ಈ ಬ್ಯಾಂಕುಗಳ ಚೆಕ್ ಬುಕ್ ಗಳು ಅಕ್ಟೋಬರ್ ನಿಂದ ಅಮಾನ್ಯ- Check details

ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಅಕ್ಟೋಬರ್ 2021 ರಿಂದ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳ ಚೆಕ್ ಬುಕ್ ಗಳನ್ನು ನಿಲ್ಲಿಸುವುದಾಗಿ ಹೇಳಿದೆ.

Written by - Zee Kannada News Desk | Last Updated : Sep 23, 2021, 08:45 PM IST
  • ಗ್ರಾಹಕರಿಗೆ ಪ್ರಮುಖ ಎಚ್ಚರಿಕೆಯನ್ನು ನೀಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಅಕ್ಟೋಬರ್ 2021 ರಿಂದ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳ ಚೆಕ್ ಬುಕ್ ಗಳನ್ನು ನಿಲ್ಲಿಸುವುದಾಗಿ ಹೇಳಿದೆ.
ಈ ಬ್ಯಾಂಕುಗಳ ಚೆಕ್ ಬುಕ್ ಗಳು ಅಕ್ಟೋಬರ್ ನಿಂದ ಅಮಾನ್ಯ- Check details title=
ಸಾಂದರ್ಭಿಕ ಚಿತ್ರ

ನವದೆಹಲಿ: ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಅಕ್ಟೋಬರ್ 2021 ರಿಂದ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳ ಚೆಕ್ ಬುಕ್ ಗಳನ್ನು ನಿಲ್ಲಿಸುವುದಾಗಿ ಹೇಳಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ತನ್ನ ಅಧಿಸೂಚನೆಯಲ್ಲಿ "eOBC ಮತ್ತು eUNI ಯ ಹಳೆಯ ಚೆಕ್ ಬುಕ್ ಅನ್ನು 1-10-2021 ರಿಂದ ಸ್ಥಗಿತಗೊಳಿಸಲಾಗುವುದು.ದಯವಿಟ್ಟು ನಿಮ್ಮ ಹಳೆಯ ಇ-OBC ಮತ್ತು ಇ-ಯುಎನ್ಐ ಚೆಕ್ ಬುಕ್ ಅನ್ನು ಪಿಎನ್ ಬಿ ಚೆಕ್ ಬುಕ್ ಅನ್ನು NB IFSC ಮತ್ತು MICR ನೊಂದಿಗೆ  ಅಪ್ಡೇಟ್ ಮಾಡಿ" ಎಂದು ತಿಳಿಸಿದೆ.

ಇದನ್ನೂ ಓದಿ- PM Kisan: ಈ ತಪ್ಪುಗಳಾಗಿದ್ದರೆ ನಿಂತು ಬಿಡಬಹುದು 9 ನೇ ಕಂತು, ಈ ರೀತಿ ಸರಿಪಡಿಸಿಕೊಳ್ಳಿ

ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ 1, 2020 ರಂದು PNB ಯೊಂದಿಗೆ ವಿಲೀನಗೊಂಡಿತು.ಪಂಜಾಬ್ ನ್ಯಾಷನಲ್ ಬ್ಯಾಂಕ್  ಖಾತೆದಾರರು ಅಗತ್ಯ ಬದಲಾವಣೆಗಳನ್ನು ಮಾಡುವ ಎರಡು ವಿಧಾನಗಳನ್ನು ಸಲಹೆ ಮಾಡಿದೆ.

1) ತಮ್ಮ ಸ್ಥಳೀಯ PNB ಶಾಖೆಯಿಂದ ಹೊಸ ಚೆಕ್ ಪುಸ್ತಕಗಳನ್ನು ನೀಡಿ.
2) ಎಟಿಎಂ ಮೂಲಕ, ಇಂಟರ್‌ನೆಟ್ ಬ್ಯಾಂಕಿಂಗ್ ಅಥವಾ ಪಿಎನ್‌ಬಿ ಒನ್ ಬಳಸಿ ಅಥವಾ ಗ್ರಾಹಕ ಸೇವೆಯನ್ನು ಸಂಪರ್ಕಿಸುವ ಮೂಲಕ ಹೊಸ ಚೆಕ್ ಪುಸ್ತಕಕ್ಕಾಗಿ ಅರ್ಜಿ ಸಲ್ಲಿಸಿ.

"ನಿಮ್ಮ ಶಾಖೆಯಿಂದ ನಿಮ್ಮ ಹೊಸ ಚೆಕ್ ಪುಸ್ತಕವನ್ನು ಪಡೆದುಕೊಳ್ಳಿ ಅಥವಾ ATM/IBS/PNB ONE ಮೂಲಕ ಅರ್ಜಿ ಸಲ್ಲಿಸಿ.ಎಲ್ಲಾ ಗ್ರಾಹಕರು ಯಾವುದೇ PNB IFSC ಮತ್ತು MICR ಅಪ್‌ಡೇಟ್‌ಗಳೊಂದಿಗೆ ಹೊಸ PNB ಚೆಕ್ ಬುಕ್ ಅನ್ನು ಬಳಸಲು ಈಗಿನಿಂದಲೇ ಯಾವುದೇ ವಹಿವಾಟು ಅನಾನುಕೂಲತೆಯನ್ನು ತಪ್ಪಿಸಲು ವಿನಂತಿಸಲಾಗಿದೆ.ಯಾವುದೇ ಸಹಾಯ ಅಥವಾ ಪ್ರಶ್ನೆಗಾಗಿ ದಯವಿಟ್ಟು ನಮ್ಮ ಟೋಲ್-ಫ್ರೀ ಸಂಖ್ಯೆ 1800-180-2222 ಅನ್ನು ಸಂಪರ್ಕಿಸಿ" ಎಂದು ಟ್ವೀಟ್ ನಲ್ಲಿ ಹೇಳಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ - ಹೆಚ್ಚುವರಿ ಬದಲಾವಣೆಗಳು

PNB ಹಬ್ಬದ ಸಮಯದಲ್ಲಿ ಚಿಲ್ಲರೆ ಉತ್ಪನ್ನಗಳ ಮೇಲಿನ ಎಲ್ಲಾ ಸೇವಾ ಶುಲ್ಕಗಳು ಮತ್ತು ಸಂಸ್ಕರಣಾ ಶುಲ್ಕವನ್ನು ವಜಾಗೊಳಿಸಿದೆ ಮತ್ತು ಗೃಹ ಸಾಲಗಳ ಮೇಲೆ ಶೇ 6.80 ಮತ್ತು ಕಾರ್ ಸಾಲಗಳ ಮೇಲೆ  ಶೇ 7.15 ದಿಂದ ಆರಂಭವಾಗುವ ಬಡ್ಡಿದರವನ್ನು ಸಹ ನೀಡುತ್ತಿದೆ.ಈ ಸೌಲಭ್ಯಗಳು ಮತ್ತು ಕೊಡುಗೆಗಳು ಡಿಸೆಂಬರ್ 31, 2021 ರವರೆಗೆ ಲಭ್ಯವಿರುತ್ತವೆ ಎಂದು PNB ಹೇಳಿದೆ.

ಇದನ್ನೂ ಓದಿ-Gold-Silver Rate : ಮಹಿಳೆಯೆರೆ ಗಮನಿಸಿ : ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ

ಅಕ್ಟೋಬರ್‌ನಲ್ಲಿ ಆಗುವ ಚೆಕ್ ಬುಕ್ ಬದಲಾವಣೆಗಳು - ಅಲಹಾಬಾದ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆಗೆ, ಅಲಹಾಬಾದ್ ಬ್ಯಾಂಕ್ ತನ್ನ ಖಾತೆದಾರರಿಗೆ ಚೆಕ್ ಪುಸ್ತಕಗಳು ಮತ್ತು MICR ಕೋಡ್ ಅನ್ನು ಅಕ್ಟೋಬರ್ ನಿಂದ ಆರಂಭಿಸುವುದಾಗಿ ಹೇಳಿದೆ.ಅಲಹಾಬಾದ್ ಬ್ಯಾಂಕ ತಮ್ಮ ಖಾತೆದಾರರಿಗೆ ತಮ್ಮ ಹತ್ತಿರದ ಸ್ಥಳೀಯ ಶಾಖೆಯ ಮೂಲಕ ಹೊಸ ಚೆಕ್ ಪುಸ್ತಕಗಳನ್ನು ನೀಡುವಂತೆ ಅಥವಾ ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ ಅರ್ಜಿ ಸಲ್ಲಿಸುವಂತೆ ಕೇಳಿಕೊಂಡಿದೆ.

"ಯಾವುದೇ ತೊಂದರೆಯಿಲ್ಲದೆ ಸುಗಮ ಬ್ಯಾಂಕಿಂಗ್ ವಹಿವಾಟುಗಳನ್ನು ಆನಂದಿಸಿ. ಹಿಂದಿನ ಅಲಹಾಬಾದ್ ಬ್ಯಾಂಕಿನ MICR ಕೋಡ್ ಮತ್ತು ಚೆಕ್ ಪುಸ್ತಕಗಳನ್ನು 01.10.2021 ರಿಂದ ಸ್ಥಗಿತಗೊಳಿಸಲಾಗುವುದು. ನಿಮ್ಮ ಹತ್ತಿರದ ಶಾಖೆಯಿಂದ ಹೊಸ ಚೆಕ್ ಪುಸ್ತಕಗಳನ್ನು ಪಡೆಯಿರಿ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ /ಮೊಬೈಲ್ ಬ್ಯಾಂಕಿಂಗ್ ಮೂಲಕ ಅರ್ಜಿ ಸಲ್ಲಿಸಿ" ಎಂದು ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News