Aadhaar Card: ಯುಐಡಿಎಐ ಬಳಕೆದಾರರಿಗೆ ನಾಲ್ಕು ಬಗೆಯ ಆಧಾರ್ ಕಾರ್ಡ್ಗಳನ್ನು ನೀಡುತ್ತದೆ. ಈ ನಾಲ್ಕು ರೀತಿಯ ಆಧಾರ್ ಕಾರ್ಡ್ಗಳು ಕೂಡ ವಿಭಿನ್ನವಾಗಿದ್ದು, ಈ ಎಲ್ಲಾ ಕಾರ್ಡ್ಗಳು ಸಂಪೂರ್ಣವಾಗಿ ಮಾನ್ಯವಾಗಿರುತ್ತವೆ ಎಂಬುದು ವಿಶೇಷವಾಗಿದೆ.
How to order PVC Aadhaar card from mAadhaar App:ಆಧಾರ್ ಕಾರ್ಡ್ ಕಳೆದು ಹೋದರೆ ಚಿಂತಿಸಬೇಕಾಗಿಲ್ಲ.mAadhaar ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಹೊಸ PVC ಕಾರ್ಡ್ ಅನ್ನು ಆರ್ಡರ್ ಮಾಡಬಹುದು.
PVC Aadhaar Card Order: ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದರೆ ಚಿಂತಿಸುವ ಅಗತ್ಯವಿಲ್ಲ. ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸುವ ಮೂಲಕ PVC ಆಧಾರ್ ಕಾರ್ಡ್ ಅನ್ನು ಪಡೆಯಬಹುದಾಗಿದೆ. ಈ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್ನಲ್ಲಿ, ಹೆಸರು, ಫೋಟೋ, ಜನ್ಮ ದಿನಾಂಕ, ಕಾರ್ಡ್ದಾರರ ವಿಳಾಸ ಮುಂತಾದ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಮಾತ್ರವಲ್ಲ, ಇದರಲ್ಲಿ ಪ್ರತಿಯೊಬ್ಬರ ಬೆರಳಚ್ಚು ಮತ್ತು ಕಣ್ಣುಗಳ ರೆಟಿನಾವನ್ನು ಸ್ಕ್ಯಾನ್ ಮಾಡಲಾಗುತ್ತದೆ.
Aadhaar Update: ಮುಕ್ತ ಮಾರುಕಟ್ಟೆಯಿಂದ ಪಿವಿಸಿ ಆಧಾರ್ ನಕಲನ್ನು ಬಳಸದಂತೆ ಬಳಕೆದಾರರಿಗೆ ಟ್ವೀಟ್ ಮಾಡುವ ಮೂಲಕ ಯುಐಡಿಎಐ ಸಲಹೆ ನೀಡಿದೆ. ಸುರಕ್ಷತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, UIDAI ಅಂತಹ ಆಧಾರ್ ಅನ್ನು ಬಳಸದಂತೆ ಗ್ರಾಹಕರಿಗೆ ಮನವಿ ಮಾಡಿದೆ.
ಯುಐಡಿಎಐ , ಆಧಾರ್ ಕಾರ್ಡ್ಗೆ ಸಂಬಂಧಿಸಿದ ಅನೇಕ ಸೇವೆಗಳನ್ನು ಹೆಚ್ಚು ಉತ್ತಮ ಮತ್ತು ಸುಲಭಗೊಳಿಸಿದೆ. ಆಧಾರ್ ನಲ್ಲಿರುವ ಫೋಟೋ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಾದರೆ, ಸಣ್ಣ ಪ್ರಕ್ರಿಯೆಯ ಮೂಲಕ ಕುಳಿತಲ್ಲಿಂದಲೇ ಮಾಡಿ ಮುಗಿಸಿಕೊಳ್ಳಬಹುದು. ಆದರೆ, ಯುಐಡಿಎಐ ಈಗ ಆಧಾರ್ ಗೆ ಸಂಬಂಧಿಸಿದ ಬಹುಮುಖ್ಯ ಸೇವೆಯೊಂದನ್ನು ಸ್ಥಗಿತಗೊಳಿಸಿದೆ.
ಇಲ್ಲಿಯವರೆಗೆ ಆಧಾರ್ ಕಾರ್ಡ್ ಅನ್ನು ಕಾಗದದಲ್ಲಿ ಮುದ್ರಿಸಲಾಗುತ್ತಿತ್ತು, ಆದರೆ UIDAI ಆಧಾರ್ ಕಾರ್ಡ್ನ ಡಿಜಿಟಲ್ ರೂಪಕ್ಕೂ ಅನುಮತಿ ನೀಡಿದೆ. ಆಧಾರ್ ಕಾರ್ಡನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಸೇವ್ ಮಾಡಿಟ್ಟುಕೊಳ್ಳಬಹುದು. ಅಗತ್ಯವಿದ್ದಾಗ ಅದನ್ನು ಬಳಸಿಕೊಳ್ಳಬಹುದು.
ಪಿವಿಸಿ ಆಧಾರ್ ಕಾರ್ಡ್ ಗೆ ಇನ್ನಷ್ಟು ಹೆಚ್ಚು ಸುರಕ್ಷತೆ ಒದಗಿಸಲು ಸರ್ಕಾರ ಅದರಲ್ಲಿ QR ಕೋಡ್ ಅನ್ನು ಸೇರಿಸಿದೆ. ಈ QR ಕೋಡ್ ಅನ್ನು ನೀವು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದಾಗ ನಿಮ್ಮ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಬರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.