ಈ ರೀತಿಯ 2 ರೂಪಾಯಿ ನೋಟು ಇದ್ದರೆ ಕ್ಷಣ ಮಾತ್ರದಲ್ಲಿ ಕೈ ಸೇರಲಿದೆ ಕಂತೆ ಕಂತೆ ಹಣ

ಒಂದು ಮಾಹಿತಿಯ ಪ್ರಕಾರ ಹೀಗೆ ಆಗುವುದು ಸಾಧ್ಯವಿದೆ. ಯಾವುದೇ ಶ್ರಮವಿಲ್ಲದೆ ಮನೆಯಲ್ಲಿ ಕುಳಿತು 5 ಲಕ್ಷಕ್ಕಿಂತ ಹೆಚ್ಚು ಹಣ ಗಳಿಸಬಹುದಾದ ಅವಕಾಶವಿದೆ.

Written by - Ranjitha R K | Last Updated : Feb 3, 2022, 01:57 PM IST
  • ಪುರಾತನ ವಸ್ತುಗಳಾಗುತ್ತವೆ ಆಂಟಿಕ್ ಪೀಸ್
  • ಪುರಾತನ ನೋಟುಗಳು ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡಬಹುದು
  • ಈ ನೋಟ್ ಗಳನ್ನು ಮಾರಾಟ ಮಾಡುವುದು ಹೇಗೆ ?
ಈ ರೀತಿಯ 2 ರೂಪಾಯಿ ನೋಟು ಇದ್ದರೆ ಕ್ಷಣ ಮಾತ್ರದಲ್ಲಿ ಕೈ ಸೇರಲಿದೆ ಕಂತೆ ಕಂತೆ ಹಣ title=
ಪುರಾತನ ನೋಟುಗಳು ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡಬಹುದು (file photo)

ನವದೆಹಲಿ : How to Earn Money: ಅಧಿಕ ಹಣ ಗಳಿಸುವುದು ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಅದು ಕೂಡಾ ಕುಳಿತಲ್ಲೇ ಸುಲಭವಾಗಿ ಹಣ ಸಂಪಾದಿಸುವ ದಾರಿ ಸಿಕ್ಕರೆ ಅದಕ್ಕಿಂತ ಅದೃಷ್ಟ ಬೇಕೇ? ಒಂದು ಮಾಹಿತಿಯ ಪ್ರಕಾರ ಹೀಗೆ ಆಗುವುದು ಸಾಧ್ಯವಿದೆ. ಯಾವುದೇ ಶ್ರಮವಿಲ್ಲದೆ ಮನೆಯಲ್ಲಿ ಕುಳಿತು 5 ಲಕ್ಷಕ್ಕಿಂತ ಹೆಚ್ಚು ಹಣ ಗಳಿಸಬಹುದಾದ ಅವಕಾಶವಿದೆ (Old Note Sale). 

ಪ್ರಾಚೀನ ವಸ್ತುಗಳ ಬಗ್ಗೆ ಕೆಲವರಿಗಿದೆ ಮೋಹ : 
ಅನೇಕ ಜನರು ಪುರಾತನ ವಸ್ತುಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ. ನಿಮಗೂ ಅಂಥ ಅಭ್ಯಾಸವಿದ್ದರೆ  ನಿಮ್ಮ ಅದೃಷ್ಟ ಖುಲಾಯಿಸಿದಂತೆ.  ಹೌದು, ಇತ್ತೀಚಿನ ದಿನಗಳಲ್ಲಿ ಹಳೆಯ ನಾಣ್ಯಗಳು ಮತ್ತು ನೋಟುಗಳ ಖರೀದಿ ಮತ್ತು ಮಾರಾಟದ ಟ್ರೆಂಡ್ ನಡೆಯುತ್ತಿದೆ (Old NOte Sale). ನಿಮ್ಮ ಬಳಿಯೂ ಹಳೆಯ ನಾಣ್ಯಗಳು ಮತ್ತು ನೋಟುಗಳಿದ್ದರೆ, ಅವುಗಳಿಂದ ಸುಲಭವಾಗಿ ಹಣ ಸಂಪಾದನೆ ಸಾಧ್ಯವಾಗುತ್ತದೆ. 

ಇದನ್ನೂ ಓದಿ : ಆಯುರ್ವೇದ ಉತ್ಪನ್ನಗಳ ನಂತರ ಇದೀಗ Credit Card ಬಿಡುಗಡೆ ಮಾಡಿದ ಬಾಬಾ ರಾಮ್ ದೇವ್

2 ರೂಪಾಯಿ ನೋಟಿನ ಬದಲಿಗೆ ಲಕ್ಷ ಲಕ್ಷ ಹಣ : 
ನಿಮ್ಮ ಬಳಿ 2 ರೂಪಾಯಿಯ ಹಳೆಯ ನೋಟ್ ಇದ್ದರೆ, ಅದನ್ನು ಆನ್‌ಲೈನ್ (Online sale) ಹರಾಜಿನಲ್ಲಿ ಮಾರಾಟ ಮಾಡಬಹುದು. ಆದರೆ ಆ ನೋಟಿನಲ್ಲಿ ಏನಾದರೂ ವಿಶೇಷತೆ ಇದ್ದರೆ ಮಾತ್ರ ನಿಮ್ಮಲ್ಲಿರುವ ನೋಟ್ ಲಕ್ಷ ಲಕ್ಷಕ್ಕೆ ಮಾರಾಟವಾಗುತ್ತದೆ ಎನ್ನುವುದು ನೆನಪಿರಲಿ. 

ಏನದು ವಿಶೇಷತೆ ? : 
ವಿಶೇಷವೆಂದರೆ ಈ 2 ರೂಪಾಯಿ ನೋಟಿನ (two rupee note) ಮೇಲೆ 786 ಎಂದು ಬರೆಯಬೇಕು. ಈ ಸರಣಿ ಸಂಖ್ಯೆಯನ್ನು ಹೊಂದಿರುವ ನೋಟಿಗೆ  ಆನ್ಲೈನ್ ಹರಾಜಿನಲ್ಲಿ ಭಾರೀ ಬೇಡಿಕೆ ಇದೆ.  786 ಸಂಖ್ಯೆಯು ತುಂಬಾ ಮಂಗಳಕರವೆಂದು ನಂಬುತ್ತಾರೆ (Lucky Notes). ಈ ಹಿನ್ನೆಲೆಯಲ್ಲಿ ಈ ನೋಟಿನ ಬದಲಿಗೆ ಲಕ್ಷಗಟ್ಟಲೆ ಹಣ ಕೊಟ್ಟು ಅದನ್ನು ಖರೀದಿಸಲು ಜನ ಸಿದ್ದರಿದ್ದಾರೆ. ಇದಲ್ಲದೆ, ಈ ನೋಟಿನ ಬಣ್ಣವು ಗುಲಾಬಿ ಬಣ್ಣದ್ದಾಗಿರಬೇಕು.  ಮತ್ತು ಮಾಜಿ ಆರ್‌ಬಿಐ ಗವರ್ನರ್ ಮನಮೋಹನ್ ಸಿಂಗ್ ಅವರ ಸಹಿಯನ್ನು ಹೊಂದಿರಬೇಕು.

ಎಲ್ಲಿ ಮಾರಾಟ ಮಾಡಬಹುದು ? :
ಈ ನೋಟ್ ಅನ್ನು ಮಾರಾಟ ಮಾಡಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ಆನ್‌ಲೈನ್ ಪ್ಲಾಟ್‌ಫಾರ್ಮ್ eBay ಮತ್ತು ಕ್ಲಿಕ್ ಇಂಡಿಯಾದಂತಹ ಸೈಟ್‌ಗಳಲ್ಲಿ ಮಾರಾಟ ಮಾಡಬಹುದು. ಇಲ್ಲಿ ಜನರು ಸಾಮಾನ್ಯವಾಗಿ ಈ ನೋಟ್ ಗಳಿಗಾಗಿ ಸರ್ಚ್ ಮಾಡುತ್ತಾರೆ.  ಇನ್ನು ಕ್ಲಿಕ್ ಇಂಡಿಯಾದಲ್ಲಿ (Click India)  ವಾಟ್ಸಾಪ್ ಮೂಲಕವೂ  ಈ ನೋಟ್ ಗಳನ್ನು ಮಾರಾಟ ಮಾಡಬಹುದು.

ಇದನ್ನೂ ಓದಿ : ಆಸ್ತಿಯ ಮಾರಾಟ ಮತ್ತು ಖರೀದಿಯ TDS ನಿಯಮದಲ್ಲಿನ ಬದಲಾವಣೆಗಳು ಇವು

ಈ ರೀತಿ ಹಳೆಯ ನೋಟುಗಳನ್ನು ಮಾರಾಟ ಮಾಡಿ :
ನಿಮ್ಮ ಬಳಿ ಈ 2 ರೂಪಾಯಿ ನೋಟು ಇದ್ದರೆ  ಅದನ್ನು Ebay ನಲ್ಲಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು.
ಈ ವೆಬ್‌ಸೈಟ್‌ನಲ್ಲಿ ಈ ಅಪರೂಪದ ನೋಟಿಗೆ ಖರೀದಿದಾರರು ಭಾರೀ  ಮೊತ್ತವನ್ನು ಪಾವತಿಸುತ್ತಿದ್ದಾರೆ.
- ಇದಕ್ಕಾಗಿ  Ebay ನಲ್ಲಿ  ಮಾರಾಟಗಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಿ.
-ಇದರ ನಂತರ,  ನೋಟಿನ ಎರಡೂ ಬದಿಗಳ ಫೋಟೋವನ್ನು ತೆಗೆದು ಅಪ್ಲೋಡ್ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿ.
-ವೆಬ್‌ಸೈಟ್‌ನಲ್ಲಿ ನೀವು ನೀಡಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ.
ನಿಮ್ಮಲ್ಲಿರುವ ನೋಟ್ ಖರೀದಿಸಲು ಇಷ್ಟವಿರುವವರು, ನಿಮ್ಮನ್ನು ಸಂಪರ್ಕಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News