Share Market Closing: ಹೂಡಿಕೆದಾರರ ಭಾರಿ ಮಾರಾಟ ಪ್ರಕ್ರಿಯೆಯ ಹಿನ್ನೆಲೆ ಗೋತಾ ಹೊಡೆದ ಷೇರುಪೇಟೆ

Stock Market Closing: ಸೆನ್ಸೆಕ್ಸ್ ಸೂಚ್ಯಂಕ 953 ಅಂಕಗಳ ನಷ್ಟ ಅನುಭವಿಸಿ 57,145 ಅಂಕಗಳಿಗೆ ಮುಕ್ತಾಯಗೊಂಡರೆ, ರಾಷ್ಟ್ರೀಯ ಷೇರು ಸೂಚ್ಯಂಕ ಕೂಡ 311 ಅಂಕಗಳ ನಷ್ಟದೊಂದಿಗೆ 17,016 ಅಂಕಗಳಿಗೆ ಬಂದು ನಿಂತಿದೆ. 

Written by - Nitin Tabib | Last Updated : Sep 26, 2022, 04:05 PM IST
  • ಡಾಲರ್ ಎದುರು ರೂಪಾಯಿ ಮೌಲ್ಯದ ದುರ್ಬಲತೆ ಹಾಗೂ
  • ಆರ್ ಬಿಐ ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಹಾಗೂ ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ
  • ಭಾರತೀಯ ಷೇರುಪೇಟೆ ವಾರದ ಮೊದಲ ದಿನ 1000 ಪಾಯಿಂಟ್ ಗಳ ಹತ್ತಿರಕ್ಕೆ ಕುಸಿದಿದೆ.
Share Market Closing: ಹೂಡಿಕೆದಾರರ ಭಾರಿ ಮಾರಾಟ ಪ್ರಕ್ರಿಯೆಯ ಹಿನ್ನೆಲೆ ಗೋತಾ ಹೊಡೆದ ಷೇರುಪೇಟೆ title=
Stock Market Updates

Stock Market Closing On 26th September 2022: ವಾರದ ಮೊದಲ ವಹಿವಾಟಿನ ದಿನವಾದ ಇಂದು ಭಾರತೀಯ ಷೇರುಪೇಟೆ ಹೂಡಿಕೆದಾರರ ಪಾಲಿಗೆ ಭಾರಿ ನಿರಾಶೆ ತಂದಿದೆ. ವಿದೇಶಿ ಹೂಡಿಕೆದಾರರು ತೀವ್ರ ಮಾರಾಟದಲ್ಲಿ ತೊಡಗಿರುವ ಕಾರಣ. ಮಾರುಕಟ್ಟೆ ನೇರವಾಗಿ ಗೋತಾ ಹೊಡೆದಿದೆ. ಇಂದು ದಿನದಾಂತ್ಯಕ್ಕೆ ಮುಂಬೈ ಷೇರು ಪೇಟೆಯ ಸೂಚ್ಯಂಕ 953 ಅಂಕಗಳ ನಷ್ಟದೊಂದಿಗೆ 57,145ಕ್ಕೆ ತನ್ನ ವಹಿವಾಟನ್ನು ಮುಕ್ತಾಯಗೊಳಿಸಿದರೆ, ರಾಷ್ಟ್ರೀಯ ಷೇರು ಪೇಟೆಯ ಸೂಚ್ಯಂಕ 311 ಅಂಕಗಳ ನಷ್ಟ ಅನುಭವಿಸಿ 17,016 ಅಂಕಗಳಿಗೆ ತನ್ನ ವಹಿವಾಟನ್ನು ನಿಲ್ಲಿಸಿದೆ.

ಇದನ್ನೂ ಓದಿ-Car Buying Tips: ಕಾರು ಖರೀದಿಸಲು ಇದು ಸರಿಯಾದ ಸಮಯವೇ? ಇಲ್ಲಿದೆ ಮಾಹಿತಿ

ಡಾಲರ್ ಎದುರು ರೂಪಾಯಿ ಮೌಲ್ಯದ ದುರ್ಬಲತೆ ಹಾಗೂ ಆರ್ ಬಿಐ ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಹಾಗೂ ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಭಾರತೀಯ ಷೇರುಪೇಟೆ ವಾರದ ಮೊದಲ ದಿನ 1000 ಪಾಯಿಂಟ್ ಗಳ ಹತ್ತಿರಕ್ಕೆ ಕುಸಿದಿದೆ. ಮಾರುಕಟ್ಟೆಯು 1,000 ಪಾಯಿಂಟ್‌ಗಳ ಕುಸಿತವನ್ನು ವಿಶ್ಲೇಷಿಸುವುದಾದರೆ, ಇದು ಸತತ ಎರಡನೇ ವಹಿವಾಟಿನ ಅವಧಿಯಾಗಿದೆ. ಶುಕ್ರವಾರ ಸೆಪ್ಟೆಂಬರ್ 23 ರಂದು, ಸೆನ್ಸೆಕ್ಸ್ 1,000 ಅಂಕಗಳಿಗಿಂತ ಹೆಚ್ಚು ಕುಸಿತ ಕಂಡಿತ್ತು. ಐಟಿ ಹೊರತುಪಡಿಸಿ ಉಳಿದೆಲ್ಲ ವಲಯದ ಷೇರುಗಳು ಮಾರುಕಟ್ಟೆಯಲ್ಲಿ ಕುಸಿತ ಕಂಡಿವೆ. 

ಇದನ್ನೂ ಓದಿ-Ration Card: ಉಚಿತ ಪಡಿತರ ಪ್ರಯೋಜನಗಳನ್ನು ಪಡೆಯಲು ಈ ಹೊಸ ನಿಯಮಗಳನ್ನು ತಪ್ಪದೇ ತಿಳಿಯಿರಿ

ಬ್ಯಾಂಕ್ ನಿಫ್ಟಿ 930 ಅಂಕಗಳ ಕುಸಿತದೊಂದಿಗೆ ತನ್ನ ವಹಿವಾಟನ್ನು ನಿಲ್ಲಿಸಿದೆ. ವಾಹನ, ಇಂಧನ, ಲೋಹ, ಫಾರ್ಮಾ, ಎಫ್‌ಎಂಸಿಜಿ ವಲಯದ ಷೇರುಗಳು ಲಾಭದ ಬುಕಿಂಗ್ ನಡೆಸಿವೆ. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಷೇರುಗಳು ಸಹ ಈ ಕುಸಿತದಿಂದ ಹೊರತಾಗಿ ಉಳಿದಿಲ್ಲ. ನಿಫ್ಟಿಯ 50 ಷೇರುಗಳ ಪೈಕಿ ಕೇವಲ 7 ಶೇರುಗಳು ಮಾತ್ರ ಹಸಿರು ನಿಶಾನೆಯಲ್ಲಿ ತನ್ನ ವಹಿವಾಟನ್ನು ಅಂತ್ಯಗೊಳಿಸಿವೆ, ಆದರೆ, ಉಳಿದ 43 ಷೇರುಗಳು ಕುಸಿತ ಅನುಭವಿಸಿವೆ, ಸೆನ್ಸೆಕ್ಸ್‌ನ 30 ಷೇರುಗಳಲ್ಲಿ 7 ಷೇರುಗಳು ಮಾತ್ರ ಹಸಿರು ನಿಶಾನೆಯಲ್ಲಿ ಮುಕ್ತಾಯ ಕಂಡಿವೆ, ಉಳಿದ 23 ಷೇರುಗಳು ಕೆಂಪು ನಿಶಾನೆಯಲ್ಲಿ ಮುಕ್ತಾಯ ಕಂಡಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News