Budget 2024: ಕೇಂದ್ರ ಬಜೆಟ್‌ 2024-25ರಲ್ಲಿ ಯಾವುದು ದುಬಾರಿ? ಯಾವುದು ಅಗ್ಗ? ಇಲ್ಲಿದೆ ಸಂಪೂರ್ಣ ವಿವರ

Budget 2024 Cheaper and Costlier: ಈ ಬಾರಿಯ ಬಜೆಟ್ 2024 ರಲ್ಲಿ ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ಯಾವ ವಸ್ತುಗಳು ದುಬಾರಿಯಾಗಿವೆ ಎಂಬುದನ್ನು ತಿಳಿಯೋಣ

Written by - Bhavishya Shetty | Last Updated : Jul 23, 2024, 05:59 PM IST
    • ಮೋದಿ ಸರ್ಕಾರದ 3.0 ರ ಮೊದಲ ಸಾಮಾನ್ಯ ಬಜೆಟ್ (ಕೇಂದ್ರ ಬಜೆಟ್ 2024) ಮಂಡಿಸಿದ್ದಾರೆ
    • ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ಯಾವ ವಸ್ತುಗಳು ದುಬಾರಿಯಾಗಿವೆ?
    • ಬಜೆಟ್‌ʼನಲ್ಲಿ ನಿರ್ಮಲಾ ಸೀತಾರಾಮನ್ ವಿವಿಧ ಕ್ಷೇತ್ರಗಳಿಗೆ ಹಲವು ಘೋಷಣೆಗಳನ್ನು ಮಾಡಿದ್ದಾರೆ
Budget 2024: ಕೇಂದ್ರ ಬಜೆಟ್‌ 2024-25ರಲ್ಲಿ ಯಾವುದು ದುಬಾರಿ? ಯಾವುದು ಅಗ್ಗ? ಇಲ್ಲಿದೆ ಸಂಪೂರ್ಣ ವಿವರ title=
File Photo

Budget 2024 Cheaper and Costlier: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮೋದಿ ಸರ್ಕಾರದ 3.0 ರ ಮೊದಲ ಸಾಮಾನ್ಯ ಬಜೆಟ್ (ಕೇಂದ್ರ ಬಜೆಟ್ 2024) ಮಂಡಿಸಿದ್ದಾರೆ. ಬಜೆಟ್‌ʼನಲ್ಲಿ ನಿರ್ಮಲಾ ಸೀತಾರಾಮನ್ ವಿವಿಧ ಕ್ಷೇತ್ರಗಳಿಗೆ ಹಲವು ಘೋಷಣೆಗಳನ್ನು ಮಾಡಿದ್ದು, ಇದು ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ. 

ಇದನ್ನೂ ಓದಿ:  ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ !ಚಿನ್ನಾಭರಣ ಖರೀದಿದಾರರು ನಿರಾಳ

ಇನ್ನು ಈ ಬಾರಿಯ ಬಜೆಟ್ 2024 ರಲ್ಲಿ ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ಯಾವ ವಸ್ತುಗಳು ದುಬಾರಿಯಾಗಿವೆ ಎಂಬುದನ್ನು ತಿಳಿಯೋಣ.

ಬಜೆಟ್ 2024 ರಲ್ಲಿ ಯಾವುದು ಅಗ್ಗ?

  • ಚಿನ್ನ ಬೆಳ್ಳಿ-ಅಗ್ಗ
  • ಸ್ಮಾರ್ಟ್ಫೋನ್ - ಅಗ್ಗ
  • ಮೊಬೈಲ್ ಚಾರ್ಜರ್ - ಅಗ್ಗ
  • ಮೊಬೈಲ್ ಬ್ಯಾಟರಿ - ಅಗ್ಗ
  • ಎಲೆಕ್ಟ್ರಿಕ್ ವಾಹನಗಳು - ಅಗ್ಗ
  • ಲಿಥಿಯಂ ಬ್ಯಾಟರಿ - ಅಗ್ಗ
  • ಕ್ಯಾನ್ಸರ್ ಔಷಧಿಗಳು - ಅಗ್ಗ
  • ಪ್ಲಾಟಿನಂ - ಅಗ್ಗ
  • ಮೀನು ಊಟ - ಅಗ್ಗ
  • ಚರ್ಮದ ವಸ್ತುಗಳು - ಅಗ್ಗ
  • ರಾಸಾಯನಿಕ ಪೆಟ್ರೋಕೆಮಿಕಲ್- ಅಗ್ಗ
  • ಎಕ್ಸ್-ರೇ ಉಪಕರಣಗಳು - ಅಗ್ಗ
  • ಶೂ-ಚಪ್ಪಲಿಗಳು- ಅಗ್ಗ
  • ಅಗತ್ಯ ಖನಿಜಗಳು - ಅಗ್ಗ

ಯಾವುದು ದುಬಾರಿ?

  • ವಿಮಾನ ಪ್ರಯಾಣ - ದುಬಾರಿ
  • ಸಿಗರೇಟ್ - ದುಬಾರಿ
  • PVC ಫ್ಲೆಕ್ಸ್ ಬ್ಯಾನರ್- ದುಬಾರಿ
  • ಪ್ಲಾಸ್ಟಿಕ್ ವಸ್ತುಗಳು - ದುಬಾರಿ
  • ಪೆಟ್ರೋಕೆಮಿಕಲ್ಸ್, ಅಮೋನಿಯಂ ನೈಟ್ರೇಟ್ - ದುಬಾರಿ

ಇದನ್ನೂ ಓದಿ: Budget 2024: ನಿತೀಶ್-ನಾಯ್ಡುಗೆ ರಿಟರ್ನ್ ಗಿಫ್ಟ್, ಬಿಹಾರ-ಆಂಧ್ರಕ್ಕೆ ಬಜೆಟ್‌ನಲ್ಲಿ ಬಂಪರ್

ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿತ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ʼನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಶೇಕಡಾ 4 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಶೇಕಡಾ 10 ರಿಂದ ಶೇಕಡಾ 6 ಕ್ಕೆ ಇಳಿಸಲಾಗಿದೆ. ಅಗ್ರಿ ಸೆಸ್ ಜೊತೆಗೆ ಒಟ್ಟು ಸುಂಕವನ್ನು ಶೇಕಡಾ 15 ರಿಂದ ಶೇಕಡಾ 11 ಕ್ಕೆ ಇಳಿಸಲಾಗಿದೆ. ಬಜೆಟ್ ಘೋಷಣೆ ಬಳಿಕ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಸುಮಾರು 2 ಸಾವಿರ ರೂ.ನಷ್ಟು ಕುಸಿದಿದ್ದರೆ, ಬೆಳ್ಳಿ ಬೆಲೆಯೂ ರೂ.3 ಸಾವಿರಕ್ಕೂ ಹೆಚ್ಚು ಇಳಿಕೆಯಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News