ಬದಲಾದ Bank Account ಮೂಲಕ EPF ನಿಂದ ಹಣ ಪಡೆಯಬೇಕೇ ? ಈ ವಿಧಾನವನ್ನು ಬಳಸಿ

ಇಪಿಎಫ್ ಹಣವನ್ನು ಬೇರೆ ಖಾತೆಗೆ ಬರುವಂತೆ ಮಾಡಬೇಕಾದರೆ, ಆ ಹೊಸ ಖಾತೆಯನ್ನು  ಇಪಿಎಫ್‌ನೊಂದಿಗೆ ಲಿಂಕ್ ಮಾಡಬೇಕು. ನೀವು ಮನೆಯಿಂದಲೇ ಬಹಳ ಸುಲಭವಾಗಿ ಈ ಕೆಲಸವನ್ನು ಮಾಡಬಹುದು.

Written by - Ranjitha R K | Last Updated : Aug 6, 2021, 03:33 PM IST
  • ಇಪಿಎಫ್‌ನಲ್ಲಿ ಬ್ಯಾಂಕ್ ವಿವರಗಳನ್ನು ಅಪ್‌ಡೇಟ್ ಮಾಡುವುದು ಹೇಗೆ?
  • ಬ್ಯಾಂಕ್ ಖಾತೆಯ ಮಾಹಿತಿಯನ್ನು ಇಪಿಎಫ್‌ನಲ್ಲಿ ಈ ರೀತಿ ಬದಲಾಯಿಸಿ
  • ಪಿಎಫ್ ಬ್ಯಾಲೆನ್ಸ್ ಅನ್ನು ಈ ರೀತಿ ಪರಿಶೀಲಿಸಿ
ಬದಲಾದ Bank Account ಮೂಲಕ EPF ನಿಂದ ಹಣ ಪಡೆಯಬೇಕೇ ? ಈ ವಿಧಾನವನ್ನು ಬಳಸಿ  title=
ಇಪಿಎಫ್‌ನಲ್ಲಿ ಬ್ಯಾಂಕ್ ವಿವರಗಳನ್ನು ಅಪ್‌ಡೇಟ್ ಮಾಡುವುದು ಹೇಗೆ? (file photo)

ನವದೆಹಲಿ : EPF Latest News Update: ನಿಮ್ಮ ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಯೋಚಿಸುತ್ತಿದ್ದರೆ, ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ ಹಣವನ್ನು ಹಿಂಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇಪಿಎಫ್‌ಒ (EPFO) ತನ್ನ ಚಂದಾದಾರರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತದೆ, ಆದರೆ ಇದರ ಬಗ್ಗೆ ತಿಳಿದುಕೊಂಡಿರುವುದು ಮುಖ್ಯವಾಗಿರುತ್ತದೆ. 

ಇಪಿಎಫ್‌ನಲ್ಲಿ ಬ್ಯಾಂಕ್ ವಿವರಗಳನ್ನು ಅಪ್‌ಡೇಟ್ ಮಾಡುವುದು ಹೇಗೆ?
ಅತ್ಯಂತ ಮುಖ್ಯವಾದ ವಿಷಯವೆಂದರೆ, ನಿಮ್ಮ ಬ್ಯಾಂಕ್ ಖಾತೆಯ (Bank account) ಮಾಹಿತಿಯನ್ನು ಇಪಿಎಫ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಇಪಿಎಫ್ (EPF) ಹಣವು ಈಗಾಗಲೇ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಬರುತ್ತದೆ. ಆದರೆ, ಇಪಿಎಫ್ ಹಣವನ್ನು ಬೇರೆ ಖಾತೆಗೆ ಬರುವಂತೆ ಮಾಡಬೇಕಾದರೆ, ಆ ಹೊಸ ಖಾತೆಯನ್ನು  ಇಪಿಎಫ್‌ನೊಂದಿಗೆ ಲಿಂಕ್ ಮಾಡಬೇಕು. ನೀವು ಮನೆಯಿಂದಲೇ ಬಹಳ ಸುಲಭವಾಗಿ ಈ ಕೆಲಸವನ್ನು ಮಾಡಬಹುದು.  EPF ಖಾತೆಯಲ್ಲಿರುವ ಬ್ಯಾಂಕ್ ಖಾತೆಯನ್ನು ತಾವಾಗಿಯೇ ಅಪ್‌ಡೇಟ್ ಮಾಡುವ ಸೌಲಭ್ಯವನ್ನು ಉದ್ಯೋಗಿಗಳ ಭವಿಷ್ಯ ನಿಧಿ (EPFO) ತನ್ನ ಚಂದಾದಾರರಿಗೆ ನೀಡುತ್ತದೆ.

ಇದನ್ನೂ ಓದಿ : Central Govt Additional Pension Scheme : ಕೇಂದ್ರ ಸರ್ಕಾರದ ಹೆಚ್ಚುವರಿ ಪಿಂಚಣಿ ಯೋಜನೆ : ನೀವು ತಿಂಗಳಿಗೆ ಗರಿಷ್ಠ 1,25,000 ಪಿಂಚಣಿ ಪಡೆಯುವುದು! ಹೇಗೆ?

ಇಪಿಎಫ್‌ಒ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡುವ ಮೂಲಕ ನೀವು ಈ ಕೆಲಸವನ್ನು ಬಹಳ ಸುಲಭವಾಗಿ ಮಾಡಬಹುದು. 

ಬ್ಯಾಂಕ್ ಖಾತೆಯ ಮಾಹಿತಿಯನ್ನು ಇಪಿಎಫ್‌ನಲ್ಲಿ ಈ ರೀತಿ ಬದಲಾಯಿಸಿ.
1. ಮೊದಲು ಇಪಿಎಫ್‌ಒನ ಯುನಿಫೈಡ್ ಮೆಂಬರ್ ಪೋರ್ಟಲ್‌ https://unifiedportal- mem.epfindia.gov.in/memberinterface/ ಗೆ ಹೋಗಿ UAN ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಮಾಡಿ.
2. ಟಾಪ್ ಮೆನುವಿನಲ್ಲಿರುವ 'Mange' ಆಯ್ಕೆಗೆ ಹೋಗಿ, ನಂತರ ಡ್ರಾಪ್ ಡೌನ್ ಮೆನುವಿನಿಂದ 'KYC' ಆಯ್ಕೆ ಮಾಡಿ.
3. ಇದರ ನಂತರ 'Documents' ಆಯ್ಕೆ ಮಾಡಿ 'Bank' ಮೇಲೆ ಕ್ಲಿಕ್ ಮಾಡಿ.
4. ಬ್ಯಾಂಕ್ ಖಾತೆ ಸಂಖ್ಯೆ, ಹೆಸರು ಮತ್ತು IFSC ಕೋಡ್ ನಮೂದಿಸಿ ಮತ್ತು 'Save' ಮೇಲೆ ಕ್ಲಿಕ್ ಮಾಡಿ.
5. ಈ ಮಾಹಿತಿಯನ್ನು ಉದ್ಯೋಗದಾತರು ಅನುಮೋದಿಸಿದ ನಂತರ, ಅಪ್ಡೇಟೆಡ್ ಬ್ಯಾಂಕ್ ವಿವರಗಳು ಅನುಮೋದಿತ KYC ವಿಭಾಗದಲ್ಲಿ ಗೋಚರಿಸುತ್ತವೆ.
6. ಈಗ ನಿಮ್ಮ ಉದ್ಯೋಗದಾತರಿಗೆ ಡಾಕ್ಯುಮೆಂಟ್ ಪ್ರೂಫ್ ಅನ್ನು ಸಲ್ಲಿಸಿ ನಿಮ್ಮ ಉದ್ಯೋಗದಾತರು ನಿಮ್ಮ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿದಾಗ 'KYC pending for approval' ಬದಲಾಗಿ  'Digitally Approved KYC.' ಕಾಣಿಸುತ್ತದೆ. 
7. ನಿಮ್ಮ ಉದ್ಯೋಗದಾತರು ನಿಮ್ಮ ದಾಖಲೆಗಳನ್ನು ಅನುಮೋದಿಸಿದಾಗ,  ಕೆವೈಸಿಯ ಡಿಜಿಟಲ್ ಅನುಮೋದನೆಯ ಬಗ್ಗೆ ನಿಮಗೆ ಮೆಸೇಜ್ ಬರುತ್ತದೆ.

 Bumper Offer! LPG ಬುಕಿಂಗ್ ಮೇಲೆ ಪಡೆಯಿರಿ 2700 ರೂಪಾಯಿಗಳ ಲಾಭ ..!

ಪಿಎಫ್ ಬ್ಯಾಲೆನ್ಸ್ ಅನ್ನು ಈ ರೀತಿ ಪರಿಶೀಲಿಸಿ
1. EPFO ​​ಸದಸ್ಯ ವೆಬ್‌ಸೈಟ್ www.epfindia.gov.in ಗೆ ಭೇಟಿ ನೀಡಿ.
2. ಈಗ 'Our Services'  ಟ್ಯಾಬ್‌ನಿಂದ ''For Employees ಆಯ್ಕೆಯನ್ನು ಕ್ಲಿಕ್ ಮಾಡಿ.
3. ಸದಸ್ಯServices'  ಟ್ಯಾಬ್‌ನಿಂದ 'Member Passbook' ಮೇಲೆ ಕ್ಲಿಕ್ ಮಾಡಿ.
4. ಇದರ ನಂತರ ಲಾಗಿನ್ ಮಾಡಲು UAN ಮತ್ತು ಪಾಸ್ವರ್ಡ್ ಅನ್ನು ನಮೂದಿಸಿದರೆ PF ಖಾತೆಯ ಪಾಸ್ ಬುಕ್ ಅನ್ನು ನೋಡಬಹುದು 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News