ಕೇಂದ್ರ ಬಜೆಟ್‌ ಬಗ್ಗೆ ಗಡಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ: ಯಾರು ಏನ್ ಹೇಳಿದ್ರು?

ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಪ್ರತಿಕ್ರಿಯಿಸಿ, ಭಾರತ ಬಜೆಟ್ ಕರ್ನಾಟಕದ ಪಾಲಿಗೆ ಸಾಧಾರಣ ಬಜೆಟ್ ಆಗಿದೆ‌. ಮೇಕೆದಾಟು ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳು, ರೈಲ್ವೆ ಯೋಜನೆ ನಿರೀಕ್ಷೆ ಈಡೇರಲಿಲ್ಲ. ಬಿಹಾರ, ಆಂಧ್ರ ಕ್ಕೆ ಸಿಂಹಪಾಲು ಕೊಟ್ಟು ಕರ್ನಾಕಟಕ್ಕೆ ಮಲತಾಯಿ ಧೋರಣೆ ಅನುಸರಿದ್ದಾರೆ ಎಂದರು.

Written by - Yashaswini V | Last Updated : Jul 23, 2024, 04:37 PM IST
  • ವಿತ್ತ ಸಚಿವೆ ನಿರ್ಮಲಾ ಕರ್ನಾಟಕದಿಂದ ಆರಿಸಿ ಹೋಗಿದ್ದರೂ ರಾಜ್ಯಕ್ಕೆ ಬಜೆಟ್ ನಲ್ಲಿ ಏನೇನೂ ಕೊಟ್ಟಿಲ್ಲ.
  • ಎಚ್.ಡಿ. ಕುಮಾರಸ್ವಾಮಿ, ವಿ‌.ಸೋಮಣ್ಣ ಅಪಾರ ನಿರೀಕ್ಷೆ ಹೊರಹಾಕಿದ್ದರು.
  • ಆದರೆ, ಜಿಲ್ಲೆಗೆ, ರಾಜ್ಯಕ್ಕೆ ಬಜೆಟ್ ನಲ್ಲಿ ಏನೇನೂ ಸಿಕ್ಕಿಲ್ಲ - ಜಾನಪದ ಕಲಾವಿದ ಕಹಳೆ ರವಿಚಂದ್ರ ಪ್ರಸಾದ್
ಕೇಂದ್ರ ಬಜೆಟ್‌ ಬಗ್ಗೆ ಗಡಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ: ಯಾರು ಏನ್ ಹೇಳಿದ್ರು? title=

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 3ನೇ ಅವಧಿಯ ಮೊದಲ ಬಜೆಟ್ ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ್ದು ಚಾಮರಾಜನಗರದ ವಿವಿಧ ಮುಖಂಡರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉತ್ತಮ ಬಜೆಟ್: 
ಉದ್ಯಮಿ ಅಜಿತ್ ಮಾತನಾಡಿ, ನಿರ್ಮಲಾ ಸೀತಾರಾಮನ್ (Nirmala Sitharaman) ಉತ್ತಮ ಬಜೆಟ್ ಕೊಟ್ಟಿದ್ದಾರೆ. ಮಧ್ಯಮ ವರ್ಗದ ಜನರಿಗಾಗಿ ಚಿನ್ನ, ಬೆಳ್ಳಿ ಮೇಲಿನ ತೆರಿಗೆ ಕಡಿತಗೊಳಿಸಿದ್ದಾರೆ. ವಿದ್ಯಾರ್ಥಿಗಳಿಗೆ, ಮೊದಲ ಬಾರಿ ಕೆಲಸಕ್ಕೆ ಸೇರುವ ಯುವಜನರಿಗೆ ಕೇಂದ್ರ ಸರ್ಕಾರ ಸಹಾಯಹಸ್ತ ಚಾಚಿರುವುದು ಉತ್ತಮ ಬೆಳವಣಿಗೆ. ಜೊತೆಗೆ, ಸೂರ್ಯ ಘರ್ ಯೋಜನೆ ಮೂಲಕ ಒಂದು ಕೋಟಿ ಮನೆಗಳಿಗೆ ಉಚಿತ ಸೌರಫಲಕ ಅಳವಡಿಸುವ ಯೋಜನೆ ಉತ್ತಮವಾಗಿದೆ‌. ಜಾಗತಿಕ ತಾಪಮಾನ ಇಳಿಸುವ ಮತ್ತು ಪರಿಸರ ಸ್ನೇಹಿ ಭಾಗವಾಗಿ ಪ್ಲಾಸ್ಟಿಕ್ ಮೇಲೆ ತೆರಿಗೆ ಏರಿಕೆ ಸ್ವಾಗತಾರ್ಹ ಎಂದರು.

ಸಾಧಾರಣ ಬಜೆಟ್- ನಿರೀಕ್ಷೆ ಈಡೇರಲಿಲ್ಲ: 
ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಪ್ರತಿಕ್ರಿಯಿಸಿ, ಭಾರತ ಬಜೆಟ್ ಕರ್ನಾಟಕದ ಪಾಲಿಗೆ ಸಾಧಾರಣ ಬಜೆಟ್ (Budget) ಆಗಿದೆ‌. ಮೇಕೆದಾಟು ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳು, ರೈಲ್ವೆ ಯೋಜನೆ ನಿರೀಕ್ಷೆ ಈಡೇರಲಿಲ್ಲ. ಬಿಹಾರ, ಆಂಧ್ರ ಕ್ಕೆ ಸಿಂಹಪಾಲು ಕೊಟ್ಟು ಕರ್ನಾಕಟಕ್ಕೆ ಮಲತಾಯಿ ಧೋರಣೆ ಅನುಸರಿದ್ದಾರೆ ಎಂದರು.

ಇದನ್ನೂ ಓದಿ- Budget 2024: ನಿತೀಶ್-ನಾಯ್ಡುಗೆ ರಿಟರ್ನ್ ಗಿಫ್ಟ್, ಬಿಹಾರ-ಆಂಧ್ರಕ್ಕೆ ಬಜೆಟ್‌ನಲ್ಲಿ ಬಂಪರ್

ರೈತರಿಗೆ ತುಪ್ಪ ಸವರುವ ಕೆಲಸ: 
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಬಜೆಟ್ ಬಗ್ಗೆ ಮಾತನಾಡಿ, ಎಲ್ಲಾ ಬೆಳೆಗಳಿಗೂ ಎಮ್‌ಎಸ್‌ಪಿ ಖಾತ್ರಿ ಯೋಜನೆ,  ರೈತರ ಕೃಷಿ ಸೋಲಾರ್ ಯೋಜನೆಗೆ 90ರಷ್ಟು ಸಹಾಯ ಧನ ನೀಡಬೇಕಿತ್ತು.  ಕೃಷಿ ಯಂತ್ರ ಉಪಕಾರಣಗಳ ಮೇಲಿನ ಜಿ‌ಎಸ್‌ಟಿಯನ್ನು ಶೇಕಡ 5 ಕ್ಕೆ ಇಳಿಕೆ ಮಾಡಬೇಕಿತ್ತು, ಬೆಳೆ ವಿಮೆ ಡಿಜಿಟಲಿಕರಣ ಆದರೂ ವೈಯಕ್ತಿಕ ವಿಮೆಯಂತೆ ಪ್ರತಿಯೊಬ್ಬನ ಹೊಲದ ಬೆಳೆ ವಿಮೆ ನಿಗದಿಯಾಗುವ ರೀತಿ ತಿದ್ದುಪಡಿ ತರಬೇಕಿತ್ತು, ಎಂ ಎಸ್ ಸ್ವಾಮಿನಾಥನ್ ವರದಿಯನ್ನು ತಕ್ಷಣ ಜಾರಿಗೆ ತರಲು ಕ್ರಮವಿಸಬೇಕಿತ್ತು‌. ಆದರೆ, ಇದ್ಯಾವುದನ್ನು ಮಾಡದೇ ಕೇಂದ್ರ ಸರ್ಕಾರ ರೈತನ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡಿ ರೈತರ ಅಭಿವೃದ್ಧಿಗೆ ಪೂರಕವಲ್ಲದ ಬಜೆಟನ್ನು  ಮಂಡಿಸಿದೆ ಎಂದಿದ್ದಾರೆ.

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹಿತಕರ ಬಜೆಟ್: 
ಬಿಜೆಪಿ ಪ್ರಶಿಕ್ಷಣ ಪ್ರಕೋಶದ ರಾಜ್ಯ ಸಮಿತಿ ಸದಸ್ಯ ಬಾಲಸುಬ್ರಹ್ಮಣ್ಯ ಬಜೆಟ್ ನ್ನು ಉತ್ತಮ ಬಜೆಟ್, ಬಡ ಮತ್ತು ಮಧ್ಯಮ ವರ್ಗದವರಿಗೆ ಹಿತಕರ ಬಜೆಟ್ ಎಂದು ಕರೆದಿದ್ದಾರೆ. ಕೇಂದ್ರ ಬಜೆಟ್ ದೇಶದಲ್ಲಿ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಿದೆ ವಿಶೇಷವಾಗಿ ಗ್ರಾಮೀಣ ಅಭಿವೃದ್ಧಿಗೆ 6 ಲಕ್ಷ ಕೋಟಿ ಹಣವನ್ನು ಮೀಸಲಿಟ್ಟಿರುವುದು, ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ಹಣ ಮೀಸಲಿಟ್ಟಿರುವುದು, ಯುವಕರಿಗೆ ಉದ್ಯೋಗದ ಜೊತೆಗೆ ಶಿಷ್ಯವೇತನ ನೀಡುವ ಘೋಷಣೆ, ಆಭರಣ ಪ್ರಿಯರಿಗೆ ಚಿನ್ನ ಬೆಳ್ಳಿಯ ಕಸ್ಟಂ ದರ  ಇಳಿಕೆ ಮಾಡಿರುವುದು, ದೇಶದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ, ಐಟಿ ರಿಟರ್ನ್ಸ್ ಸಲ್ಲಿಕೆ ಮಾಡದವರಿಗೆ ಕ್ರಿಮಿನಲ್ ಮೊಕದ್ದಮೆ ಹಾಕದಂತೆ ವಾಪಸ್ ಪಡೆದಿರುವುದು, ಕೃಷಿಯಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ಆರ್ಥಿಕತೆಗೆ ಉತ್ತಮವಾಗಿದೆ ಎಂದಿದ್ದಾರೆ.

ಇದನ್ನೂ ಓದಿ- Budget 2024: ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಏರಿಕೆ

ರಾಜ್ಯದ ಸಚಿವರು, ಸಂಸದರಿಂದ ಏನು ಪ್ರಯೋಜನ: 
ಜಾನಪದ ಕಲಾವಿದ ಕಹಳೆ ರವಿಚಂದ್ರ ಪ್ರಸಾದ್ ಬಜೆಟ್ ಬಗ್ಗೆ ಮಾತನಾಡಿ, ಇದೊಂದು ಮಲತಾಯಿ ಧೋರಣೆ ಬಜೆಟ್ ಎಂದಿದ್ದಾರೆ‌. ರಾಜ್ಯದ ಐವರು ಸಚಿವರು ಇದ್ದರೂ, ವಿತ್ತ ಸಚಿವೆ ನಿರ್ಮಲಾ ಕರ್ನಾಟಕದಿಂದ  ಆರಿಸಿ ಹೋಗಿದ್ದರೂ ರಾಜ್ಯಕ್ಕೆ ಬಜೆಟ್ ನಲ್ಲಿ ಏನೇನೂ ಕೊಟ್ಟಿಲ್ಲ. ಎಚ್.ಡಿ. ಕುಮಾರಸ್ವಾಮಿ,  ವಿ‌.ಸೋಮಣ್ಣ ಅಪಾರ ನಿರೀಕ್ಷೆ ಹೊರಹಾಕಿದ್ದರು. ಆದರೆ, ಜಿಲ್ಲೆಗೆ, ರಾಜ್ಯಕ್ಕೆ ಬಜೆಟ್ ನಲ್ಲಿ ಏನೇನೂ ಸಿಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.

ಎರಡು ರಾಜ್ಯದ ಬಜೆಟ್: 
ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಸ್ಗರ್ ಮುನ್ನ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿ, ಇದೊಂದು ಎರಡು ರಾಜ್ಯದ ಬಜೆಟ್, ಬಿಹಾರ, ಆಂಧ್ರಕ್ಕೆ ಬಂಪರ್ ಕೊಡುಗೆ ಕೊಟ್ಟು ಕರ್ನಾಟಕ ಮರೆತಿದ್ದಾರೆ. ರಾಜ್ಯದ ಬಿಜೆಪಿ ಸಂಸದರು, ಸಚಿವರು ಏನನ್ನೂ ಕೇಳಿಲ್ಲವೇ ಅಥವಾ ಅವರು ಕೊಟ್ಟಿಲ್ಲವೇ ಗೊತ್ತಿಲ್ಲ. ಕರ್ನಾಟಕಕ್ಕೆ ವಿಶೇಷವಾಗಿ ಏನೂ ಸಿಕ್ಕಿಲ್ಲ. ರೈಲ್ವೆ ಯೋಜನೆ ಬಂದಿಲ್ಲ, ನೀರಾವರಿ ಬಗ್ಗೆ ಮಾತಿಲ್ಲ, ನಗರಾಭಿವೃದ್ಧಿ, ಪ್ರವಾಸೋದ್ಯಮ, ಕೈಗಾರಿಕೆ ಉತ್ತೇಜನಕ್ಕೆ ಏನನ್ನೂ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News