New Rules From April 1: ಏಪ್ರಿಲ್ 1 ರಿಂದ ಬದಲಾಗುತ್ತಿವೆ ಈ ನಿಯಮಗಳು, ಗಮನಹರಿಸದೆ ಹೋದರೆ ಹಾನಿ ತಪ್ಪದು!

Income Tax Update: ಆದಾಯ ತೆರಿಗೆ ಕಾನೂನುಗಳಲ್ಲಿ ಹಲವು ಬದಲಾವಣೆಗಳಾಗಿದ್ದು, ಈ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. 1 ಏಪ್ರಿಲ್ 2023 ರಿಂದ ಜಾರಿಗೆ ಬರಲಿರುವ ಕೆಲವು ಪ್ರಮುಖ ಬದಲಾವಣೆಗಳಲ್ಲಿ ತೆರಿಗೆ ವಿನಾಯಿತಿ ಮಿತಿಯಲ್ಲಿನ ಹೆಚ್ಚಳ, ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿನ ಬದಲಾವಣೆ ಮತ್ತು ಕೆಲವು ಡೆಟ್ ಮ್ಯೂಚುಯಲ್ ಫಂಡ್‌ಗಳ ಮೇಲಿನ LTCG ತೆರಿಗೆ ಪ್ರಯೋಜನ ರದ್ದಾಗುವಿಕೆ ಶಾಮೀಲಾಗಿವೆ.  

Written by - Nitin Tabib | Last Updated : Mar 30, 2023, 04:24 PM IST
  • 1 ಏಪ್ರಿಲ್ 2023 ರಿಂದ ಜಾರಿಗೆ ಬರಲಿರುವ ಕೆಲವು ಪ್ರಮುಖ ಬದಲಾವಣೆಗಳಲ್ಲಿ ತೆರಿಗೆ ವಿನಾಯಿತಿ ಮಿತಿಯಲ್ಲಿನ ಹೆಚ್ಚಳ,
  • ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿನ ಬದಲಾವಣೆ ಮತ್ತು ಕೆಲವು ಡೆಟ್ ಮ್ಯೂಚುಯಲ್ ಫಂಡ್‌ಗಳ ಮೇಲಿನ LTCG ತೆರಿಗೆ ಪ್ರಯೋಜನ ರದ್ದಾಗುವಿಕೆಗಳು ಶಾಮೀಲಾಗಿವೆ.
  • ಇದೇ ವೇಳೆ, ಏಪ್ರಿಲ್ 1 ರಿಂದ, ತೆರಿಗೆ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳು ಆಗಲಿವೆ.
New Rules From April 1: ಏಪ್ರಿಲ್ 1 ರಿಂದ ಬದಲಾಗುತ್ತಿವೆ ಈ ನಿಯಮಗಳು, ಗಮನಹರಿಸದೆ ಹೋದರೆ ಹಾನಿ ತಪ್ಪದು! title=
ಏಪ್ರಿಲ್ 1, 2023 ರಿಂದಾಗುವ ಹೊಸ ಬದಲಾವಣೆಗಳು!

Income Tax Update: ಆದಾಯ ತೆರಿಗೆ ಕಾನೂನುಗಳಲ್ಲಿ ಹಲವು ಬದಲಾವಣೆಗಳಾಗಿದ್ದು, ಈ ಹಣಕಾಸು ವರ್ಷದಿಂದ ಅವು ಜಾರಿಗೆ ಬರಲಿವೆ. 1 ಏಪ್ರಿಲ್ 2023 ರಿಂದ ಜಾರಿಗೆ ಬರಲಿರುವ ಕೆಲವು ಪ್ರಮುಖ ಬದಲಾವಣೆಗಳಲ್ಲಿ ತೆರಿಗೆ ವಿನಾಯಿತಿ ಮಿತಿಯಲ್ಲಿನ ಹೆಚ್ಚಳ, ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿನ ಬದಲಾವಣೆ ಮತ್ತು ಕೆಲವು ಡೆಟ್ ಮ್ಯೂಚುಯಲ್ ಫಂಡ್‌ಗಳ ಮೇಲಿನ LTCG ತೆರಿಗೆ ಪ್ರಯೋಜನ ರದ್ದಾಗುವಿಕೆಗಳು ಶಾಮೀಲಾಗಿವೆ. ಇದೇ ವೇಳೆ, ಏಪ್ರಿಲ್ 1 ರಿಂದ, ತೆರಿಗೆ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ಈ ಬದಲಾವಣೆಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ಬನ್ನಿ ತಿಳಿದುಕೊಳ್ಳೋಣ

ಹೊಸ ಆದಾಯ ತೆರಿಗೆ ಪದ್ಧತಿಯು ಡೀಫಾಲ್ಟ್ ವ್ಯವಸ್ಥೆ ಇರಲಿದೆ
ಹೊಸ ಆದಾಯ ತೆರಿಗೆ ಪದ್ಧತಿಯು ಏಪ್ರಿಲ್ 1, 2023 ರಂದು ಪ್ರಾಥಮಿಕ ತೆರಿಗೆ ಪದ್ಧತಿಯಾಗಿ ಕಾರ್ಯನಿರ್ವಹಿಸಲಿದೆ. ಆದರೆ, ಮೌಲ್ಯಮಾಪಕರು ಇನ್ನೂ ಹಳೆ ವ್ಯವಸ್ಥೆ ಬಳಸುವ ಆಯ್ಕೆಯನ್ನು ಹೊಂದಿರುತ್ತಾರೆ.

ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷಕ್ಕೆ ಹೆಚ್ಚಿಸಲಾಗಿದೆ
ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸುವುದು ಎಂದರೆ 7 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳು ವಿನಾಯಿತಿ ಪಡೆಯಲು ಯಾವುದೇ ಹೂಡಿಕೆ ಮಾಡಬೇಕಾಗಿಲ್ಲ. ಎಷ್ಟೇ ಹೂಡಿಕೆ ಮಾಡಿದರೂ ಅಂತಹವರ ಆದಾಯ ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ.

LTA
ಸರ್ಕಾರೇತರ ಉದ್ಯೋಗಿಗಳಿಗೆ ನಿರ್ದಿಷ್ಟ ಮೊತ್ತದವರೆಗೆ ಲೀವ್ ಎನ್‌ಕ್ಯಾಶ್‌ಮೆಂಟ್ ಅವಶ್ಯಕತೆಯಿಂದ ವಿನಾಯಿತಿ ನೀಡಲಾಗುತ್ತದೆ. ಈ ಮಿತಿ ಈಗ 25 ಲಕ್ಷ ರೂ.ಗಳಾಗಿರಲಿದೆ.

ಮಾರುಕಟ್ಟೆ ಸಂಬಂಧಿತ ಡಿಬೆಂಚರ್‌ಗಳು (MLD)
ಏಪ್ರಿಲ್ 1 ರ ನಂತರ ಮಾರ್ಕೆಟ್ ಲಿಂಕ್ಡ್ ಡಿಬೆಂಚರ್‌ಗಳಲ್ಲಿ (ಎಂಎಲ್‌ಡಿ) ಹೂಡಿಕೆಗಳನ್ನು ಅಲ್ಪಾವಧಿಯ ಹಣಕಾಸು ಆಸ್ತಿಗಳಾಗಿ ಪರಿಗಣಿಸಲಾಗುತ್ತದೆ. ಇದರೊಂದಿಗೆ ಹಿಂದಿನ ಹೂಡಿಕೆಗಳ ಗ್ರ್ಯಾಂಡ್ ಫಾದರಿಂಗ್ ಮುಕ್ತಾಯಗೊಳ್ಳಲಿದೆ, ಇದು ಮ್ಯೂಚುವಲ್ ಫಂಡ್ ವಲಯದ ಮೇಲೆ ಸ್ವಲ್ಪ ಋಣಾತ್ಮಕ ಪರಿಣಾಮ ಬೀರುತ್ತದೆ.

ಜೀವ ವಿಮಾ ಪಾಲಿಸಿ
1 ಏಪ್ರಿಲ್ 2023 ರಿಂದ ಜಾರಿಗೆ ಬರುವಂತೆ, ವಾರ್ಷಿಕವಾಗಿ 5 ಲಕ್ಷ ರೂ. ಜೀವ ವಿಮಾ ಪ್ರಿಮಿಯಮ್ ತೆರಿಗೆ ವ್ಯಾಪ್ತಿಗೆ ಒಳಪಡಲಿದೆ. 2023 ರ ಬಜೆಟ್ ಮಂಡನೆಯ ವೇಳೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯುಲಿಪ್ ((ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್) ಹೊಸ ಆದಾಯ ತೆರಿಗೆ ನಿಯಂತ್ರಣಕ್ಕೆ ಒಳಪಡುವುದಿಲ್ಲ ಎಂದು ಹೇಳಿದ್ದಾರೆ. 

ಇದನ್ನೂ ಓದಿ-ಕೇವಲ 24 ಗಂಟೆಗಳಲ್ಲಿ PPF-SSY ಹೊಂದಿದವರಿಗೆ ಸಿಗಲಿದೆ ಒಂದು ಭಾರಿ ಸಂತಸದ ಸುದ್ದಿ!

ಹಿರಿಯ ನಾಗರಿಕರಿಗೆ ಪ್ರಯೋಜನಗಳು
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು 15 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳಿಗೆ ಹೆಚ್ಚಾಗಲಿದೆ.  ಮಾಸಿಕ ಆದಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ಸಿಂಗಲ್  ಖಾತೆಗಳಿಗೆ 4.5 ಲಕ್ಷದಿಂದ 9 ಲಕ್ಷಕ್ಕೆ ಮತ್ತು ಜಂಟಿ ಖಾತೆಗಳಿಗೆ 7.5 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಾಗಲಿದೆ.

ಇದನ್ನೂ ಓದಿ-EPFO ಚಂದಾದಾರರಿ ಮತ್ತೊಂದು ಸಂತಸದ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!

ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ
0-3 ಲಕ್ಷ - ಶೂನ್ಯ
3-6 ಲಕ್ಷಗಳು - 5%
6-9 ಲಕ್ಷಗಳು- 10%
9-12 ಲಕ್ಷ - 15%
12-15 ಲಕ್ಷಗಳು - 20%
15 ಲಕ್ಷದ ಮೇಲೆ - 30%

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News