Cheque Bounce: ಚೆಕ್ ಬೌನ್ಸ್ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Cheque Bounce Cases: ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಸುಪ್ರೀಂ ಕೋರ್ಟ್, ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.

Written by - Yashaswini V | Last Updated : Mar 11, 2021, 01:01 PM IST
  • ದೇಶಾದ್ಯಂತ ಬಾಕಿ ಉಳಿದಿರುವ 35 ಲಕ್ಷ ಚೆಕ್ ಬೌನ್ಸ್ ಪ್ರಕರಣಗಳು
  • ತ್ವರಿತ ವಿಚಾರಣೆ ಬಗ್ಗೆ 3 ತಿಂಗಳೊಳಗೆ ವರದಿ ಸಲ್ಲಿಸಲಿರುವ ನೂತನ‌ ಸಮಿತಿ
  • ಪ್ರತ್ಯೇಕ ನ್ಯಾಯಾಲಯ ರಚೆನೆಗೆ ಒಪ್ಪಿಗೆ ಸೂಚಿಸಿರುವ ಕೇಂದ್ರ ಸರ್ಕಾರ
Cheque Bounce: ಚೆಕ್ ಬೌನ್ಸ್ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು title=
Supreme court's big decision on Cheque Bounce

ನವದೆಹಲಿ : Cheque Bounce Cases: ದಿನೇ ದಿನೇ ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯಕ್ಕೂ (Supream Court) ತಲೆನೋವಾಗಿ ಪರಿಣಮಿಸಿವೆ. ಈ ಹಿನ್ನಲೆಯಲ್ಲಿ ಚೆಕ್ ಬೌನ್ಸ್  ಪ್ರಕರಣಗಳನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಸುಪ್ರೀಂ ಕೋರ್ಟ್, ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ. 

ಈ ಸಮಿತಿಯು ದೇಶಾದ್ಯಂತ ಚೆಕ್ ಬೌನ್ಸ್ (Cheque Bounce) ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಬಗ್ಗೆ ಮೂರು ತಿಂಗಳೊಳಗೆ ಸಲಹೆ ಮತ್ತು ವರದಿಯನ್ನು ಸಲ್ಲಿಸಲಿದೆ. ಇದರ ವರದಿಯನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. 

ಪ್ರತ್ಯೇಕ ನ್ಯಾಯಾಲಯ ರಚನೆಗೆ ಕೇಂದ್ರದ ಸಿದ್ಧತೆ:
35 ಲಕ್ಷ ಚೆಕ್ ಬೌನ್ಸ್ ಪ್ರಕರಣಗಳು ಬಾಕಿ ಉಳಿದಿರುವುದನ್ನು ಸುಪ್ರೀಂ ಕೋರ್ಟ್ (Supreme Court) ಕಳೆದ ವಾರ 'ವಿಲಕ್ಷಣ' ಎಂದು ಬಣ್ಣಿಸಿತ್ತು. ಅಂತಹ ಪ್ರಕರಣಗಳನ್ನು ಸಮಯಕ್ಕೆ ತಕ್ಕಂತೆ ನಿಭಾಯಿಸಲು ಪ್ರತ್ಯೇಕ ನ್ಯಾಯಾಲಯವನ್ನು ಸ್ಥಾಪಿಸಲು ಕಾನೂನು ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Tushar Mehta) ಚೆಕ್ ಬೌನ್ಸ್ ಪ್ರಕರಣಗಳಿಗೆ ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬಾಬ್ಡೆ (Justice S.A. Bobde) ನೇತೃತ್ವದ ಐವರು ನ್ಯಾಯಾಧೀಶರ ಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ - "ಸರ್ಕಾರಕ್ಕಿಂತ ವಿಭಿನ್ನವಾದ ನಿಲುವು ತಾಳುವುದು ದೇಶದ್ರೋಹವಾಗುವುದಿಲ್ಲ"

ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್, ಬಿ.ಆರ್. ಗವಾಯಿ, ಎ.ಎಸ್.‌ ಬೋಪಣ್ಣ ಮತ್ತು ಎ.ಎಸ್. ರವೀಂದ್ರ ಭಟ್, ಈ ಕುರಿತು ಅನೇಕ ಪಾಲುದಾರರಿಂದ ಸಲಹೆಗಳು ಬಂದಿವೆ ಎಂದು ಹೇಳಿದರು. ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಪಡೆದ ಎಲ್ಲಾ ಸಲಹೆಗಳು ಬಹಳ ಉಪಯುಕ್ತ ಮತ್ತು ರಚನಾತ್ಮಕವಾಗಿವೆ. ಇವುಗಳನ್ನು ಎಚ್ಚರಿಕೆಯಿಂದ ಕಾರ್ಯಗತಗೊಳಿಸಬೇಕಾಗಿದೆ. ಸುಧಾರಣಾ ಪ್ರಕ್ರಿಯೆಗಳು ಶುರುವಾಗಬೇಕಿದೆ ಮತ್ತು ತಿದ್ದುಪಡಿಗಳು ಆಗಬೇಕಿದೆ ಎಂದರು‌.

ಈ ವಿಷಯದಲ್ಲಿ ನಾವು ನಿವೃತ್ತ ನ್ಯಾಯಮೂರ್ತಿ ಆರ್.ಸಿ. ಚೌಹಾಣ್ (R.C. Chowhan) ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸುತ್ತಿದ್ದೇವೆ ಎಂದು ನ್ಯಾಯಪೀಠ ಹೇಳಿದೆ. ಹಣಕಾಸು ಸೇವೆಗಳ ಇಲಾಖೆ, ನ್ಯಾಯಾಂಗ ಇಲಾಖೆ, ಕಾರ್ಪೊರೇಟ್ ವ್ಯವಹಾರಗಳ ಇಲಾಖೆ, ಖರ್ಚು ಇಲಾಖೆ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿರುತ್ತಾರೆ.

ಇದನ್ನೂ ಓದಿ - Exclusive: ಚೆಕ್ ಬೌನ್ಸ್ ನಿಯಮಗಳಲ್ಲಿ ಬದಲಾವಣೆಗೆ ಮುಂದಾದ ಕೇಂದ್ರ, ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿ

ಇದಲ್ಲದೆ, ಇನ್ನೊಬ್ಬ ಸದಸ್ಯರು ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ (Governor of Reserve Bank) ಅವರಿಂದ ನಾಮನಿರ್ದೇಶನಗೊಳ್ಳುತ್ತಾರೆ. ಭಾರತೀಯ ಬ್ಯಾಂಕುಗಳ ಸಂಘದ ಅಧ್ಯಕ್ಷರು ನಾಮನಿರ್ದೇಶನ ಮಾಡಿದ ಇನ್ನೊಬ್ಬ ಸದಸ್ಯರೂ ಸಮಿತಿಯಲ್ಲಿರುತ್ತಾರೆ. ಇದಲ್ಲದೆ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ (National Law Service Academy) ಪ್ರತಿನಿಧಿ ಮತ್ತು ಸಾಲಿಸಿಟರ್ ಜನರಲ್ ಅಥವಾ ಅವರ ನಾಮಿನಿ ಸಹ ಇದರಲ್ಲಿ ಭಾಗಿಯಾಗಲಿದ್ದಾರೆ. ಈ ಸಮಿತಿಗೆ ಸರ್ಕಾರದಿಂದ ಕ್ಲೆರಿಕಲ್ ನೆರವು ನೀಡಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News