ಬ್ಯಾಂಕ್ ಕಾರ್ಯ ನಿರ್ವಹಿಸಲಿದ್ದು ಬ್ಯಾಂಕ್ ಶಾಖೆಗಳನ್ನು ಮಧ್ಯಾಹ್ನ 2 ರೊಳಗೆ ಮುಚ್ಚಲಾಗುವುದು ಎಂದು ಹೇಳಲಾಗಿದೆ.

ಬ್ಯಾಂಕ್ ತೆರೆಯುವ ಸಮಯ ಬದಲಾಗಿದೆ (Bank opening hours changed) :
ಎಸ್‌ಬಿಐ (SBI) ಶಾಖೆ ಈಗ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ತೆರೆಯಲಿದೆ. ಇದರೊಂದಿಗೆ ಹೊಸ ಅಧಿಸೂಚನೆಯಲ್ಲಿ, ಶೇಕಡಾ 50 ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಿಸಿರುವ ಬ್ಯಾಂಕಿನ ಆಡಳಿತ ಕಚೇರಿಗಳು ಹಿಂದಿನಂತೆ ಬ್ಯಾಂಕಿಂಗ್ ಸಮಯದಾದ್ಯಂತ ಕಾರ್ಯನಿರ್ವಹಿಸುತ್ತಿವೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಇದನ್ನೂ ಓದಿ- SBI ಗ್ರಾಹಕರಿಗೊಂದು ಪ್ರಮುಖ ಸುದ್ದಿ; ಆನ್ ಲೈನ್ ನಲ್ಲಿಯೇ ಬದಲಾಯಿಸಿಕೊಳ್ಳಬಹುದು branch

ಮಾಸ್ಕ್ ಇಲ್ಲದೆ ಪ್ರವೇಶವಿಲ್ಲ (No entery without a mask) :
ಬ್ಯಾಂಕ್ ಶಾಖೆಗೆ ಹೋಗುವ ಗ್ರಾಹಕರು ತಪ್ಪದೇ ಮಾಸ್ಕ್ ಧರಿಸಿರಬೇಕು. ಇಲ್ಲದಿದ್ದರೆ ಅವರಿಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಅಷ್ಟೇ ಅಲ್ಲ, ಈಗ ಎಸ್‌ಬಿಐ ಟ್ವಿಟರ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಬ್ಯಾಂಕಿನಲ್ಲಿ ಕೇವಲ 4 ಕೆಲಸಗಳು ಮಾತ್ರ ನಡೆಯಲಿದೆ.

(1) ನಗದು ಠೇವಣಿ ಮತ್ತು ವಾಪಸಾತಿ

(2) ಚೆಕ್‌ಗೆ ಸಂಬಂಧಿಸಿದ ಕೆಲಸವನ್ನು ಪರಿಶೀಲಿಸುವುದು

(3) ಡಿಡಿಯೊಂದಿಗೆ ಸಂಪರ್ಕ ಹೊಂದಿದ ಕೆಲಸ ಅಂದರೆ ಡಿಮ್ಯಾಂಡ್ ಡ್ರಾಫ್ಟ್ / ಆರ್ಟಿಜಿಎಸ್ / ನೆಫ್ಟ್

(4) ಸರ್ಕಾರಿ ಚಲನ್

ಇದನ್ನೂ ಓದಿ- SBI ಕಾಂಟಾಕ್ಟ್ ಲೆಸ್ ಸೇವೆ ಆರಂಭ, ಕೇವಲ ಒಂದು ಕರೆಯಿಂದ ಸಾಧ್ಯವಾಗುತ್ತೆ ಈ ಕೆಲಸ

ಬ್ಯಾಂಕಿನ ಫೋನ್ ಸೇವೆಯನ್ನು ಬಳಸಿ (Use bank's phone service) :
ಎಸ್‌ಬಿಐ ಗ್ರಾಹಕರು ಫೋನ್ ಬ್ಯಾಂಕಿಂಗ್ ಸೇವೆಯ ಲಾಭವನ್ನು ಪಡೆಯಬಹುದು. ಎಸ್‌ಬಿಐ ಫೋನ್ ಬ್ಯಾಂಕಿಂಗ್‌ಗಾಗಿ, ಮೊದಲು ನೋಂದಣಿ ಮಾಡಬೇಕಾಗಿದೆ. ಇದರ ನಂತರ ಪಾಸ್‌ವರ್ಡ್ ರಚಿಸಬೇಕಾದರೆ, ಗ್ರಾಹಕರು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಫೋನ್‌ನಲ್ಲಿ ಸಂಪರ್ಕ ಕೇಂದ್ರದ ಮೂಲಕ ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News