ನವದೆಹಲಿ : ಇತ್ತೀಚಿನ ದಿನಗಳಲ್ಲಿ UPI ಪಾವತಿಗಳ ಮೇಲೆಯೇ ಜನ ಹೆಚ್ಚು ಅವಲಂಬಿತರಾಗಿರುತ್ತಾರೆ. ಅನೇಕ ಬಾರಿ, UPI ಮೂಲಕ ಪಾವತಿ (UPI Payment) ಮಾಡುವ ವೇಳೆ, ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಧಾನವಾದ ಇಂಟರ್ನೆಟ್ ವೇಗ ಅಥವಾ ಕಳಪೆ ನೆಟ್‌ವರ್ಕ್‌ನಿಂದಾಗಿ (Poor network) ಪೇಮೆಂಟ್ ವಿಫಲವಾಗಬಹುದು. ಆದರೆ ಆಫ್‌ಲೈನ್‌ನಲ್ಲಿಯೂ UPI ಪೇಮೆಂಟ್ ಮಾಡುವುದು ಸಾಧ್ಯವಾಗುತ್ತದೆ. ಬಳಕೆದಾರರು ತಮ್ಮ ಫೋನ್‌ಗಳ ಮೂಲಕ ಪಾವತಿಗಳನ್ನು ಮಾಡಬಹುದಾದ್ದರಿಂದ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು.
ಯಾವುದೇ ಸಮಸ್ಯೆಯಿಲ್ಲದೆ ಪಾವತಿ ಮಾಡಲು ಕನಿಷ್ಟ ನೆಟ್‌ವರ್ಕ್ ಕವರೇಜ್ ಇದ್ದರು ಸಾಕಾಗುತ್ತದೆ. ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಫೋನ್‌ನಲ್ಲಿ *99# USSD ಕೋಡ್ ಅನ್ನು ಡಯಲ್ ಮಾಡಬೇಕು. ನಿಮ್ಮ ಫೋನ್‌ನನಲ್ಲಿ *99# ಅನ್ನು ಹಾಕಿ Dial ಬಟನ್ ಮೇಲೆ ಒತ್ತಿ. ಒಮ್ಮೆ ನೀವು ನಿಮ್ಮ ನೋಂದಾಯಿತ ಮೊಬೈಲ್ ಫೋನ್‌ನಿಂದ *99# ಅನ್ನು ಡಯಲ್ ಮಾಡಿ. ಇಷ್ಟಾದ ಮೇಲೆ ನಿಮ್ಮ ಬ್ಯಾಂಕ್ (Bank) ಅನ್ನು ಆಯ್ಕೆ ಮಾಡಲು ಪಾಪ್-ಅಪ್ ಬರುತ್ತದೆ. ಆಗ ಪಟ್ಟಿಯಿಂದ ಬ್ಯಾಂಕ್ ಖಾತೆಯನ್ನು (Bank account) ಆಯ್ಕೆ ಮಾಡಬೇಕು.
ಇದನ್ನೂ ಓದಿ : ಜನವರಿ 1 ರಿಂದ ಬ್ಯಾಂಕಿನ ನಿಯಮಗಳಲ್ಲಿ ಬದಲಾವಣೆ , 10 ಸಾವಿರಕ್ಕಿಂತ ಹೆಚ್ಚು ಠೇವಣಿ ಇಟ್ಟರೆ ವಿಧಿಸಲಾಗುತ್ತದೆ ಶುಲ್ಕ
1.ಈಗ, ನಿಮ್ಮ UPI ಪಿನ್ ಅನ್ನು ರಚಿಸಿ ಮತ್ತು ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ ಆರು ಅಂಕೆಗಳನ್ನು ಹಾಕಿ.
2. ನಿಮ್ಮ ಡೆಬಿಟ್ ಕಾರ್ಡ್‌ನ ಮುಕ್ತಾಯ ದಿನಾಂಕವನ್ನು ನಮೂದಿಸಿ.
3. ನಿಮ್ಮ ಆರು-ಅಂಕಿಯ UPI ಪಿನ್ ಅನ್ನು ಹಾಕಿ ಕಂಫರ್ಮ್ ಮಾಡಿಕೊಳ್ಳಿ.
4. ಈಗ ನಿಮ್ಮ UPI ಪಿನ್ ಅನ್ನು ಹೊಂದಿಸಲಾಗುವುದು.
5. ಈಗ ಮತ್ತೆ *99# ಅನ್ನು ಡಯಲ್ ಮಾಡಿ,
6. ನೀವು ಬಹಳಷ್ಟು ಆಯ್ಕೆಗಳಿರುವ ಪಟ್ಟಿಯನ್ನು ಪಡೆಯುತ್ತೀರಿ.
7. ನೀವು ಹಣವನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದರೆ 1 ನಂಬರ್ ಟೈಪ್ ಮಾಡಿ ಮತ್ತು ಸೆಂಡ್ ಮಾಡಿ.
8. ಪಾವತಿ ಸ್ವೀಕರಿಸುವವರ ಸಂಖ್ಯೆಯನ್ನು ಟೈಪ್ ಮಾಡಿ ಸೆಂಡ್ ಮಾಡಿ.
9. ಈಗ, ನಿಮ್ಮ UPI ಖಾತೆಯೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಸೆಂಡ್ ಮೇಲೆ ಟ್ಯಾಪ್ ಮಾಡಿ.
10. ಮೊತ್ತವನ್ನು ಹಾಕಿ ಸೆಂಡ್ ಮಾಡಿ.
11. ವಹಿವಾಟನ್ನು ಪೂರ್ಣಗೊಳಿಸಲು ನಿಮ್ಮ UPI ಪಿನ್ ನಮೂದಿಸಿ. ಇಷ್ಟು ಮಾಡಿದರೆ ಸಾಕು ಇಂಟರ್ನೆಟ್ ಇಲ್ಲದೆಯೇ ನಿಮ್ಮ UPI ವಹಿವಾಟು ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ : Wedding : ಕೊರೋನಾ ಸಮಯದಲ್ಲಿ ಮದುವೆ ಕ್ಯಾನ್ಸಲ್ ಮಾಡಿದ್ರೆ ಸಿಗಲಿದೆ ₹10 ಲಕ್ಷ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ